Dailyhunt Logo
  • Light mode
    Follow system
    Dark mode
    • Play Story
    • App Story
'ಇರಾನ್ ನಾಯಕ ಬದುಕಿರಬಹುದು': ಮೊಜ್ತಬಾ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಟ್ರಂಪ್

'ಇರಾನ್ ನಾಯಕ ಬದುಕಿರಬಹುದು': ಮೊಜ್ತಬಾ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಟ್ರಂಪ್

ವಾಷಿಂಗ್ಟನ್‌: ಇರಾನ್‌ ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ (56) ಜೀವಂತವಾಗಿರಬಹುದು. ಆದರೆ, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶುಕ್ರವಾರ ಹೇಳಿದ್ದಾರೆ.

ಅಮೆರಿಕ ಮತ್ತು ಇಸ್ರೇಲ್‌ ಸೇನಾ ಪಡೆಗಳು ಇರಾನ್‌ ಮೇಲೆ ಫೆಬ್ರುವರಿ 28ರಂದು ನಡೆಸಿದ ಜಂಟಿ ದಾಳಿಯಲ್ಲಿ, ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ, ಅವರ ಸ್ಥಾನಕ್ಕೆ ಮೊಜ್ತಬಾ ನೇಮಕಗೊಂಡಿದ್ದಾರೆ.

ಫಾಕ್ಸ್‌ ನ್ಯೂಸ್‌ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಮೆರಿಕ ಅಧ್ಯಕ್ಷ, ಮೊಜ್ತಬಾ ಕುರಿತು ಹೇಳಿಕೆ ನೀಡಿದ್ದಾರೆ.

'ಮೊಜ್ತಬಾ ಜೀವಂತವಾಗಿದ್ದಾರೆ ಎಂದು ನೀವು ನಂಬುತ್ತೀರಾ?' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಬಹುಶಃ ಬದುಕಿರಬಹುದು. ಆದರೆ, ಗಾಯಗೊಂಡಿದ್ದಾರೆ. ಯಾವುದೋ ರೂಪದಲ್ಲಿ ಜೀವಂತವಾಗಿ ಇರಬಹುದು ಎಂದು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.

ಇರಾನ್‌ ವಿರುದ್ಧ ಇಸ್ರೇಲ್‌, ಅಮೆರಿಕ ಸಂಘರ್ಷ ಆರಂಭವಾದಾಗಿನಿಂದ ಮೊಜ್ತಬಾ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಏತನ್ಮಧ್ಯೆ, ಅವರು ಯುದ್ಧ ಶುರುವಾದಾಗಲೇ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ, ಹಲವು ಊಹಾಪೋಹಗಳು ಹರಿದಾಡುತ್ತಿದ್ದು, ಇರಾನ್‌ ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿದೆ.

ಭಾರತದಂತೆ ಇತರೆ ದೇಶಗಳಿಗೂ ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ ಅನುಮತಿಎಲ್‌ಪಿಜಿ ಸಿಲಿಂಡರ್ ಅಭಾವಕ್ಕೇನು ಕಾರಣ? ಕೇಂದ್ರದ ಅಧಿಕಾರಿ ಕೊಟ್ಟ ಕಾರಣ ಇಲ್ಲಿದೆ

ಮೊಜ್ತಬಾ ಗಾಯಗೊಂಡಿದ್ದಾರೆ ಎಂಬ ಸುದ್ದಿಯ ಕುರಿತು ಎರಡು ದಿನಗಳ ಹಿಂದಷ್ಟೇ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮಾಹಿತಿ ಹಂಚಿಕೊಂಡಿದ್ದ ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್‌, 'ಮೊಜ್ತಬಾ ಗಾಯಗೊಂಡಿದ್ದಾರೆ ಎಂಬ ಸುದ್ದಿ ತಿಳಿಯಿತು. ಆ ವಿಚಾರವಾಗಿ ಮೊಜ್ತಬಾ ಸಂಪರ್ಕದಲ್ಲಿರುವ ಸ್ನೇಹಿತರನ್ನು ವಿಚಾರಿಸಿದೆ. ಮೊಜ್ತಬಾ ಆರೋಗ್ಯವಾಗಿರುವುದಾಗಿ ಅವರು ತಿಳಿಸಿದ್ದಾರೆ. ಸದ್ಯ ಯಾವುದೇ ಸಮಸ್ಯೆಯಿಲ್ಲ' ಎಂದು ಹೇಳಿದ್ದರು. ಆದರೆ, ಹೆಚ್ಚಿನ ವಿವರ ಬಿಟ್ಟುಕೊಟ್ಟಿರಲಿಲ್ಲ.

Dailyhunt
Disclaimer: This content has not been generated, created or edited by Dailyhunt. Publisher: Prajavani