ನ್ಯೂಯಾರ್ಕ್: ಅರ್ಜೆಂಟೀನಾ ತಂಡ ಸತತ ಎರಡನೇ ಬಾರಿಗೆ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್‌ಗೆ ಏರಿದೆ. ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಛಲದಲ್ಲಿರುವ ಈ ತಂಡಕ್ಕೆ ಭಾನುವಾರ ನಡೆಯುವ ಅಂತಿಮ ಹಣಾಹಣಿಯಲ್ಲಿ ಸ್ಪೇನ್ ಪಡೆ ಸವಾಲೊಡ್ಡಲಿದೆ.
'ಚಾಂಪಿಯನ್' ಬಳಗದ ಮುಂದಾಳು, 39 ವರ್ಷದ ಆಟಗಾರ ಲಯೊನೆಲ್ ಮೆಸ್ಸಿ ಅವರಿಗೆ ಇದು ಕೊನೇ ವಿಶ್ವಕಪ್ ಆಗುವ ಸಾಧ್ಯತೆ ದಟ್ಟವಾಗಿದೆ.
ಹಾಗಾಗಿ, ಫೈನಲ್‌ನಲ್ಲಿ ತಂಡ ಮುನ್ನ ನಡೆಸುತ್ತಿರುವ ಅವರನ್ನು ಬೆಂಬಲಿಸುವಂತೆ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ ಅರ್ಜೆಂಟೀನಾ ಕೋಚ್ ಲಯೊನೆಲ್ ಸ್ಕಾಲೊನಿ.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
FIFA: ಆರು ದಶಕಗಳಿಂದ ಯಾವ ತಂಡಕ್ಕೂ ಸಾಧ್ಯವಾಗದ ದಾಖಲೆ ಬರೆಯಲು ಅರ್ಜೆಂಟೀನಾ ಸಜ್ಜು
ಒಂದು ಸಾಲಿನಲ್ಲಿಅರ್ಜೆಂಟೀನಾ ತಂಡವು ಸತತ ಎರಡನೇ ಬಾರಿಗೆ ಫಿಫಾ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದು, ದಂತಕಥೆ ಲಯೊನೆಲ್ ಮೆಸ್ಸಿ ನೇತೃತ್ವದಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಲು ಸಜ್ಜಾಗಿದೆ.
ಪ್ರಮುಖ ಪ್ರಶ್ನೋತ್ತರ
ಅರ್ಜೆಂಟೀನಾ ಫೈನಲ್ ತಲುಪಿದ್ದು ಹೇಗೆ?
ಅರ್ಜೆಂಟೀನಾ ತಂಡವು ಈಜಿಪ್ಟ್, ಸ್ವಿಟ್ಜರ್ಲೆಂಡ್ ಮತ್ತು ಇಂಗ್ಲೆಂಡ್ ತಂಡಗಳನ್ನು ಮಣಿಸುವ ಮೂಲಕ ಫಿಫಾ ವಿಶ್ವಕಪ್‌ನ ಅಂತಿಮ ಹಂತವನ್ನು ತಲುಪಿದೆ.
ಲಯೊನೆಲ್ ಮೆಸ್ಸಿ ಅವರ ವಿಶೇಷತೆಗಳೇನು?
ಮೆಸ್ಸಿ ಆರು ವಿಶ್ವಕಪ್ ಟೂರ್ನಿಗಳಲ್ಲಿ 21 ಗೋಲುಗಳನ್ನು ಬಾರಿಸುವ ಮೂಲಕ ವಿಶ್ವಕಪ್ ಇತಿಹಾಸದಲ್ಲೇ ಅತಿಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಕೋಚ್ ಲಯೊನೆಲ್ ಸ್ಕಾಲೊನಿ ಅವರ ಅಭಿಪ್ರಾಯವೇನು?
ಮೆಸ್ಸಿ ಫುಟ್‌ಬಾಲ್‌ನ ದಂತಕಥೆ ಎಂದು ಬಣ್ಣಿಸಿರುವ ಕೋಚ್ ಸ್ಕಾಲೊನಿ, 39ನೇ ವಯಸ್ಸಿನಲ್ಲೂ ತಂಡವನ್ನು ಫೈನಲ್‌ಗೆ ಕೊಂಡೊಯ್ದ ಅವರ ಸಾಧನೆ ಅದ್ಭುತ ಎಂದು ಶ್ಲಾಘಿಸಿದ್ದಾರೆ.
ಅರ್ಜೆಂಟೀನಾ ತಂಡದ ಇತ್ತೀಚಿನ ಸಾಧನೆಗಳೇನು?
2021 ಮತ್ತು 2024ರಲ್ಲಿ ಕೋಪಾ ಅಮೆರಿಕ ಪ್ರಶಸ್ತಿಗಳನ್ನು ಗೆದ್ದಿರುವ ಅರ್ಜೆಂಟೀನಾ, 2022ರ ವಿಶ್ವಕಪ್ ವಿಜೇತ ತಂಡವಾಗಿ ಸತತ ಯಶಸ್ಸನ್ನು ಕಾಣುತ್ತಿದೆ.
ಮೆಸ್ಸಿ ಅವರ ನಿವೃತ್ತಿ ನಿರ್ಧಾರದ ಹಿನ್ನೆಲೆ ಏನು?
2015ರ ಕೋಪಾ ಅಮೆರಿಕ ಫೈನಲ್ ಸೋಲಿನಿಂದ ಬೇಸತ್ತು ಅಂತರರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿ ಘೋಷಿಸಿದ್ದ ಮೆಸ್ಸಿ, ನಂತರ ಮರಳಿ ಬಂದು ತಂಡವನ್ನು ಉತ್ತುಂಗಕ್ಕೆ ಏರಿಸಿದ್ದಾರೆ.
ಪ್ರಮುಖ ಅಂಕಿಅಂಶಗಳು
39ಲಯೊನೆಲ್ ಮೆಸ್ಸಿ ಅವರ ವಯಸ್ಸು21ವಿಶ್ವಕಪ್‌ನಲ್ಲಿ ಮೆಸ್ಸಿ ಗಳಿಸಿದ ಗೋಲುಗಳು2021, 2024ಕೋಪಾ ಅಮೆರಿಕ ಪ್ರಶಸ್ತಿ ಗೆದ್ದ ವರ್ಷಗಳು
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಅರ್ಜೆಂಟೀನಾ ತಂಡವು 2022ರ ವಿಶ್ವಕಪ್ ಹಾಗೂ ಸತತ ಎರಡು ಬಾರಿ (2021, 2024) ಕೋಪಾ ಅಮೆರಿಕ ಪ್ರಶಸ್ತಿ ಗೆಲ್ಲುವಲ್ಲಿ ಮೆಸ್ಸಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದಿರುವ ಸ್ಕಾಲೊನಿ, 'ಅವರು (ಲಯೊನೆಲ್ ಮೆಸ್ಸಿ) ಇತಿಹಾಸ ಬರೆದಿದ್ದಾರೆ. ಅವರೊಬ್ಬ ದಂತಕಥೆ' ಎಂದು ಬಣ್ಣಿಸಿದ್ದಾರೆ.
ವಿದಾಯ ಹೇಳಿ ವಾಪಸ್..
2015ರಲ್ಲಿ ನಡೆದ 'ಕೋಪಾ ಅಮೆರಿಕ' ಟೂರ್ನಿಯ ಫೈನಲ್‌ನಲ್ಲಿ ಅರ್ಜೆಂಟೀನಾ ಪಡೆಗೆ ಚಿಲಿ ವಿರುದ್ಧ ಎದುರಾದ ಸೋಲು ಎದುರಾಗಿತ್ತು. ಈ ಟೂರ್ನಿಯಲ್ಲಿ 2021ರ ವರೆಗೆ ಒಮ್ಮೆಯೂ 'ಕಪ್' ಗೆಲ್ಲದ ಮೆಸ್ಸಿ, ಫೈನಲ್‌ನಲ್ಲಿ ಅನುಭವಿಸಿದ ನಾಲ್ಕನೇ ಸೋಲು ಅದಾಗಿತ್ತು. ಇದರಿಂದ ಬೇಸತ್ತು, ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಿದ್ದರು. ಆಗ ಅವರ ವಯಸ್ಸು 29. ಕೆಲ ಸಮಯದ ನಂತರ ನಿವೃತ್ತಿ ನಿರ್ಧಾರವನ್ನು ಹಿಂಪಡೆದು ಆಟದ ಉತ್ತುಂಗಕ್ಕೆ ಏರಿದ್ದಾರೆ.
ಅರ್ಜೆಂಟೀನಾ ತಂಡ ಈ ಬಾರಿ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಈಜಿಪ್ಟ್ (3 - 2), ಕ್ವಾರ್ಟರ್‌ಫೈನಲ್‌ನಲ್ಲಿ ಸ್ವಿಟ್ಜರ್ಲೆಂಡ್ (3 - 1), ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ (2 - 1) ಅನ್ನು ಮಣಿಸಿ ಫೈನಲ್ ತಲುಪಿದೆ.
'ಫುಟ್‌ಬಾಲ್ ಇತಿಹಾಸದಲ್ಲೇ ಮೆಸ್ಸಿ ಅತ್ಯುತ್ತಮ ಆಟಗಾರ ಎಂಬುದು ನಮಗೆ ಹೆಮ್ಮೆ' ಎಂದು ಹರ್ಷ ವ್ಯಕ್ತಪಡಿಸಿರುವ ಸ್ಕಾಲೊನಿ, '39ನೇ ವಯಸ್ಸಿನಲ್ಲೂ ಅವರು ಫೈನಲ್ ತಲುಪಲು ಸಾಧ್ಯವಾಗಿರುವುದು ಅದ್ಭುತ' ಎಂದು ಕೊಂಡಾಡಿದ್ದಾರೆ.
ಇದುವರೆಗೆ ಆರು ವಿಶ್ವಕಪ್ ಟೂರ್ನಿಗಳಲ್ಲಿ ಆಡಿರುವ ಮೆಸ್ಸಿ, 21 ಗೋಲುಗಳನ್ನು ಬಾರಿಸಿದ್ದಾರೆ. ಆ ಮೂಲಕ, ವಿಶ್ವಕಪ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿದ ಆಟಗಾರ ಎನಿಸಿದ್ದಾರೆ.
ದಾಖಲೆಯ ಹೊಸ್ತಿಲಲ್ಲಿ ಅರ್ಜೆಂಟೀನಾ
ಅಂತರರಾಷ್ಟ್ರೀಯ ಮಟ್ಟದಲ್ಲಿ 28 ವರ್ಷಗಳವರೆಗೆ ಪ್ರಶಸ್ತಿ ಬರ ಅನುಭವಿಸಿದ್ದ ಅರ್ಜೆಂಟೀನಾ, 2021ರಲ್ಲಿ 'ಕೋಪಾ ಅಮೆರಿಕ' ಟ್ರೋಫಿ ಗೆದ್ದಿತ್ತು. ಅಲ್ಲಿಂದಾಚೆಗೆ ತಂಡದ ಸಾಧನೆಯ ಹಾದಿಯೇ ಬದಲಾಯಿತು.
1993ರಲ್ಲಿ 'ಯುಇಎಫ್‌ಎ ಕಪ್ ಆಫ್ ಚಾಂಪಿಯನ್ಸ್', 'ಕೋಪಾ ಅಮೆರಿಕ' ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದ ಅರ್ಜೆಂಟೀನಾ ಮತ್ತೆ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು 2021ರಲ್ಲಿ. ಆ ವರ್ಷ ಬ್ರೆಜಿಲ್ ಆತಿಥ್ಯದಲ್ಲಿ ನಡೆದ 'ಕೋಪಾ ಅಮೆರಿಕ' ಟೂರ್ನಿಯಲ್ಲಿ ಚಾಂಪಿಯನ್ ಎನಿಸಿತ್ತು. 2024ರಲ್ಲಿ ಅಮೆರಿಕ ಆತಿಥ್ಯದಲ್ಲಿ ಆ ಟೂರ್ನಿ ನಡೆದಾಗಲೂ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
2022ರ ವಿಶ್ವಕಪ್ ಫೈನಲ್‌ನಲ್ಲಿ ಫ್ರಾನ್ಸ್ ಪಡೆಯನ್ನು ಮಣಿಸಿ ಟ್ರೋಫಿಗೆ ಮುತ್ತಿಕ್ಕುವ ಮೂಲಕ 38 ವರ್ಷಗಳ ವಿಶ್ವಕಪ್ ಬರವನ್ನೂ ನೀಗಿಸಿಕೊಂಡಿತ್ತು. ಅದಕ್ಕೂ ಮೊದಲು ಅರ್ಜೆಂಟೀನಾ ಪಡೆ ಮೆಕ್ಸಿಕೊ ಆತಿಥ್ಯದಲ್ಲಿ ನಡೆದ 1986ರ ವಿಶ್ವಕಪ್‌ನಲ್ಲಿ ಪ್ರಶಸ್ತಿ ಜಯಿಸಿತ್ತು.
'ನಾವು ಊಹಿಸಲೂ ಸಾಧ್ಯವಾಗದ್ದನ್ನು ಮೆಸ್ಸಿ ಮಾಡಿ ತೋರಿಸಿದ್ದಾರೆ. ಇಷ್ಟು ವರ್ಷಗಳ ಕಾಲ ನಾವು ಇಲ್ಲಿಗೆ (ಫೈನಲ್) ತಲುಪುವುದು ಮತ್ತು ಈ ಮಟ್ಟದಲ್ಲಿ ಆಡುವುದು ನಮ್ಮ ಪಾಲಿಗೆ ಸುಲಭವಾಗಿರಲಿಲ್ಲ. ನಾವು ಈ ಬಾರಿಯೂ ಗೆಲ್ಲಬಹುದು; ಮತ್ತೆ ಗೆಲ್ಲುತ್ತೇವೆ ಎಂಬ ಭಾವನೆ ಮೂಡಿದೆ' ಎಂದು ಫೈನಲ್ ಪಂದ್ಯಕ್ಕೂ ಮುನ್ನ ಸ್ಕಾಲೊನಿ ಹೇಳಿದ್ದಾರೆ.

