Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್‌ನ ಖಾರ್ಗ್ ದ್ವೀಪದ ಮೇಲೆ ದಾಳಿ: ಟೆಹರಾನ್‌ನಲ್ಲೂ ಸ್ಫೋಟದ ಸದ್ದು

ಇರಾನ್‌ನ ಖಾರ್ಗ್ ದ್ವೀಪದ ಮೇಲೆ ದಾಳಿ: ಟೆಹರಾನ್‌ನಲ್ಲೂ ಸ್ಫೋಟದ ಸದ್ದು

ಟೆಹರಾನ್: ಎರಡು ಸೇತುವೆ ಸಹಿತ ಪ್ರಮುಖ ಮೂಲಭೂತ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಹಾಗೂ ಇಸ್ರೇಲ್ ಮಂಗಳವಾರ ದಾಳಿ ನಡೆಸಿದೆ ಎಂದು ಇರಾನ್ ಹೇಳಿದೆ.

ಕದನ ವಿರಾಮದ ಬಗ್ಗೆ ಪಾಕಿಸ್ತಾನದ ಮಾತುಕತೆ ನಿರ್ಣಾಯಕ ಹಂತದಲ್ಲಿದೆ: ಇರಾನ್

ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರ ಖಾರ್ಗ್ ದ್ವೀಪದ ಮೇಲೂ ದಾಳಿ ನಡೆದಿದೆ ಎಂದು ಸ್ಥಳೀಯ ಮಾಧ್ಯಮ 'ಮೆಹರ್' ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆದರೆ ಈ ದಾಳಿ ಮಿಲಿಟರಿ ಗುರಿಗಳ ಮೇಲೆ ನಡೆದಿದೆ ಎಂದು ಅಮೆರಿಕದ ಮಾಧ್ಯಮವೊಂದರ ವರದಿಗಾರ ತಿಳಿಸಿದ್ದಾರೆ.

ಹೊರ್ಮುಜ್ ಜಲಸಂಧಿ ಮುಕ್ತಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಗಡುವು ಸಮೀಪಿಸುತ್ತಿದ್ದಂತೆಯೇ ಈ ದಾಳಿ ನಡೆದಿದೆ.

ನನ್ನನ್ನು ಸೇರಿದಂತೆ 1.4 ಕೋಟಿ ಜನರು ಪ್ರಾಣತ್ಯಾಗಕ್ಕೆ ಸಿದ್ದ: ಇರಾನ್ ಅಧ್ಯಕ್ಷ

ದಿನದ ಆರಂಭದಲ್ಲಿ ಟೆಹರಾನ್‌ನ ವಿವಿಧ ಭಾಗಗಳಲ್ಲಿ ದೊಡ್ಡ ಸ್ಫೋಟ ಸದ್ದು ಕೇಳಿ ಬಂದಿದೆ. ರಾಜಧಾನಿಗೆ ಹೊಂದಿಕೊಂಡಂತಿರುವ ಅಲ್ಬ್‌ರೋಜ್ ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿ 18 ಮಂದಿ ಸಾವಿಗೀಡಾಗಿದ್ದಾರೆ ಎಂದು ಇರಾನ್ ಮಾಧ್ಯಮಗಳು ತಿಳಿಸಿವೆ. ರಾಜಧಾನಿಯಲ್ಲಿರುವ ರಫಿ-ನಿಯಾ ಸಭಾಂಗಣ ದಾಳಿಯಲ್ಲಿ ಸಂಪೂರ್ಣವಾಗಿ ನಾಶವಾಗಿದೆ.

ಆ ಬಳಿಕ ಇರಾನ್ ಕಡೆಯಿಂದ ಇಸ್ರೇಲ್ ಮೇಲೆ ದಾಳಿ ನಡೆದಿದ್ದು, ಅದನ್ನು ವಾಯುರಕ್ಷಣಾ ವ್ಯವಸ್ಥೆ ಮೂಲಕ ವಿಫಲಗೊಳಿಸಲಾಗಿದೆ ಎಂದು ಇಸ್ರೇಲ್ ತಿಳಿಸಿದೆ.

(ಎಎಫ್‌ಪಿ ವರದಿ)

'ಸುರಕ್ಷಿತ ತಾಣ' ದುಬೈ ರಿಯಲ್‌ ಎಸ್ಟೇಟ್‌ಗೆ ಇರಾನ್‌ ಪ್ರಹಾರ: ಭಾರತೀಯರಿಗೂ ಆಘಾತ
Dailyhunt
Disclaimer: This content has not been generated, created or edited by Dailyhunt. Publisher: Prajavani