Dailyhunt Logo
  • Light mode
    Follow system
    Dark mode
    • Play Story
    • App Story
ನನ್ನ ಜನಪ್ರಿಯತೆ ಬಗ್ಗೆ ನಿಮಗೆ ಚಿಂತೆ ಬೇಡ: ಟ್ರಂಪ್‌ಗೆ ಮೆಲೊನಿ ತಿರುಗೇಟು

ನನ್ನ ಜನಪ್ರಿಯತೆ ಬಗ್ಗೆ ನಿಮಗೆ ಚಿಂತೆ ಬೇಡ: ಟ್ರಂಪ್‌ಗೆ ಮೆಲೊನಿ ತಿರುಗೇಟು

ರೋಮ್: 'ನನ್ನ ಜೊತೆ ಫೋಟೊ ತೆಗೆಸಿಕೊಳ್ಳಲು ಪದೇ ಪದೇ ಬೇಡಿಕೊಂಡಿದ್ದರು' ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ತಿರುಗೇಟು ನೀಡಿದ್ದಾರೆ.

ಫ್ರಾನ್ಸ್‌ನಲ್ಲಿ ಈಚೆಗೆ ನಡೆದ ಜಿ7 ಶೃಂಗಸಭೆಯ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ನನ್ನೊಂದಿಗೆ ಫೋಟೊ ತೆಗೆಸಿಕೊಳ್ಳಲು ಪದೇಪದೇ ಬೇಡಿಕೊಂಡಿದ್ದರು ಎಂಬ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಪ್ರಸ್ತಾಪಿಸಿದ್ದಾರೆ.

ಇದ್ದಲ್ಲದೆ ಇಟಲಿಯ ವಿದೇಶಾಂಗ ನೀತಿಯ ಬಗ್ಗೆಯೂ ಟೀಕಿಸಿದ್ದರು.

ಈ ನಡುವೆ ಇಟಲಿಯ ಹಿತಾಸಕ್ತಿಯನ್ನು ರಕ್ಷಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿರುವ ಮೆಲೊನಿ, 'ನನ್ನ ಬಗ್ಗೆ ಚಿಂತೆ ಬೇಡ, ನೀವು ನಿಮ್ಮ ಬಗ್ಗೆ ಗಮನ ಹರಿಸಿ' ಎಂದು ಟ್ರಂಪ್‌ಗೆ ತಿರುಗೇಟು ಎಂದಿದ್ದಾರೆ.

ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಮೆಲೊನಿ, 'ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಈ ನಿರಂತರ, ಅಪ್ರಚೋದಿತ ದಾಳಿ ಅರ್ಥಹೀನವಾಗಿದೆ' ಎಂದು ಹೇಳಿದ್ದಾರೆ.

'ನನ್ನ ಜನಪ್ರಿಯತೆಯ ವಿಷಯಕ್ಕೆ ಬಂದಾಗ ನಿಮ್ಮ ಸ್ನೇಹಿತನಾಗಿರುವುದರಿಂದ ಖಂಡಿತವಾಗಿಯೂ ನನಗೆ ಸಹಾಯವಾಗಿಲ್ಲ.ಅಲ್ಲದೆ ಅದು ನಿಮ್ಮೊಂದಿಗಿನ ಸಂಬಂಧವನ್ನು ಅವಲಂಬಿಸಿಲ್ಲ. ನನ್ನ ಜನಪ್ರಿಯತೆಯು ಇಟಲಿಯ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡುವ ನನ್ನ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಮತ್ತು ಅದನ್ನು ಕಾಪಾಡಲು ಬದ್ಧವಾಗಿದ್ದೇನೆ' ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

'ಇಟಲಿಯಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳಿಗೆ ಸಂಬಂಧಿಸಿದಂತೆಯೂ ನಾನು ಅದನ್ನೇ ಮಾಡಿದ್ದೇನೆ. ಅವುಗಳ ಬಳಕೆ ನಾವು ಗೌರವಿಸುವ ಒಪ್ಪಂದಗಳಿಗೆ ಒಳಪಟ್ಟಿರುತ್ತದೆ. ನಾನು ಪ್ರಧಾನಿಯಾಗಿರುವವರೆಗೆ ಅದನ್ನು ಉಲ್ಲಂಘಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

'ಇಟಲಿ ಸಾರ್ವಭೌಮ ರಾಷ್ಟ್ರವಾಗಿದೆ. ಯಾವುದೇ ಸಂದರ್ಭದಲ್ಲಿ, ನನ್ನ ಜನಪ್ರಿಯತೆಯ ಬಗ್ಗೆ ನಿಮಗೆ ಚಿಂತೆ ಬೇಡ. ನೀವು ನಿಮ್ಮ ಬಗ್ಗೆ ಗಮನಹರಿಸಿ' ಎಂದು ಹೇಳಿದ್ದಾರೆ.

ಇದು ಇಬ್ಬರು ನಾಯಕರ ನಡುವಿನ ವೈಮನಸ್ಸು ಮತ್ತು ಉಭಯ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧಕ್ಕೆ ಪೆಟ್ಟು ನೀಡಿದ್ದಷ್ಟೇ ಅಲ್ಲ, ಇರಾನ್ ವಿರುದ್ಧದ ಯುದ್ಧ ಮತ್ತು ನ್ಯಾಟೊ ಬಣದೊಂದಿಗಿನ ಟ್ರಂಪ್ ಮುನಿಸಿನೊಂದಿಗೂ ತಳಕು ಹಾಕಿಕೊಳ್ಳುತ್ತಿದೆ.

'ಇರಾನ್ ವಿರುದ್ಧದ ಅಮೆರಿಕದ ಕಾರ್ಯಾಚರಣೆಗೆ ಬೆಂಬಲಿಸಲು ಇಟಲಿ ವಿಫಲವಾಗಿದೆ. ಈಗ ಆಂತರಿಕ ರಾಜಕೀಯದ ಕಾರಣಕ್ಕೆ ವಾಷಿಂಗ್ಟನ್ ಜೊತೆ ಸಂಬಂಧ ಸುಧಾರಣೆಗೆ ಮೆಲೊನಿ ಯತ್ನಿಸುತ್ತಿದ್ದಾರೆ. ಅಮೆರಿಕವು ಇರಾನ್ ಸೇನೆಯನ್ನು ಸದೆಬಡಿದ ಬಳಿಕ ಆಕೆ ತನ್ನ ಜನಪ್ರಿಯತೆಯನ್ನು ಮರಳಿ ಗಳಿಸಲೆಂದು ಸ್ನೇಹ ಬಯಸುತ್ತಿದ್ದಾಳೆ. ಅದರ ಅಗತ್ಯವಿಲ್ಲ' ಎಂದು ಟ್ರಂಪ್ ಪೋಸ್ಟ್ ಮಾಡಿದ್ದರು.

'ಫೋಟೊಗಾಗಿ ಬೇಡಿಕೊಂಡಿದ್ದರು' ಎಂದ ಟ್ರಂಪ್‌ಗೆ ಮೆಲೊನಿ ತೀಕ್ಷ್ಣ ಪ್ರತಿಕ್ರಿಯೆಫೋಟೊಗಾಗಿ ಬೇಡಿಕೊಂಡಿದ್ದ ಮೆಲೊನಿ: ಹೇಳಿಕೆ ಪುನರುಚ್ಛರಿಸಿದ ಟ್ರಂಪ್
Dailyhunt
Disclaimer: This content has not been generated, created or edited by Dailyhunt. Publisher: Prajavani