Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್ ಮೇಲಿನ ನಮ್ಮ ಯುದ್ಧ ಇನ್ನೂ ಮುಗಿದಿಲ್ಲ: ಡೊನಾಲ್ಡ್ ಟ್ರಂಪ್

ಇರಾನ್ ಮೇಲಿನ ನಮ್ಮ ಯುದ್ಧ ಇನ್ನೂ ಮುಗಿದಿಲ್ಲ: ಡೊನಾಲ್ಡ್ ಟ್ರಂಪ್

ಟೆಹರಾನ್: ಇರಾನ್ ಮೇಲಿನ ನಮ್ಮ ಯುದ್ಧ ಇನ್ನೂ ಮುಗಿದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸೌದಿ ಹಿಡಿತದಲ್ಲಿರುವ ಬಂದರುಗಳನ್ನು ದಿಗ್ಬಂಧನಕ್ಕೊಳಪಡಿಸುವುದಾಗಿ ಹೂಥಿ ಬಂಡುಕೋರರು ಬೆದರಿಕೆ ಹಾಕಿದ ಬೆನ್ನಲ್ಲೇ ಇರಾನ್, ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸಿತ್ತು.

'ನಾವು ಈಗಲೇ ಇಲ್ಲಿಂದ ಹೋದರೂ ಕೂಡ, ಇರಾನ್ ಮತ್ತೆ ಮೊದಲಿನ ಸ್ಥಿತಿಗೆ ಬರಲು 20ರಿಂದ 25 ವರ್ಷಗಳು ಬೇಕು. ಆದರೆ, ನಾವು ಇನ್ನೂ ನಮ್ಮ ಕೆಲಸ ಮುಗಿಸಿಲ್ಲ. ಹಾಗಾಗಿ, ಈಗಲೇ ನಾವು ಇಲ್ಲಿಂದ ಹೋಗುವುದಿಲ್ಲ' ಎಂದು ಹೇಳಿದ್ದಾರೆ.

ನಟಾಂಜ್ ಬಳಿಯಿರುವ ಇರಾನ್‌ನ ಭೂಗತ ಪರಮಾಣು ಸಮೃದ್ಧೀಕರಣ ಘಟಕವು ಅಮೆರಿಕದ ಮುಂದಿನ ಗುರಿಯಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಅದನ್ನು ನಾಶಪಡಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಹೊರ್ಮುಜ್ ಜಲಸಂಧಿಯಲ್ಲಿನ ವಾಣಿಜ್ಯ ಹಡಗುಗಳ ಮೇಲೆ ಇರಾನ್ ದಾಳಿ ಮಾಡದಂತೆ ತಡೆಯಲು ಅವರ ಸೇನಾ ನೆಲೆಗಳ ಮೇಲೆ ದಾಳಿ ಮಾಡಿ, ಅಲ್ಲಿನ ಮೂಲಸೌಕರ್ಯಗಳನ್ನು ನಾಶ ಮಾಡಿದ್ದೇವೆ ಎಂದು ಅಮೆರಿಕ ಸೇನೆ ತಿಳಿಸಿದೆ.

ಇರಾನ್ ಜೊತೆಗಿನ ಕದನ ವಿರಾಮ ಮಾತುಕತೆಯ ನಡುವೆಯೂ, ಅಮೆರಿಕವು ಸತತ 11 ದಿನಗಳ ಕಾಲ ಇರಾನ್ ಮೇಲೆ ರಾತ್ರಿ ದಾಳಿ ನಡೆಸಿದೆ.

ಹಿಜ್ಬುಲ್ಲಾ ನಿರ್ಮೂಲನೆಗೆ ಅಮೆರಿಕ ನೆರವು, ಸ್ಪಷ್ಟ ಯೋಜನೆ ಇದೆ: ಟ್ರಂಪ್
Dailyhunt
Disclaimer: This content has not been generated, created or edited by Dailyhunt. Publisher: Prajavani