Dailyhunt Logo
  • Light mode
    Follow system
    Dark mode
    • Play Story
    • App Story
ಫಿಫಾ ವಿಶ್ವಕಪ್: ಇಂಗ್ಲೆಂಡ್‌ಗೆ ಆಘಾತ; ಫೈನಲ್‌ಗೆ ಅರ್ಜೆಂಟೀನಾ

ಫಿಫಾ ವಿಶ್ವಕಪ್: ಇಂಗ್ಲೆಂಡ್‌ಗೆ ಆಘಾತ; ಫೈನಲ್‌ಗೆ ಅರ್ಜೆಂಟೀನಾ

ರ್ಲಿಂಗ್ಟನ್‌: ಫಿಫಾ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಅರ್ಜೆಂಟೀನಾ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇಂಗ್ಲೆಂಡ್ ತಂಡದ ಪ್ರಶಸ್ತಿಯ ಕನಸು ನುಚ್ಚುನೂರಾಗಿದೆ.

ಪಂದ್ಯದ ಕೊನೆಯ ಕ್ಷಣಗಳಲ್ಲಿ ಭರ್ಜರಿ ಆಟವಾಡಿದ ಅರ್ಜೆಂಟೀನಾ, ಸತತ ಎರಡು ಗೋಲುಗಳನ್ನು ಬಾರಿಸಿ ನಾಟಕೀಯ ಜಯ ಸಾಧಿಸಿತು.

ಪಂದ್ಯದ 55ನೇ ನಿಮಿಷದಲ್ಲಿ ಆಂಥೋನಿ ಗಾರ್ಡನ್ ಬಾರಿಸಿದ ಗೋಲಿನ ನೆರವಿನಿಂದ ಇಂಗ್ಲೆಂಡ್ ಮುನ್ನಡೆ ಸಾಧಿಸಿತ್ತು. ಈ ಹಂತದಲ್ಲಿ ಇಂಗ್ಲೆಂಡ್ ವಿಶ್ವಕಪ್ ಫೈನಲ್ ತಲುಪುವ ಸುವರ್ಣ ಅವಕಾಶ ಹೊಂದಿತ್ತು. 1966ರ ನಂತರ ಇದು ಅವರಿಗೆ ಮೊದಲ ಅವಕಾಶವಾಗಿತ್ತು.

ಆದರೆ, ಛಲ ಬಿಡದ ಅರ್ಜೆಂಟೀನಾ ಪಂದ್ಯದ ಕೊನೆಯ ಹಂತದಲ್ಲಿ ತಿರುಗಿಬಿದ್ದಿತು. ಪಂದ್ಯ ಮುಗಿಯಲು ಕೇವಲ 5 ನಿಮಿಷಗಳಿದ್ದಾಗ ಎಂಜೊ ಫೆರ್ನಾಂಡಿಸ್ ಅದ್ಭುತ ಗೋಲು ಬಾರಿಸಿ ಸಮಬಲ ತಂದುಕೊಟ್ಟರು. ಇನ್ನು ಹೆಚ್ಚುವರಿ ಸಮಯದಲ್ಲಿ ಲಯೋನೆಲ್ ಮೆಸ್ಸಿ ನೀಡಿದ ಪಾಸ್ ಅನ್ನು ಮಾರ್ಟಿನೆಜ್ ಹೆಡರ್ ಮೂಲಕ ಗೋಲಾಗಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಇಂಗ್ಲೆಂಡ್ ಈಗ ಮೂರನೇ ಸ್ಥಾನಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಮತ್ತೊಂದೆಡೆ, ಅರ್ಜೆಂಟೀನಾ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಡಲಿದೆ.

ಮೈದಾನದಲ್ಲಿ ತೀವ್ರ ಘರ್ಷಣೆ: ಮೊದಲಾರ್ಧದಲ್ಲಿ ಉಭಯ ತಂಡಗಳ ಆಟಗಾರರು ತೀವ್ರ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರಿಂದ ಒಟ್ಟು 19 ಫೌಲ್‌ಗಳು ದಾಖಲಾದವು. ಪಂದ್ಯವನ್ನು ನಿಯಂತ್ರಿಸಲು ಅಮೆರಿಕದ ರೆಫರಿ ಇಸ್ಮಾಯಿಲ್ ಎಲ್ಫಾತ್ ಹರಸಾಹಸ ಪಡಬೇಕಾಯಿತು.

ಫಿಫಾ ವಿಶ್ವಕಪ್ ಫೈನಲ್‌ಗೆ ಸ್ಪೇನ್: ಒಂದೇ ವಾಕ್ಯದಲ್ಲಿ ಯಮಲ್ ಏನಂದ್ರು ನೋಡಿ...ಫಿಫಾ ವಿಶ್ವಕಪ್; ಬೆಂಗಳೂರು ಹೋಟೆಲ್‌ಗಳಲ್ಲಿ ನಸುಕಿನ 3.30ರವರೆಗೆ ಸಿಗಲಿದೆ ಆಹಾರ
Dailyhunt
Disclaimer: This content has not been generated, created or edited by Dailyhunt. Publisher: Prajavani