ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಫಿಫಾ ವೇದಿಕೆಗೆ 'ಘೆಟ್ಟೊ ಕಿಡ್ಸ್': ಶಕೀರಾಗೆ ಬಾಲ್ಯ ನೆನಪಿಸಿದ ಉಗಾಂಡ ಸ್ಲಂ ಹುಡುಗರು
ಒಂದು ಸಾಲಿನಲ್ಲಿಉಗಾಂಡದ ಬಡ ಮಕ್ಕಳ 'ಘೆಟ್ಟೊ ಕಿಡ್ಸ್' ತಂಡವು ತಮ್ಮ ಕಠಿಣ ಪರಿಶ್ರಮದಿಂದ ಫಿಫಾ ವಿಶ್ವಕಪ್ ವೇದಿಕೆಯಲ್ಲಿ ಶಕೀರಾ ಅವರೊಂದಿಗೆ ಪ್ರದರ್ಶನ ನೀಡುವ ಅವಕಾಶ ಪಡೆದಿದೆ.
ಪ್ರಮುಖ ಪ್ರಶ್ನೋತ್ತರ
ಘೆಟ್ಟೊ ಕಿಡ್ಸ್ ತಂಡವು ಯಾವುದು?
ಇದು ಉಗಾಂಡದ ರಾಜಧಾನಿ ಕಂಪಾಲದಲ್ಲಿರುವ ಲಾಭರಹಿತ ಸಂಸ್ಥೆ 'ಟ್ರಿಪ್ಲೆಟ್ಸ್ ಘೆಟ್ಟೊ ಕಿಡ್ಸ್'ನ ಭಾಗವಾಗಿದ್ದು, ನಿರ್ಗತಿಕ ಮತ್ತು ಅನಾಥ ಮಕ್ಕಳಿಗೆ ನೃತ್ಯ ಹಾಗೂ ಕಲೆಯ ಮೂಲಕ ಹೊಸ ಭವಿಷ್ಯ ನೀಡುತ್ತಿದೆ.
ಈ ತಂಡ ಫಿಫಾ ವೇದಿಕೆಗೆ ಆಯ್ಕೆಯಾಗಿದ್ದು ಹೇಗೆ?
ಶಕೀರಾ ಅವರ ಅಧಿಕೃತ ವಿಶ್ವಕಪ್ ಗೀತೆ 'ದೈ ದೈ'ಗೆ ಈ ಮಕ್ಕಳು ನೃತ್ಯ ಮಾಡಿದ ವೀಡಿಯೊವನ್ನು ನೋಡಿ, ಪ್ರಭಾವಿತರಾದ ಶಕೀರಾ ಅವರಿಗೇ ಸ್ವತಃ ನೃತ್ಯ ಮಾಡಲು ಆಹ್ವಾನ ನೀಡಿದ್ದಾರೆ.
ಘೆಟ್ಟೊ ಕಿಡ್ಸ್ ಈ ಮಟ್ಟಕ್ಕೆ ಬೆಳೆದದ್ದು ಹೇಗೆ?
2014ರಲ್ಲಿ ಆರಂಭವಾದ ಈ ತಂಡ ತನ್ನ ಬೀದಿ ನೃತ್ಯದ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ನಂತರ ಬ್ರಿಟನ್ಸ್ ಗಾಟ್ ಟ್ಯಾಲೆಂಟ್ ನಂತಹ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಮಿಂಚಿತು.
ಶಕೀರಾ ಈ ಮಕ್ಕಳನ್ನು ಆಯ್ಕೆ ಮಾಡಲು ಕಾರಣವೇನು?
ಶಕೀರಾ ಅವರ ಸ್ವಂತ ಬಾಲ್ಯದ ಬಡತನದ ನೆನಪುಗಳನ್ನು ಈ ಮಕ್ಕಳು ಮರುಕಳಿಸೆದಿದ್ದು, ತಳಮಟ್ಟದ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ನೃತ್ಯ ಪ್ರದರ್ಶನದ ಉದ್ದೇಶಗಳೇನು?
ಈ ಪ್ರದರ್ಶನ ಕೇವಲ ಮನರಂಜನೆಯಷ್ಟೇ ಅಲ್ಲದೆ, ಅನಾಥ ಮಕ್ಕಳ ಶಿಕ್ಷಣಕ್ಕೆ ಹಣ ಸಂಗ್ರಹಿಸುವುದು ಮತ್ತು ಆಫ್ರಿಕಾದ ಯುವಕರಿಗೆ ಸ್ಫೂರ್ತಿ ತುಂಬುವ ಗುರಿಯನ್ನು ಹೊಂದಿದೆ.
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಆತಿಥ್ಯದಲ್ಲಿ ನಡೆಯತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯು ಅಂತಿಮ ಹಂತಕ್ಕೆ ತಲುಪಿದೆ. ಇಂದು (ಭಾನುವಾರ) ಮಧ್ಯರಾತ್ರಿ ನಡೆಯುವ ಫೈನಲ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳು ಕಾದು ಕುಳಿತಿದ್ದಾರೆ.
ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಮತ್ತು ಸ್ಪೇನ್ ಮುಖಾಮುಖಿಯಾಗಲಿದ್ದು, ಈ ಮಹಾಕಾಳಗಕ್ಕೆ ನ್ಯೂಯಾರ್ಕ್‌ನ ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ. ಸಮಾರೋಪ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಬಿಟಿಎಸ್ ತಂಡ, ಜಸ್ಟಿನ್ ಬೈಬರ್, ಶಕೀರಾ ಸೇರಿದಂತೆ ಪಾಪ್ ತಾರೆಯರು ಪ್ರೇಕ್ಷಕರನ್ನು ರಂಜಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇವರೊಟ್ಟಿಗೆ ಈ ಬಾರಿ, ಉಗಾಂಡದ 'ಘೆಟ್ಟೊ ಕಿಡ್ಸ್' ಕೂಡ ಸೇರಿಕೊಳ್ಳುತ್ತಿದ್ದಾರೆ.
ಕಂಪಾಲದ ಬೀದಿಯಿಂದ..
ಈ 'ಘೆಟ್ಟೊ ಕಿಡ್ಸ್' ಉಗಾಂಡದ ರಾಜಧಾನಿ ಕಂಪಾಲದ ನೃತ್ಯ ತಂಡ. ಇದು, ಉಗಾಂಡದ ಲಾಭರಹಿತ ಸಂಸ್ಥೆ 'ಟ್ರಿಪ್ಲೆಟ್ಸ್ ಘೆಟ್ಟೊ ಕಿಡ್ಸ್'ನ (ಟಿಜಿಕೆ) ಭಾಗವಾಗಿದ್ದು, ನಿರ್ಗತಿಕ, ಅನಾಥ ಮಕ್ಕಳ ಸಂಗೀತ, ನೃತ್ಯ ಮತ್ತು ಕಲೆಗೆ ನೀರೆರೆಯುತ್ತಿದೆ.
ಸುಸಜ್ಜಿತ ಉಪಕರಣಗಳಿಲ್ಲದೆ, ಬರಿಗಾಲಲ್ಲೇ ಕುಣಿಯುವ ಮಕ್ಕಳ ಬೀದಿ ನೃತ್ಯವಾಗಿ 'ಘೆಟ್ಟೊ ಕಿಡ್ಸ್' ಅಭಿಯಾನ 2014ರಲ್ಲಿ ಆರಂಭವಾಯಿತು. ಉಗಾಂಡದ ರಾಷ್ಟ್ರೀಯ ಸಂಗೀತಗಾರರ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಎಡ್ಡಿ ಕೆಂಝೋ ಅವರು 'ಘೆಟ್ಟೊ ಕಿಡ್ಸ್' ನೃತ್ಯ ಮಾಡಿದ್ದ 'ಸಿತ್ಯಾ ಲಾಸ್' ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಆ ವಿಡಿಯೊವನ್ನು ಯುಟ್ಯೂಬ್‌ನಲ್ಲಿ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.
ಫಿಫಾ ವಿಶ್ವಕಪ್: ಯಾರ ಮಡಿಲಿಗೆ ವಿಶ್ವಕಪ್ ಕಿರೀಟ?ಫಿಫಾ ವಿಶ್ವಕಪ್ ಫೈನಲ್: ಅರ್ಜೆಂಟೀನಾ vs ಸ್ಪೇನ್ ಆಸಕ್ತಿದಾಯಕ ಅಂಶಗಳುಅಲ್ಲಿಂದಾಚೆಗೆ ಆ ಮಕ್ಕಳ ಹಣೆಬರಹವೇ ಬದಲಾಯಿತು. ಬಡತನದ ನಡುವೆಯೂ ನೃತ್ಯದ ಮೂಲಕ ಜಗತ್ತಿನ ಗಮನ ಸೆಳೆದರು. ದಿನಕಳೆದಂತೆ ಅವರ ಹೆಜ್ಜೆ ಗುರುತುಗಳು ಅಂತರರಾಷ್ಟ್ರೀಯ ವೇದಿಕೆಗಳಲ್ಲಿಯೂ ಮೂಡಿದವು. ಯುರೋಪಿನ ಫುಟ್‌ಬಾಲ್ ಕ್ರೀಡಾಂಗಣಗಳು, ಜಾಗತಿಕ ಟ್ಯಾಲೆಂಟ್ ಶೋಗಳವರೆಗೂ ಪಾದ ಬೆಳೆಸಿದರು. 2023ರಲ್ಲಿ 'ಬ್ರಿಟನ್ಸ್ ಗಾಟ್ ಟ್ಯಾಲೆಂಟ್'ನಲ್ಲಿ ಸ್ಪರ್ಧಿಸಿ, ಫೈನಲ್‌ವರೆಗೂ ಸಾಗಿದ್ದರು.
ಪ್ರೇಕ್ಷಕ ಬಳಗವನ್ನು ದೇಶದ ಗಡಿ ಮೀರಿ ವಿಸ್ತರಿಸಿಕೊಂಡರೂ, ಆರಂಭದಿಂದ ಇಲ್ಲಿಯವರೆಗೂ ಅವರಲ್ಲಿರುವ ಉತ್ಸಾಹ ಒಂದಿಷ್ಟೂ ಕಡಿಮೆಯಾಗಲಿಲ್ಲ. ಅದೇ ಅವರನ್ನು ಈಗ ಫಿಫಾ ವೇದಿಕೆವರೆಗೂ ತಂದಿದೆ.
ಮಕ್ಕಳ ಶಾಲಾ ಶುಲ್ಕ, ಅಗತ್ಯ ವಸ್ತುಗಳ ಪೂರೈಕೆ, ಮೂಲಸೌಕರ್ಯಗಳನ್ನು ಕಲ್ಪಿಸುವುದಕ್ಕಾಗಿ ಹಣ ಸಂಗ್ರಹಿಸಲು ತನ್ನ ಆನ್‌ಲೈನ್ ವೇದಿಕೆಗಳನ್ನು ಬಳಸಿಕೊಳ್ಳುತ್ತಿದೆ 'ಘೆಟ್ಟೊ ಕಿಡ್ಸ್'. ಅಷ್ಟೇ ಅಲ್ಲ; ನೃತ್ಯದ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸವನ್ನೂ ಹೆಚ್ಚಿಸುವುದೂ ಇದರ ಉದ್ದೇಶವಾಗಿದೆ.
ಶಕೀರಾ ಕರೆ
ಹೀಗೆ ಬೀದಿ ಬದಿಯಲ್ಲಿ ಕುಣಿಯುತ್ತಿದ್ದ ಮಕ್ಕಳು ಮುಂದೊಂದು ದಿನ ಪಾಪ್ ಲೋಕದ ಸೂಪರ್‌ಸ್ಟಾರ್ ಶಕೀರಾ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಾರೆ ಎಂಬುದನ್ನು ಯಾರೊಬ್ಬರೂ ಊಹಿಸಿರಲು ಸಾಧ್ಯವಿಲ್ಲ. ಆದರೆ, ಅದು ಇಂದು ರಾತ್ರಿ ನಿಜವಾಗುತ್ತಿದೆ.
ಫಿಫಾ ವಿಶ್ವಕಪ್‌ನ ಅಧಿಕೃತ ಗೀತೆ 'ದೈ ದೈ' ಮೇ 15ರಂದು ಬಿಡುಗಡೆಯಾಗಿತ್ತು. ಆ ಗೀತೆಗೆ 'ಘೆಟ್ಟೊ ಕಿಡ್ಸ್' ನೃತ್ಯ ಮಾಡಿದ್ದರು. ಅದು ಶಕೀರಾ ಅವರನ್ನು ಆಕರ್ಷಿಸಿತ್ತು.
ಇದೇ ಮೊದಲು ಎಂಬಂತೆ ಫಿಫಾ ಫೈನಲ್ ಪಂದ್ಯದ ಮೊದಲಾರ್ಧ ಮುಗಿದ ನಂತರ 11 ನಿಮಿಷಗಳ ಅದ್ದೂರಿ ಹಾಫ್‌ಟೈಮ್ ಶೋ ಪರಿಚಯಿಸಲಾಗುತ್ತಿದೆ. ಈಗಾಗಲೇ ಟೂರ್ನಿಯ ಉದ್ಘಾಟನಾ ಸಂದರ್ಭದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದ ಶಕೀರಾ ಹಾಗೂ ಬರ್ನಾ ಬಾಯ್ ಫೈನಲ್ ದಿನವೂ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಇದೇ ವೇಳೆ ತಮ್ಮೊಂದಿಗೆ ಸೇರಿಕೊಳ್ಳಲು ಘೆಟ್ಟೊ ಕಿಡ್ಸ್‌ಗೆ ಶಕೀರಾ ಆಹ್ವಾನ ನೀಡಿದ್ದಾರೆ.
ಫಿಫಾ ವಿಶ್ವಕಪ್: ಸ್ಪೇನ್-ಅರ್ಜೆಂಟೀನಾ ಮುಖಾಮುಖಿ ಸಾಧನೆ ಹೇಗಿದೆ? ಇಲ್ಲಿದೆ ವಿವರಫಿಫಾ ವಿಶ್ವಕಪ್: ಸ್ಪೇನ್‌ನ ಯಮಾಲ್ ತಂದೆ ಖುದ್ದು ಫೈನಲ್ ವೀಕ್ಷಿಸುತ್ತಿಲ್ಲ ಯಾಕೆ?ಇದು ತಂಡದವರಲ್ಲಿ ನಂಬಲಸಾಧ್ಯವಾದ ಭಾವನೆಯೊಂದಿಗೆ ಉತ್ಸಾಹವನ್ನು ನೂರ್ಮಡಿಗೊಳಿಸಿದೆ. ಸುದ್ದಿ ಕೇಳುತ್ತಿದ್ದಂತೆ ಕೆಲವರು ಕುಣಿದು ಕುಪ್ಪಳಿಸಿದ ವಿಡಿಯೊಗಳು ಹರಿದಾಡಿದ್ದವು. ತಾವೇನು ಎಂಬುದನ್ನು ತೋರಿಸಲು ಈ ತಂಡ ತುದಿಗಾಲಲ್ಲಿ ನಿಂತಿದೆ.
ವಿಶ್ವಕಪ್ ವೇದಿಕೆಯು ಕೇವಲ ಪ್ರದರ್ಶನದ ತಾಣವಷ್ಟೇ ಅಲ್ಲ; ಅಲ್ಲಿ ಜಾಗತಿಕ ಸಂಸ್ಕೃತಿ, ಪರಂಪರೆಗಳೂ ತೆರೆದುಕೊಳ್ಳಲಿವೆ. ಉಗಾಂಡದ ತಂಡವು ತಳಮಟ್ಟದಿಂದ ವಿಶ್ವದೆದುರು ಬೆಳೆದು ನಿಂತ ಬಗೆಯನ್ನೂ ಕಟ್ಟಿಕೊಡಲಿದೆ.
'ಘೆಟ್ಟೊ ಕಿಡ್ಸ್' ಪ್ರತಿಭೆ ಜಾಗತಿಕ ವೇದಿಕೆಯಲ್ಲಿ ಅನಾವರಣಗೊಳ್ಳುತ್ತಿರುವುದು, ಆ ತಂಡಕ್ಕೆ ಮಾತ್ರವಲ್ಲ ಫುಟ್‌ಬಾಲ್ ಬೆಳವಣಿಗೆಗೂ ನೆರವಾಗಲಿದೆ. ಆಫ್ರಿಕಾ ಖಂಡದಾದ್ಯಂತ ಫುಟ್‌ಬಾಲ್‌ನ ಜನಪ್ರಿಯತೆಯೂ ಹೆಚ್ಚಲಿದೆ. ಜೊತೆಗೆ, ಬದಲಾದ ಪರಿಸ್ಥಿತಿಗಳು, ದುರ್ಬಲ ಆರ್ಥಿಕ ಸ್ಥಿತಿ, ಇತರ ಸವಾಲುಗಳ ನಡುವೆಯೂ ನಿರಂತರವಾಗಿ ಮುಂದುವರಿದಿರುವ ಈ ತಂಡ, ಛಲ ಬಿಡದೆ ಮುನ್ನಡೆಯುವ ಮನೋಧೋರಣೆಯ ಪ್ರತಿಬಿಂಬವೂ ಆಗಿದೆ. ಇದು, ಆಫ್ರಿಕಾದ ಸಾಕಷ್ಟು ಯುವಕರಿಗೂ ಸ್ಫೂರ್ತಿಯಾಗಲಿದೆ.
ಘೆಟ್ಟೊ ಕಿಡ್ಸ್ ಏಕೆ? ಶಕೀರಾ ಹೇಳಿದ್ದೇನು?
'ಈ ಮಕ್ಕಳನ್ನೇ ಏಕೆ ನಾನು ಆಯ್ಕೆ ಮಾಡಿಕೊಂಡೆ ಎಂಬುದಕ್ಕೆ ಕಾರಣ ತುಂಬಾ ಸರಳವಾಗಿದೆ. ಕೆಲವು ದಿನಗಳ ಹಿಂದೆ ಈ ಮಕ್ಕಳು ನೃತ್ಯ ಮಾಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು, ವೃತ್ತಿಪರ ಅಥವಾ ಸೂಕ್ತ ಉಡುಪು ಧರಿಸದೆ, ಸ್ಥಳೀಯವಾಗಿ ಲಭ್ಯವಾದ ವಸ್ತುಗಳನ್ನು ಹಿಡಿದುಕೊಂಡೇ ನೃತ್ಯ ಮಾಡಿದ್ದರು. ಆ ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅಲ್ಲಿದ್ದ ಹೆಚ್ಚಿನವರು ಅನಾಥರು ಅಥವಾ ಕಡುಬಡ ಕುಟುಂಬಗಳಿಂದ ಬಂದವರು ಎಂಬುದು ತಿಳಿಯಿತು. ಅದು, ಕೊಲಂಬಿಯಾದಲ್ಲಿನ ನನ್ನ ಬಾಲ್ಯವನ್ನೇ ನೆನಪಿಸಿತು. ಹಾಗಾಗಿ, ಈ ಮಕ್ಕಳಿಗೆ ನೆರವಾಗಬೇಕು ಎಂದು ನಿರ್ಧರಿಸಿದೆ. ಈ ಮ್ಯೂಸಿಕ್ ವಿಡಿಯೊಗೆ ಅವರನ್ನೆಲ್ಲ ಕರೆತರಬೇಕು ಎಂದು ತೀರ್ಮಾನಿಸಿದೆ. ಈ ವೇದಿಕೆ ಎಲ್ಲವನ್ನೂ ಹೊಂದಿರುವವರಿಗೆ ಮಾತ್ರ ಅಲ್ಲ. ಏನೂ ಇಲ್ಲದವರಿಗೂ ಇಲ್ಲಿ ಅವಕಾಶ ಸಿಗಬೇಕು. ಹಾಗೆಯೇ, 'ದೈ ದೈ' ಗೀತೆಯಿಂದ ಬರುವ ಎಲ್ಲ ವರಮಾನವನ್ನೂ ನಾನು 'ಫಿಫಾ ಗ್ಲೋಬಲ್ ಸಿಟಿಜನ್ ಎಜುಕೇಶನ್ ಫಂಡ್'ಗೆ ನೀಡುವುದಾಗಿ ನಿರ್ಧರಿಸಿದ್ದೇನೆ' ಎಂದು ಶಕೀರಾ ಹೇಳಿದ್ದಾರೆ.

