Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್-ಅಮೆರಿಕ ಒಪ್ಪಂದ, ಹೊರ್ಮುಜ್ ಜಲಸಂಧಿ ಮುಕ್ತ: ವಿಶ್ವನಾಯಕರಿಂದ ಸ್ವಾಗತ

ಇರಾನ್-ಅಮೆರಿಕ ಒಪ್ಪಂದ, ಹೊರ್ಮುಜ್ ಜಲಸಂಧಿ ಮುಕ್ತ: ವಿಶ್ವನಾಯಕರಿಂದ ಸ್ವಾಗತ

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಇರಾನ್-ಅಮೆರಿಕ ಒಪ್ಪಂದ, ಹೊರ್ಮುಜ್ ಜಲಸಂಧಿ ಮುಕ್ತ: ವಿಶ್ವನಾಯಕರಿಂದ ಸ್ವಾಗತ

ಒಂದು ಸಾಲಿನಲ್ಲಿಅಮೆರಿಕ-ಇರಾನ್ ನಡುವಿನ ಕದನ ವಿರಾಮ ಒಪ್ಪಂದದಿಂದ ಹೊರ್ಮುಜ್ ಜಲಸಂಧಿ ಸಂಚಾರಕ್ಕೆ ಮುಕ್ತವಾಗಿದ್ದು, ಜಾಗತಿಕ ನಾಯಕರು ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ.

ಪ್ರಮುಖ ಪ್ರಶ್ನೋತ್ತರ


ಇರಾನ್-ಅಮೆರಿಕ ಒಪ್ಪಂದದ ಮುಖ್ಯ ಉದ್ದೇಶವೇನು?

ಹೊರ್ಮುಜ್ ಜಲಸಂಧಿಯಲ್ಲಿ ಉಂಟಾಗಿದ್ದ ಸಂಘರ್ಷವನ್ನು ಕೊನೆಗೊಳಿಸುವುದು ಮತ್ತು ಜಾಗತಿಕ ಆರ್ಥಿಕತೆಗೆ ಅಡ್ಡಿಯಾಗಿದ್ದ ಹಡಗು ಸಂಚಾರವನ್ನು ಪುನಃ ಪ್ರಾರಂಭಿಸುವುದು ಈ ಒಪ್ಪಂದದ ಮುಖ್ಯ ಗುರಿಯಾಗಿದೆ.


ಹೊರ್ಮುಜ್ ಜಲಸಂಧಿ ಯಾವಾಗ ಮುಕ್ತವಾಗಲಿದೆ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಣೆಯ ಪ್ರಕಾರ, ಹೊರ್ಮುಜ್ ಜಲಸಂಧಿಯು ಶುಕ್ರವಾರದಿಂದ ಅಧಿಕೃತವಾಗಿ ಮುಕ್ತಗೊಳ್ಳಲಿದೆ.


ಈ ಒಪ್ಪಂದದಿಂದ ಆಗುವ ಪ್ರಮುಖ ಬದಲಾವಣೆಗಳೇನು?

ಒಪ್ಪಂದದ ಭಾಗವಾಗಿ ಇರಾನ್ ನೌಕಾಪಡೆಯ ಮೇಲಿನ ನಿರ್ಬಂಧಗಳನ್ನು ತಕ್ಷಣದಿಂದ ಹಿಂಪಡೆಯಲಾಗುತ್ತದೆ ಮತ್ತು ಜಲಮಾರ್ಗದಲ್ಲಿ ಅಡಗಿಸಿಡಲಾದ ಸ್ಫೋಟಕಗಳನ್ನು ತೆರವುಗೊಳಿಸಲಾಗುತ್ತದೆ.


ಜಾಗತಿಕ ನಾಯಕರು ಈ ನಿರ್ಧಾರವನ್ನು ಹೇಗೆ ನೋಡುತ್ತಿದ್ದಾರೆ?

ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಜಪಾನ್‌ನಂತಹ ದೇಶಗಳ ನಾಯಕರು ಈ ಒಪ್ಪಂದವನ್ನು ಪ್ರಾದೇಶಿಕ ಸ್ಥಿರತೆ, ಆರ್ಥಿಕ ಪುನಶ್ಚೇತನ ಮತ್ತು ಸುರಕ್ಷಿತ ನೌಕಾಯಾನದತ್ತ ಇಟ್ಟ ಭರವಸೆಯ ಹೆಜ್ಜೆ ಎಂದು ಬಣ್ಣಿಸಿದ್ದಾರೆ.


ಈ ಜಲಸಂಧಿಯ ಮಹತ್ವವೇನು?

ಹೊರ್ಮುಜ್ ಜಲಸಂಧಿಯು ತೈಲ ಮತ್ತು ಅನಿಲ ಸಾಗಣೆಗೆ ಅತ್ಯಂತ ಪ್ರಮುಖವಾದ ಜಲಮಾರ್ಗವಾಗಿದ್ದು, ಇದರ ನಿರ್ಬಂಧವು ಜಾಗತಿಕ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು.

ಪ್ರಮುಖ ಅಂಕಿಅಂಶಗಳು

ಶೇ 95ಜಪಾನ್ ಮಧ್ಯಪ್ರಾಚ್ಯದಿಂದ ಆಮದು ಮಾಡಿಕೊಳ್ಳುವ ತೈಲದ ಪ್ರಮಾಣ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಅಮೆರಿಕ-ಇರಾನ್ ನಡುವಿನ ಕದನ ವಿರಾಮ ಒಪ್ಪಂದ ಹಾಗೂ ಹೊರ್ಮುಜ್ ಜಲಸಂಧಿ ಪುನರಾರಂಭದ ನಿರ್ಧಾರವನ್ನು ಜಾಗತಿಕ ನಾಯಕರು ಸ್ವಾಗತಿಸಿದ್ದಾರೆ.

ತೈಲ ಮತ್ತು ಅನಿಲ ಸಾಗಣೆಗೆ ಪ್ರಮುಖ ಜಲಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರ ಸ್ಥಗಿತಗೊಂಡಿರುವುದು ಜಾಗತಿಕ ಆರ್ಥಿಕತೆಯ ಮೇಲೆ ಭಾರಿ ‍‍ಪರಿಣಾಮ ಬೀರಿತ್ತು. ಸಂಘರ್ಷವನ್ನು ಕೊನೆಗೊಳಿಸಲು ಮತ್ತು ಜಲಸಂಧಿಯನ್ನು ಮರುಮುಕ್ತಗೊಳಿಸಲು ಇರಾನ್‌ನೊಂದಿಗೆ ಒಪ್ಪಂದ ಏರ್ಪಟ್ಟಿದೆ ಎಂದು ಭಾನುವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದು, ಇದನ್ನು ಜಾಗತಿಕ ನಾಯಕರು ಬರಮಾಡಿಕೊಂಡಿದ್ದಾರೆ.

ಒಪ್ಪಂದದ ಸಂಪೂರ್ಣ ವಿವರಗಳು ಇನ್ನಷ್ಟೇ ಹೊರಬರಬೇಕಿದೆ. ಆದರೆ ಇರಾನ್ ನೌಕಾಪಡೆಯ ಮೇಲಿನ ನಿರ್ಬಂಧ ತಕ್ಷಣದಿಂದ ಹಿಂಪಡೆಯಲಾಗುತ್ತದೆ, ಹೋರ್ಮುಜ್ ಜಲಸಂಧಿ ಶುಕ್ರವಾರದಿಂದ ಮುಕ್ತಗೊಳ್ಳಲಿದೆ ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

ಶುಕ್ರವಾರ ಒಪ್ಪಂದವು ಅಂತಿಮ ರೂಪ ಪಡೆಯುವ ನಿರೀಕ್ಷೆಯಿದ್ದು, ಆವರೆಗೆ ಜಲಮಾರ್ಗದಲ್ಲಿ ಅಡಗಿಸಿಡಲಾಗಿರುವ ಸ್ಫೋಟಕಗಳನ್ನು ತೆರವುಗೊಳಿಸಲಾಗುತ್ತದೆ ಎನ್ನಲಾಗಿದೆ.

'ವಿಶ್ವದ ಹಡಗುಗಳೇ, ನಿಮ್ಮ ಇಂಜಿನ್‌ಗಳನ್ನು ಚಾಲನೆ ಮಾಡಿ' ಎಂದು ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಅವರ ಈ ಪ್ರಕಟಣೆಯ ಬೆನ್ನಲ್ಲೇ ಜಾಗತಿಕ ನಾಯಕರಿಂದ ಹೇಳಿಕೆಗಳು ಹೊರಬಿದ್ದಿವೆ.‌

'ಯುದ್ಧವನ್ನು ಕೊನೆಗೊಳಿಸಲು, ಪ್ರಾದೇಶಿಕ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹೊರ್ಮುಜ್ ಜಲಸಂಧಿಯನ್ನು ಮರುಮುಕ್ತಗೊಳಿಸಲು ಇಟ್ಟ ಅತ್ಯಂತ ಪ್ರಮುಖ ಹೆಜ್ಜೆ ಇದು' ಎಂದು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಬಣ್ಣಿಸಿದ್ದಾರೆ. 'ಯಾವುದೇ ಸುಂಕವಿಲ್ಲದ ಮುಕ್ತ ನೌಕಾಯಾನವನ್ನು ಮರುಸ್ಥಾಪಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.

'ಯಾವುದೇ ನಿರ್ಬಂಧ ಅಥವಾ ಸುಂಕವಿಲ್ಲದೆ ಕಡಲ ಸಂಚಾರವನ್ನು ಪುನರಾರಂಭಿಸುವುದು ಪ್ರಾದೇಶಿಕ ಸ್ಥಿರತೆ ಮತ್ತು ಜಾಗತಿಕ ಆರ್ಥಿಕತೆಗೆ ಅತ್ಯಗತ್ಯವಾಗಿದೆ' ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಹೇಳಿದ್ದಾರೆ.

ಕದನ ವಿರಾಮ ಒಪ್ಪಂದ ಸಂಬಂಧ ಉಭಯ ದೇಶಗಳನ್ನೂ ಅಭಿನಂದಿಸಿರುವ ಜರ್ಮನಿಯ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್, 'ಇದು ಆರ್ಥಿಕ ಪುನಶ್ಚೇತನ ಹಾಗೂ ಪಶ್ಚಿಮ ಏಷ್ಯಾದಲ್ಲಿ ಸುರಕ್ಷತೆಗೆ ದಾರಿ ಮಾಡಿಕೊಡಲಿದೆ' ಎಂದು ಹೇಳಿದ್ದಾರೆ.

ಚುನಾವಣೆಯ ಬಳಿಕ ಬೆಲೆ ಏರಿಕೆ ಬಿಸಿ: ಪೆಟ್ರೋಲ್, ಡೀಸೆಲ್‌ ದರ ಏರಿಕೆಗೆ ಕಾರಣಗಳಿವು

'ಹೊರ್ಮುಜ್ ಜಲಸಂಧಿಯ ಅಡಚಣೆಯಿಂದಾಗಿ ನ್ಯೂಜಿಲೆಂಡ್‌ನ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಪ್ರಮುಖ ಕಡಲ ಮಾರ್ಗವನ್ನು ಸುರಕ್ಷಿತವಾಗಿ ಮರುಮುಕ್ತಗೊಳಿಸುವ ಹೆಜ್ಜೆಗಳನ್ನು ಸ್ವಾಗತಿಸುತ್ತೇವೆ' ಎಂದು ವಿದೇಶಾಂಗ ಸಚಿವ ವಿನ್‌ಸ್ಟನ್ ಪೀಟರ್ಸ್ ಹೇಳಿದ್ದಾರೆ.

'ಪರಿಹಾರದ ಕಡೆಗೆ ಇಟ್ಟ ದೊಡ್ಡ ಹೆಜ್ಜೆ ಇದು, ಹೊರ್ಮುಜ್ ಜಲಸಂಧಿಯಲ್ಲಿ ಮುಕ್ತ ಮತ್ತು ಸುರಕ್ಷಿತ ನೌಕಾಯಾನವನ್ನು ವಾಸ್ತವವಾಗಿ ಖಚಿತಪಡಿಸಿಕೊಳ್ಳಬೇಕು' ಎಂದು ಜಪಾನ್ ಪ್ರಧಾನಿ ಸನಾ ತಕೈಚಿ ಹೇಳಿದ್ದಾರೆ. ಜಪಾನ್ ತನ್ನ ತೈಲದ ಸುಮಾರು ಶೇ 95 ರಷ್ಟನ್ನು ಮಧ್ಯಪ್ರಾಚ್ಯದಿಂದ ಆಮದು ಮಾಡಿಕೊಳ್ಳುತ್ತದೆ.

'ಈ ಒಪ್ಪಂದವು ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿ ಮತ್ತು ಭದ್ರತೆಗೆ ದಾರಿ ಮಾಡಿಕೊಡಲಿ' ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಆಶಿಸಿದ್ದಾರೆ.

ಆಧಾರ: ದಿ ವಾಷಿಂಗ್ಟನ್ ಪೋಸ್ಟ್, ನ್ಯೂಯಾರ್ಕ್ ಟೈಮ್ಸ್

ವಿದೇಶಿ ನಾಗರಿಕರಿಗೆ ಆಂಥ್ರೋಪಿಕ್‌ನ ಮೀಥೋಸ್, ಫೇಬಲ್ ಬಳಕೆಗೆ ಅಮೆರಿಕ ನಿರ್ಬಂಧ
Dailyhunt
Disclaimer: This content has not been generated, created or edited by Dailyhunt. Publisher: Prajavani