Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್ ಯುದ್ಧಕ್ಕೂ ಗುಂಡಿನ ದಾಳಿಗೂ ನಂಟು ಇದೆಯೇ?: ಟ್ರಂಪ್ ಪ್ರತಿಕ್ರಿಯೆ

ಇರಾನ್ ಯುದ್ಧಕ್ಕೂ ಗುಂಡಿನ ದಾಳಿಗೂ ನಂಟು ಇದೆಯೇ?: ಟ್ರಂಪ್ ಪ್ರತಿಕ್ರಿಯೆ

ವಾಷಿಂಗ್ಟನ್‌: ವಾಷಿಂಗ್ಟನ್ ಹಿಲ್ಟನ್‌ ಹೋಟೆಲ್‌ನಲ್ಲಿ ಶನಿವಾರ ರಾತ್ರಿ ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್ ಕಾರ್ಯಕ್ರಮದಲ್ಲಿ ನಡೆದ ಗುಂಡಿನ ದಾಳಿಗೂ ಮತ್ತು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಇರಾನ್ ಯುದ್ಧಕ್ಕೂ ಸಂಬಂಧವಿದೆಯೇ ಎಂಬುದರ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.

'ಇದಕ್ಕೂ ಇರಾನ್ ಯುದ್ಧಕ್ಕೂ ಸಂಬಂಧ ಇದೆಯೋ ಎಂಬುದು ನನಗೆ ತಿಳಿದಿಲ್ಲ. ಪ್ರಾಥಮಿಕ ಮಾಹಿತಿಯ ಆಧಾರದಲ್ಲಿ ಅಂತಹ ಸಾಧ್ಯತೆ ಕಡಿಮೆಯಾಗಿದೆ' ಎಂದು ಹೇಳಿದ್ದಾರೆ.

ಹಿಂಜರಿಯುವುದಿಲ್ಲ…

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, 'ಈ ದಾಳಿಯ ಮೂಲಕ ನಮ್ಮನ್ನು ಎದೆಗುಂದಿಸಲು ಸಾಧ್ಯವಿಲ್ಲ. ಇರಾನ್ ವಿರುದ್ಧದ ಯುದ್ಧದಿಂದ ಹಿಂಜರಿಯುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಬಂದೂಕುಧಾರಿ ಶಸ್ತ್ರಾಸ್ತ್ರವನ್ನು ಹೊಂದಿದ್ದ ಎಂದೂ ಟ್ರಂಪ್ ಖಚಿತಪಡಿಸಿದ್ದಾರೆ.

ಭದ್ರತಾ ಪಡೆಯ ಕಾರ್ಯವೈಖರಿಯನ್ನು ಟ್ರಂಪ್ ಶ್ಲಾಘಿಸಿದ್ದು, ದಾಳಿಕೋರನ ಹಿಂದಿನ ಉದ್ದೇಶದ ಕುರಿತು ತಿಳಿಯಲು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani