Dailyhunt Logo
  • Light mode
    Follow system
    Dark mode
    • Play Story
    • App Story
ಗುಜರಾತ್ ಟೈಟನ್ಸ್ ತವರು ತಂಡವಾದರೂ ಇಲ್ಲಿರುವ ಅಭಿಮಾನಿಗಳು ನಮ್ಮವರು: ಕೊಹ್ಲಿ

ಗುಜರಾತ್ ಟೈಟನ್ಸ್ ತವರು ತಂಡವಾದರೂ ಇಲ್ಲಿರುವ ಅಭಿಮಾನಿಗಳು ನಮ್ಮವರು: ಕೊಹ್ಲಿ

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಇದು ಟೈಟನ್ಸ್ ತವರಾದರೂ ಇಲ್ಲಿರುವ ಶೇ 90 ರಷ್ಟು ಅಭಿಮಾನಿಗಳು ನಮ್ಮವರು: ಕೊಹ್ಲಿ

ಒಂದು ಸಾಲಿನಲ್ಲಿಐಪಿಎಲ್ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ಮಣಿಸಿ ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ ಆರ್‌ಸಿಬಿ ತಂಡವು ಅಭಿಮಾನಿಗಳ ಭಾರಿ ಬೆಂಬಲವನ್ನು ಪಡೆದುಕೊಂಡಿದೆ.

ಪ್ರಮುಖ ಸಂಗತಿಗಳು• ಆರ್‌ಸಿಬಿಗೆ ಸತತ ಎರಡನೇ ಕಿರೀಟಐಪಿಎಲ್ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.• ಅಭಿಮಾನಿಗಳ ಭಾರಿ ಬೆಂಬಲಗುಜರಾತ್ ಟೈಟನ್ಸ್ ತಂಡದ ತವರು ಮೈದಾನದಲ್ಲೂ ಶೇ 90ರಷ್ಟು ಅಭಿಮಾನಿಗಳು ಆರ್‌ಸಿಬಿ ಬೆಂಬಲಿಗರಾಗಿದ್ದು, ವಿರಾಟ್ ಕೊಹ್ಲಿ ಇದನ್ನು ತಮ್ಮ ವಿಜಯದ ಶಕ್ತಿಯೆಂದು ಬಣ್ಣಿಸಿದ್ದಾರೆ.• ವಿರಾಟ್ ಕೊಹ್ಲಿ ಅಮೋಘ ಪ್ರದರ್ಶನಫೈನಲ್ ಪಂದ್ಯದಲ್ಲಿ ಕೇವಲ 42 ಎಸೆತಗಳಲ್ಲಿ 75 ರನ್ ಗಳಿಸಿದ ವಿರಾಟ್ ಕೊಹ್ಲಿ, ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜರಾದರು ಮತ್ತು ಟೂರ್ನಿಯಲ್ಲಿ ಒಟ್ಟು 675 ರನ್ ಗಳಿಸಿದ್ದಾರೆ.• ಆರ್‌ಸಿಬಿ ಅಚಲ ಆಡಳಿತ17 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿಕೊಂಡಿದ್ದ ಆರ್‌ಸಿಬಿ, 2025ರಲ್ಲಿ ಮೊದಲ ಬಾರಿಗೆ ಕಪ್ ಗೆದ್ದ ನಂತರ ಇದೀಗ ಮತ್ತೊಮ್ಮೆ ತನ್ನ ಅಧಿಪತ್ಯವನ್ನು ಸಾಬೀತುಪಡಿಸಿದೆ.• ಎರಡು ತವರುಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನ ಮತ್ತು ಛತ್ತೀಸ್‌ಗಢದ ರಾಯ್‌ಪುರದ ಕ್ರೀಡಾಂಗಣಗಳು ಈ ಬಾರಿ ಆರ್‌ಸಿಬಿಬಿ ತವರು ಮೈದಾನಗಳಾಗಿದ್ದವು.ಪ್ರಮುಖ ಅಂಕಿಅಂಶಗಳು1.32 ಲಕ್ಷನರೇಂದ್ರ ಮೋದಿ ಕ್ರೀಡಾಂಗಣದ ಆಸನ ಸಾಮರ್ಥ್ಯ675ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಗಳಿಸಿದ ಒಟ್ಟು ರನ್ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಅಹಮದಾಬಾದ್: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟಿ20 ಕ್ರಿಕೆಟ್‌ ಫೈನಲ್‌ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟನ್ಸ್‌ ತಂಡವನ್ನು ಮಣಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸತತ ಎರಡನೇ ಬಾರಿ ಚಾಂಪಿಯನ್‌ ಪಟ್ಟಕ್ಕೇರಿದೆ.

ಫೈನಲ್‌ ಪಂದ್ಯವು ಗುಜರಾತ್‌ ತಂಡದ ತವರಿನಲ್ಲಿ ನಡೆದಿದೆಯಾದರೂ, ಇಲ್ಲಿರುವ ಬಹುತೇಕ ಅಭಿಮಾನಿಗಳು ಆರ್‌ಸಿಬಿಯವರು ಎಂದು ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ಸತತ 17 ವರ್ಷ ಪ್ರಶಸ್ತಿ ಬರ ಅನುಭವಿಸಿದ್ದ ಆರ್‌ಸಿಬಿ, 2025ರ (18ನೇ) ಆವೃತ್ತಿಯಲ್ಲಿ ಮೊದಲ ಸಲ ಕಪ್‌ ಎತ್ತಿ ಹಿಡಿದಿತ್ತು. ಇದೀಗ ಮತ್ತೊಮ್ಮೆ ಫೈನಲ್‌ ಗೆದ್ದು ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ.

ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಆರ್ಭಟ; ಈ ಸಲವೂ ಕಪ್ ಆರ್‌ಸಿಬಿಗೇರಾಯಲ್‌ ಚಾಲೆಂಜರ್ಸ್‌ಗೆ ವಿರಾಟ್‌ ವಿಜಯ

ಆರ್‌ಸಿಬಿ ಈ ಬಾರಿ ಎರಡು ತವರು ಮೈದಾನಗಳಲ್ಲಿ ಪಂದ್ಯ ಆಡಿದೆ. ಅವುಗಳಲ್ಲಿ ಒಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನ. ಇನ್ನೊಂದು, ಛತ್ತೀಸ್​ಗಢದ ರಾಯ್​ಪುರ್​ನಲ್ಲಿರುವ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣ. ಈ ಮೈದಾನಗಳಲ್ಲಿ ಒಟ್ಟು ಏಳು ಪಂದ್ಯಗಳನ್ನು ರಜತ್ ಪಾಟೀದಾರ್‌ ಬಳಗ ಆಡಿದೆ.

ಫೈನಲ್‌ ಪಂದ್ಯದ ಬಳಿಕ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿರುವ ವಿರಾಟ್‌, 'ನಮಗೆ ಏಳಲ್ಲ, ಹದಿನಾಲ್ಕು ತವರು ಪಂದ್ಯಗಳು ಇರುತ್ತವೆ ಎಂದು ಯಾವಾಗಲೂ ಹೇಳುತ್ತೇನೆ. ಏಕೆಂದರೆ, ನಾವು ಎಲ್ಲಿಗೆ ಹೋದರೂ, ಅಭಿಮಾನಿಗಳು ನಮ್ಮ ಹಿಂದೆ ಬರುತ್ತಾರೆ. ಹುರಿದುಂಬಿಸುತ್ತಾರೆ. ಗುಜರಾತ್‌ ಟೈಟನ್ಸ್‌ ತವರು ತಂಡವಾಗಿರಬಹುದು. ಆದರೆ, ಇಲ್ಲಿರುವ ಶೇ 90ರಷ್ಟು ಅಭಿಮಾನಿಗಳು ಆರ್‌ಸಿಬಿಯವರು' ಎಂದು ಕೊಹ್ಲಿ ಹೇಳಿದ್ದಾರೆ.

1.32 ಲಕ್ಷ ಆಸನ ಸಾಮರ್ಥ್ಯ ಹೊಂದಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವು ಭಾನುವಾರ ರಾತ್ರಿ ವಿರಾಟ್‌ ಕೊಹ್ಲಿಯ 'ನಂಬರ್‌ 18' ಜೆರ್ಸಿ ತೊಟ್ಟ ಅಭಿಮಾನಿಗಳು, ಆರ್‌ಸಿಬಿ ಬಾವುಟಗಳೇ ರಾರಾಜಿಸುತ್ತಿದ್ದವು.

ಪಂದ್ಯಶ್ರೇಷ್ಠ ಕೊಹ್ಲಿ

ಮೊದಲು ಬ್ಯಾಟಿಂಗ್ ಮಾಡಿದ ಟೈಟನ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 155 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಆರ್‌ಸಿಬಿ, 5 ವಿಕೆಟ್‌ ಕಳೆದುಕೊಂಡು ಇನ್ನೂ ಎರಡು ಓವರ್‌ ಬಾಕಿ ಇರುವಂತೆಯೇ 161 ರನ್‌ ಕಲೆಹಾಕಿ ಜಯದ ನಗೆ ಬೀರಿತು.

ಅಮೋಘ ಬ್ಯಾಟಿಂಗ್ ನಡೆಸಿದ ಕೊಹ್ಲಿ, ಕೇವಲ 42 ಎಸೆತಗಳಲ್ಲಿ 75 ರನ್‌ ಗಳಿಸಿದರು. ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅವರು, ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಟೂರ್ನಿಯಲ್ಲಿ ಆಡಿದ 16 ಪಂದ್ಯಗಳಲ್ಲಿ 56.25ರ ಸರಾಸರಿಯಲ್ಲಿ 1 ಶತಕ 5 ಅರ್ಧಶತಕ ಸಹಿತ 675 ರನ್‌ ಗಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani