Dailyhunt Logo
  • Light mode
    Follow system
    Dark mode
    • Play Story
    • App Story
ವಿದೇಶಿ ನಾಗರಿಕರಿಗೆ ಆಂಥ್ರೋಪಿಕ್‌ನ ಮೀಥೋಸ್, ಫೇಬಲ್ ಬಳಕೆಗೆ ಅಮೆರಿಕ ನಿರ್ಬಂಧ

ವಿದೇಶಿ ನಾಗರಿಕರಿಗೆ ಆಂಥ್ರೋಪಿಕ್‌ನ ಮೀಥೋಸ್, ಫೇಬಲ್ ಬಳಕೆಗೆ ಅಮೆರಿಕ ನಿರ್ಬಂಧ

ಸ್ಯಾನ್‌ಫ್ರಾನ್ಸಿಸ್ಕೊ: ಅತ್ಯಾಧುನಿಕ ಎ.ಐ ಮಾಡೆಲ್‌ಗಳಾದ 'ಫೇಬಲ್ 5' ಮತ್ತು 'ಮಿಥೋಸ್ 5' ಮಾದರಿಗಳನ್ನು ಬಳಸಲು ವಿದೇಶಿಗರಿಗೆ ನಿರ್ಬಂಧಿಸಲಾಗಿದೆ ಎಂದು ಆಂಥ್ರೋಪಿಕ್ ಶುಕ್ರವಾರ ಹೇಳಿದೆ. ಡೊನಾಲ್ಡ್ ಟ್ರಂ‍‍ಪ್ ಸರ್ಕಾರದ ಆದೇಶ ‍‍ಪಾಲನೆಗೆ ಹೀಗೆ ಮಾಡಲಾಗಿದೆ ಎಂದು ಅದು ಹೇಳಿದೆ.

ಜಾಗತಿಕ ಬ್ಯಾಂಕಿಂಗ್ ವ್ಯವಸ್ಥೆಯ ದೋಷಗಳನ್ನು ಪತ್ತೆ ಮಾಡಿದ ಆಂಥ್ರೋಪಿಕ್‌ ಮಿಥೋಸ್

ಆಂಥ್ರೋಪಿಕ್‌ನಲ್ಲಿ ಕೆಲಸ ಮಾಡುವ ವಿದೇಶಿ ನಾಗರಿಕರಿರೂ ಇದರಿಂದ ಪರಿಣಾಮ ಬೀರಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಪೋಸ್ಟ್‌ ಮೂಲಕ ಆಂಥ್ರೋಪಿಕ್ ಮಾಹಿತಿ ನೀಡಿದೆ.

ಅತ್ಯಂತ ಮುಂದುವರಿದ ಎ.ಐ ಮಾದರಿಗಳ ಲಭ್ಯತೆಯನ್ನು ವಿದೇಶಿಗರಿಗೆ ನಿರ್ಬಂಧಿಸಲು ಅಮೆರಿಕ ಸರ್ಕಾರ ಕೈಗೊಂಡಿರುವ ಕ್ರಮ ಇದಾಗಿದೆ.

ಹೊಸ ಎ.ಐ ಮಾದರಿಗಳ ಲಭ್ಯತೆಯನ್ನು ನಿಯಂತ್ರಿಸುವ ಈ ಆದೇಶವು ವಾಣಿಜ್ಯ ಇಲಾಖೆಯಿಂದ ಬಂದಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ಅವರ ಹೆಸರನ್ನು ಗೋಪ್ಯವಾಗಿಡಬೇಕು ಎನ್ನುವ ಷರತ್ತಿನೊಂದಿಗೆ ಮಾಹಿತಿ ನೀಡಿದ್ದಾರೆ. ಈ ನಿರ್ಬಂಧಗಳು ಎಷ್ಟು ದಿನಗಳವರೆಗೆ ಇರಲಿವೆ ಎಂಬುದು ಸ್ಪಷ್ಟವಾಗಿಲ್ಲ.

ಇದು ತೀವ್ರವಾದ ನಡೆ ಎಂದು ಹೇಳಿರುವ ಆಂಥ್ರೋಪಿಕ್ ಗ್ರಾಹಕರಿಗೆ ಉಂಟಾಗಿರುವ ಈ ಅಡಚಣೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಹೇಳಿದೆ.

ಎ.ಐನಿಂದ ಉದ್ಯೋಗ ಕಡಿತವೇ? ಬೇರೆಯದೇ ಕಥೆ ಹೇಳುತ್ತಿದೆ ಫ್ರಾನ್ಸ್‌ನ ಕಂಪನಿ!

'ಇದು ಒಂದು ತಪ್ಪು ತಿಳುವಳಿಕೆ ಎಂದು ನಾವು ನಂಬುತ್ತೇವೆ. ಸಾಧ್ಯವಾದಷ್ಟು ಬೇಗ ಲಭ್ಯತೆಯನ್ನು ಪುನಃಸ್ಥಾಪಿಸಲು ಕೆಲಸ ಮಾಡುತ್ತಿದ್ದೇವೆ' ಎಂದು ಪೋಸ್ಟ್‌ನಲ್ಲಿ ಹೇಳಿದೆ.

ಸರ್ಕಾರ ಈ ವಿಷಯವನ್ನು ನಿರ್ವಹಿಸಿದ ರೀತಿಯನ್ನು ಒಪ್ಪುವುದಿಲ್ಲ. ಶುಕ್ರವಾರ ಮಧ್ಯಾಹ್ನ ನಮಗೆ ಅಮೆರಿಕ ಸರ್ಕಾರದಿಂದ ಈ ನಿರ್ದೇಶನ ಬಂದಿದ್ದು, ಅದರಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಯಾವುದೇ ನಿರ್ದಿಷ್ಟ ಸಂಗತಿಗಳನ್ನು ಉಲ್ಲೇಖಿಸಿಲ್ಲ ಎಂದು ಕಂಪನಿ ಹೇಳಿದೆ.

ಅತ್ಯಂತ ಸುಧಾರಿತ ಎ.ಐ ಮಾದರಿಗಳನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸುವ ಮುನ್ನ, ಅವುಗಳಿಂದ ಎದುರಾಗಬಹುದಾದ ರಾಷ್ಟ್ರೀಯ ಭದ್ರತೆಯ ಅಪಾಯಗಳನ್ನು ಒಂದು ತಿಂಗಳೊಳಗೆ ಪರಿಶೀಲಿಸಲು ಫೆಡರಲ್ ಸರ್ಕಾರಕ್ಕೆ ಚೌಕಟ್ಟೊಂದನ್ನು ರೂಪಿಸುವ ಕಾರ್ಯಕಾರಿ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ 10 ದಿನಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಎ.ಐ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಆಂಥ್ರೋಪಿಕ್‌ನ ಮಿಥೋಸ್: ಚೀನಾ, ರಷ್ಯಾಗೆ ನಡುಕ

ತನ್ನ ಪೋಸ್ಟ್‌ನ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಆಂಥ್ರೊಪಿಕ್ ನಿರಾಕರಿಸಿದೆ. ಪ್ರತಿಕ್ರಿಯೆ ಕೋರಿ ಮಾಡಿದ ಮನವಿಗೆ ಶ್ವೇತಭವನದಿಂದಗೂ ಪ್ರತಿಕ್ರಿಯೆ ಬಂದಿಲ್ಲ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಈ ವಾರವಷ್ಟೇ ಫೇಬಲ್ ಮಾದರಿಯನ್ನು ಆಂಥ್ರೊಪಿಕ್ ಬಿಡುಗಡೆ ಮಾಡಿತ್ತು. ಮೀಥೋಸ್ ಮಾದರಿಯು ಅತ್ಯಂತ ಸುಧಾರಿತವಾಗಿದ್ದು, ಸೈಬರ್ ಭದ್ರತೆಯ ಕಾರಣ ನೀಡಿ ಅದನ್ನು ಕೆಲವು ಕಂಪನಿಗಳಿಗಷ್ಟೇ ಸೀಮಿತಗೊಳಿಸಿತ್ತು.

ಆಧಾರ: ದಿ ನ್ಯೂಯಾರ್ಕ್ ಟೈಮ್ಸ್, ರಾಯಿಟರ್ಸ್ ಹಾಗೂ ಎಎಫ್‌ಪಿ

ಇರಾನ್ ಮೇಲೆ ಯುದ್ಧ ಸಾರಿ ಚಕ್ರವ್ಯೂಹದಲ್ಲಿ ಸಿಲುಕಿದ ಅಮೆರಿಕ ಅಧ್ಯಕ್ಷ ಟ್ರಂಪ್
Dailyhunt
Disclaimer: This content has not been generated, created or edited by Dailyhunt. Publisher: Prajavani