ಸೀಟ್ಲ್: ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಆತಿಥೇಯ ಅಮೆರಿಕ ವಿರುದ್ಧ 4-1 ಗೋಲುಗಳ ಭರ್ಜರಿ ಗೆಲುವು ಗಳಿಸಿರುವ ಬೆಲ್ಜಿಯಂ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಭಾರತೀಯ ಕಾಲಮಾನ ಮಂಗಳವಾರ ಮುಂಜಾನೆ ನಡೆದ ಪಂದ್ಯದಲ್ಲಿ ಆತಿಥೇಯ ಅಮೆರಿಕದ ವಿರುದ್ಧ ಬೆಜ್ಜಿಯಂ ಪಾರುಪತ್ಯ ಮೆರೆಯಿತು.
ಬೆಲ್ಜಿಯಂ ಪರ ಚಾರ್ಲ್ಸ್ ಡಿ ಕೆಟೆಲೇರೆ ಎರಡು ಗೋಲು ಗಳಿಸಿದರೆ (9 ಹಾಗೂ 33ನೇ ನಿಮಿಷ), ಹ್ಯಾನ್ಸ್ ವಾನಕನ್ (57) ಹಾಗೂ ರೊಮೆಲು ಲುಕಾಕು (90+3) ತಲಾ ಒಂದು ಗಳಿಸಿ ಗೋಲು ಗಳಿಸಿ ತಂಡದ ಗೆಲುವಿಗೆ ಕಾರಣರಾದರು.
ಅಮೆರಿಕದ ಪರ ಮಾಲಿಕ್ ಟಿಲ್‌ಮ್ಯಾನ್ ಪಂದ್ಯದ 31ನೇ ನಿಮಿಷದಲ್ಲಿ ಗೋಲು ಗಳಿಸಿ ಸೋಲಿನ ಅಂತರವನ್ನು ತಗ್ಗಿಸಿದರು.
ಈ ಸೋಲಿನೊಂದಿಗೆ ಟೂರ್ನಿಯ ಆತಿಥೇಯ ರಾಷ್ಟ್ರಗಳಲ್ಲಿ ಒಂದಾದ ಅಮೆರಿಕ ವಿಶ್ವಕಪ್‌ನಿಂದ ಹೊರಬಿದ್ದಿದೆ. ಇದಕ್ಕೂ ಮುನ್ನ ರೌಂಡ್ ಆಫ್ 16 ಹಂತದಲ್ಲಿ ಕೆನಡಾ ಮತ್ತು ಮೆಕ್ಸಿಕೋ ತಂಡಗಳು ಹೊರಬಿದ್ದಿದ್ದವು.
ಕ್ವಾರ್ಟರ್ ಫೈನಲ್‌ನಲ್ಲಿ ಬೆಲ್ಜಿಯಂ ತಂಡಕ್ಕೆ ಸ್ಪೇನ್ ತಂಡದ ಸವಾಲು ಎದುರಾಗಲಿದೆ. ಮಗದೊಂದು ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧ ಸ್ಪೇನ್ 1-0 ಗೋಲು ಅಂತರದ ಜಯ ಗಳಿಸಿತ್ತು.
ರೊನಾಲ್ಡೊ ಕನಸು ಭಗ್ನ, ಪೋರ್ಚುಗಲ್ ಮಣಿಸಿದ ಸ್ಪೇನ್ ಕ್ವಾರ್ಟರ್‌ಗೆ ಲಗ್ಗೆಫಿಫಾ ವಿಶ್ವಕಪ್: ಕಣ್ಣೀರಿಟ್ಟ ರೊನಾಲ್ಡೊ, ನನಸಾಗದ ಟ್ರೋಫಿ ಕನಸು
