Dailyhunt Logo
  • Light mode
    Follow system
    Dark mode
    • Play Story
    • App Story
ಹಿಜ್ಬುಲ್ಲಾ ನಿರ್ಮೂಲನೆಗೆ ಅಮೆರಿಕ ನೆರವು, ಸ್ಪಷ್ಟ ಯೋಜನೆ ಇದೆ: ಟ್ರಂಪ್

ಹಿಜ್ಬುಲ್ಲಾ ನಿರ್ಮೂಲನೆಗೆ ಅಮೆರಿಕ ನೆರವು, ಸ್ಪಷ್ಟ ಯೋಜನೆ ಇದೆ: ಟ್ರಂಪ್

ವಾಷಿಂಗ್ಟನ್: 'ಹಿಜ್ಬುಲ್ಲಾ ಸಂಘಟನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಲೆಬನಾನ್‌ಗೆ ಅಮೆರಿಕ ನೆರವು ಮಾಡಲಿದೆ. ನಮ್ಮ ಬಳಿ ಸ್ಪಷ್ಟ ಯೋಜನೆ ಇದೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಲೆಬನಾನ್‌ನಲ್ಲಿ ಇಸ್ರೇಲ್ ಪಡೆ ಮರು ನಿಯೋಜನೆಗೊಳ್ಳುತ್ತಿದೆ ಎಂದು ಅವರು ದೃಢೀಕರಿಸಿದ್ದಾರೆ.

ಶ್ವೇತಭವನದಲ್ಲಿ ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರೊಂದಿಗೆ ನಡೆಸಿದ ದ್ವಿಪಕ್ಷೀಯ ಮಾತುಕತೆಯ ಬಳಿಕ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.

'ಲೆಬನಾನ್ ಬಹಳ ಕಾಲದಿಂದ ನೋವು ಅನುಭವಿಸುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಆ ದೇಶಕ್ಕೆ ಗೌರವ ಹಾಗೂ ಸ್ಥಿರತೆ ಒದಗಿಸುವುದು ನಮ್ಮ ಗುರಿಯಾಗಿದೆ' ಎಂದು ಹೇಳಿದ್ದಾರೆ.

'ಹಿಜ್ಬುಲ್ಲಾವನ್ನು ಹತ್ತಿಕ್ಕಲು ಅಮೆರಿಕ ರೂಪಿಸಿರುವ ತಂತ್ರಗಾರಿಕೆ ಹಾಗೂ ಯೋಜನೆಗಳ ಬಗ್ಗೆ ಲೆಬನಾನ್ ಅಧ್ಯಕ್ಷರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದೇನೆ' ಎಂದು ತಿಳಿಸಿದ್ದಾರೆ.

'ಲೆಬನಾನ್‌ನ ನಾಯಕತ್ವವು ಬಯಸಿದರೆ ಹಿಜ್ಬುಲ್ಲಾ ಸಂಘಟನೆಯೊಂದಿಗೆ ನೇರ ಮಾತುಕತೆ ನಡೆಸಲಿದ್ದೇವೆ' ಎಂದು ಅವರು ಹೇಳಿದ್ದಾರೆ.

ಲೆಬನಾನ್‌ಗೆ ನೇರ ವಿಮಾನಯಾನ...

ಲೆಬನಾನ್‌ನ ಅಧ್ಯಕ್ಷ ಜೋಸೆಫ್ ಔನ್ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದ ಬೆನ್ನಲ್ಲೇ ಅಮೆರಿಕದಿಂದ ಲೆಬನಾನ್‌ಗೆ ನೇರ ವಿಮಾನಯಾನ ಆರಂಭಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ.

'ಲೆಬನಾನ್‌ನ ಚೇತರಿಕೆಗೆ ಔನ್ ಗಮನಾರ್ಹ ಕೆಲಸ ಮಾಡುತ್ತಿದ್ದಾರೆ. ಆ ಸುಂದರ ದೇಶಕ್ಕೆ ಭೇಟಿ ನೀಡಲು ಅನುಕೂಲವಾಗುವಂತೆ ನೇರ ವಿಮಾನಯಾನ ಆರಂಭಿಸಲು ಸೂಚನೆ ನೀಡಿದ್ದೇನೆ' ಎಂದು ತಿಳಿಸಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಯ ಸಂಬಂಧ 'ಅಬ್ರಹಾಂ ಒಪ್ಪಂದ' ಪ್ರಸ್ತಾಪಿಸಿದ ಅವರು, 'ಈ ಒಪ್ಪಂದ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಮತ್ತಷ್ಟು ದೇಶಗಳು ಕೈಜೋಡಿಸಲಿವೆ' ಎಂದು ಹೇಳಿದ್ದಾರೆ.

ಹೊರ್ಮುಜ್‌ ಹಡಗುಗಳ ಸಂಚಾರಕ್ಕೆ ಮುಕ್ತ | ಇರಾನ್‌ ಪ್ರಸ್ತಾವ ಪರಿಶೀಲನೆ: ಶ್ವೇತಭವನದಕ್ಷಿಣ ಲೆಬನಾನ್‌ನಲ್ಲಿ ಕದನ ವಿರಾಮಕ್ಕೆ ಇಸ್ರೇಲ್‌-ಹಿಜ್ಬುಲ್ಲಾ ಸಮ್ಮತಿ
Dailyhunt
Disclaimer: This content has not been generated, created or edited by Dailyhunt. Publisher: Prajavani