ವಾಷಿಂಗ್ಟನ್: ಇರಾನ್ ಅಣ್ವಸ್ತ್ರ ಬೆದರಿಕೆಯನ್ನು ಎದುರಿಸಲು ತಮ್ಮ ಜೊತೆಗೆ ಕೈಜೋಡಿಸದ ನ್ಯಾಟೊ ಹಾಗೂ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.
ದಶಕಗಳಿಂದ ಅಮೆರಿಕ ಒದಗಿಸುತ್ತಿರುವ ಭದ್ರತಾ ನೆರವಿನ ಹೊರತಾಗಿಯೂ ಮಿತ್ರರಾಷ್ಟ್ರಗಳು ಅಮೆರಿಕವನ್ನು ಬೆಂಬಲಿಸುವಲ್ಲಿ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಟ್ರುಥ್'ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, 'ನ್ಯಾಟೊ, ಇಟಲಿಗಾಗಿ ಟ್ರಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಖರ್ಚು ಮಾಡಿದರ ಹೊರತಾಗಿಯೂ ಇರಾನ್ ಅಣ್ವಸ್ತ್ರ ಬೆದರಿಕೆಯ ವಿರುದ್ಧ ನಮ್ಮ ಜೊತೆ ಭಾಗಿಯಾಗುವ ಕುರಿತು ಯೋಚಿಸಿಲ್ಲ. ದಶಕಗಳಿಂದಲೂ ನಾವು ಅವರನ್ನು ರಕ್ಷಿಸುತ್ತಲೇ ಬಂದಿದ್ದೇವೆ. ಆದರೆ ನಿಜವಾದ ಪರೀಕ್ಷೆ ಎದುರಾದಾಗ ನಮ್ಮನ್ನಾಗಲಿ, ಇಡೀ ಜಗತ್ತನ್ನಾಗಲಿ ರಕ್ಷಿಸಲು ಮುಂದೆ ಬಂದಿಲ್ಲ. ಇದು ಒಳ್ಳೆಯದಲ್ಲ' ಎಂದು ಆರೋಪಿಸಿದ್ದಾರೆ.
ಈ ಮೊದಲು ಜಿ7 ಶೃಂಗಸಭೆಯಲ್ಲಿ 'ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ನನ್ನೊಂದಿಗೆ ಫೋಟೊ ತೆಗೆಸಿಕೊಳ್ಳಲು ಪದೇ ಪದೇ ಬೇಡಿಕೊಂಡಿದ್ದರು' ಎಂದು ಟ್ರಂಪ್ ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಮೆಲೊನಿ 'ನಿಮಗೆ ನನ್ನ ಬಗ್ಗೆ ಚಿಂತೆ ಬೇಡ, ನಿಮ್ಮ ಬಗ್ಗೆ ಗಮನ ಹರಿಸಿ' ಎಂದು ತಿರುಗೇಟು ನೀಡಿದ್ದರು.
ನನ್ನ ಜನಪ್ರಿಯತೆ ಬಗ್ಗೆ ನಿಮಗೆ ಚಿಂತೆ ಬೇಡ: ಟ್ರಂಪ್‌ಗೆ ಮೆಲೊನಿ ತಿರುಗೇಟು'ಫೋಟೊಗಾಗಿ ಬೇಡಿಕೊಂಡಿದ್ದರು' ಎಂದ ಟ್ರಂಪ್‌ಗೆ ಮೆಲೊನಿ ತೀಕ್ಷ್ಣ ಪ್ರತಿಕ್ರಿಯೆ
