Dailyhunt Logo
  • Light mode
    Follow system
    Dark mode
    • Play Story
    • App Story
ಜಪಾನ್ ಜೀವನ ದುಬಾರಿ: ಮೂವರಿರುವ ಕುಟುಂಬಕ್ಕೆ ಬೇಕು ತಿಂಗಳಿಗೆ ₹ 2.9 ಲಕ್ಷ!

ಜಪಾನ್ ಜೀವನ ದುಬಾರಿ: ಮೂವರಿರುವ ಕುಟುಂಬಕ್ಕೆ ಬೇಕು ತಿಂಗಳಿಗೆ ₹ 2.9 ಲಕ್ಷ!

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಜಪಾನ್ ಜೀವನ ದುಬಾರಿ: ಮೂವರಿರುವ ಕುಟುಂಬಕ್ಕೆ ಬೇಕು ತಿಂಗಳಿಗೆ ₹ 2.9 ಲಕ್ಷ!

ಒಂದು ಸಾಲಿನಲ್ಲಿಜಪಾನ್‌ ರಾಜಧಾನಿ ಟೋಕಿಯಾದಲ್ಲಿ ಮೂವರು ಸದಸ್ಯರಿರುವ ಮಧ್ಯಮ ವರ್ಗದ ಕುಟುಂಬವೊಂದು ನೆಮ್ಮದಿಯಿಂದ ಜೀವನ ನಡೆಸಲು ತಿಂಗಳಿಗೆ ಕನಿಷ್ಠ ₹ 2.9 ಲಕ್ಷ ಅಗತ್ಯ ಎಂದು ವರದಿಯಾಗಿದೆ.

ಪ್ರಮುಖ ಮುಖ್ಯಾಂಶಗಳು• ಜೀವನ ವೆಚ್ಚದ ಸವಾಲುಟೋಕಿಯಾದಲ್ಲಿ ವಾಸಿಸುತ್ತಿರುವ ಸುನಾಕ್ಷಿ ಶರ್ಮಾ ಅವರ ಪ್ರಕಾರ, ಮೂವರ ಸದಸ್ಯರಿರುವ ಕುಟುಂಬಕ್ಕೆ ಮೂಲಭೂತ ಅವಶ್ಯಕತೆಗಳಿಗಾಗಿ ತಿಂಗಳಿಗೆ ಸುಮಾರು ₹ 2.9 ಲಕ್ಷ ಖರ್ಚಾಗುತ್ತದೆ.• ಪ್ರಮುಖ ಮಾಸಿಕ ವೆಚ್ಚಗಳುಮನೆ ಬಾಡಿಗೆಗೆ ₹ 1.16 ಲಕ್ಷ, ಮಗುವಿನ ಡೇ-ಕೇರ್‌ಗೆ ₹ 58,000 ಮತ್ತು ಆಹಾರ ಪದಾರ್ಥಗಳಿಗೆ ₹ 87,000 ದವರೆಗೆ ದೊಡ್ಡ ಮೊತ್ತದ ಹಣ ವ್ಯಯವಾಗುತ್ತದೆ.• ಸಾಗರೋತ್ತರ ಜೀವನದ ವಾಸ್ತವವಿದೇಶಿ ಜೀವನ ಮೇಲ್ನೋಟಕ್ಕೆ ಸುಂದರವಾಗಿ ಕಂಡರೂ, ಟೋಕಿಯಾದಂತಹ ನಗರಗಳಲ್ಲಿ ಹೆಚ್ಚಿನ ಬಾಡಿಗೆ ಮತ್ತು ಜೀವನ ನಿರ್ವಹಣಾ ವೆಚ್ಚಗಳು ಸವಾಲಾಗಿವೆ.• ನೆಟ್ಟಿಗರ ಮಿಶ್ರ ಪ್ರತಿಕ್ರಿಯೆಗಳುಕೆಲವು ನೆಟ್ಟಿಗರು ಈ ಖರ್ಚುಗಳನ್ನು ಟೋಕಿಯಾದ ಹೆಚ್ಚಿನ ಸಂಬಳದೊಂದಿಗೆ ಹೋಲಿಸಿದರೆ, ಇನ್ನು ಕೆಲವರು ಸ್ವಂತ ಕಾರು ಮತ್ತು ನಗರ ಕೇಂದ್ರದಲ್ಲಿ ವಾಸಿಸುವುದರಿಂದ ಖರ್ಚು ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.• ಭಾರತದೊಂದಿಗೆ ಜೀವನ ವೆಚ್ಚದ ಹೋಲಿಕೆಮುಂಬೈನ ಐಷಾರಾಮಿ ಪ್ರದೇಶಗಳಾದ ಅಂಧೇರಿಯ ಜೀವನ ಶೈಲಿ ಮತ್ತು ಟೋಕಿಯಾದ ಜೀವನ ವೆಚ್ಚವನ್ನು ಹೋಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.ಪ್ರಮುಖ ಅಂಕಿಅಂಶಗಳು₹ 2.9 ಲಕ್ಷಒಟ್ಟು ಮಾಸಿಕ ಜೀವನ ವೆಚ್ಚ₹ 1.16 ಲಕ್ಷಒಟ್ಟು ಮನೆ ಬಾಡಿಗೆ ವೆಚ್ಚ₹ 58,000ಮಕ್ಕಳ ಡೇ-ಕೇರ್ ವೆಚ್ಚ₹ 58,000-87,000ಭಾರತೀಯ ಆಹಾರ ದಿನಸಿ ವೆಚ್ಚ₹ 29,000-58,000ಸಾರಿಗೆ ವೆಚ್ಚಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ನವದೆಹಲಿ: ಜಪಾನ್‌ ದೇಶದಲ್ಲಿ ಜೀವನ ವೆಚ್ಚ ದುಬಾರಿ ಎಂದು ಟೋಕಿಯಾದಲ್ಲಿ ವಾಸಿಸುತ್ತಿರುವ ಭಾರತೀಯ ಮಹಿಳೆ ಸುನಾಕ್ಷಿ ಶರ್ಮಾ ಅವರ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚೆಗೆ ಸುನಾಕ್ಷಿ ಶರ್ಮಾ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ದುಬಾರಿ ಜೀವನ ಕುರಿತಾದ ವಿಡಿಯೊವೊಂದನ್ನು ಹಂಚಿಕೊಂಡಿದ್ದರು. ಇದರಲ್ಲಿ ಮೂವರು ಸದಸ್ಯರ ಕುಟುಂಬವೊಂದು ಸಾಮಾನ್ಯ ಜೀವನ ನಡೆಸಬೇಕಾದರೆ ತಿಂಗಳಿಗೆ 2.9 ಲಕ್ಷ ಖರ್ಚಾಗುತ್ತದೆ ಎಂದು ಹೇಳಿದ್ದಾರೆ.

ಸುನಾಕ್ಷಿ ಶರ್ಮಾ ಅವರ ಮಾಸಿಕ ಖರ್ಚುಗಳ ವಿವರ ಹೀಗಿದೆ...

  • * ಮನೆ ಬಾಡಿಗೆ (ವಿದ್ಯುತ್, ನೀರು ಇತ್ಯಾದಿ)- ಸುಮಾರು ₹ 1.16 ಲಕ್ಷ
    * ಮಗನ ಡೇ-ಕೇರ್ (ಪಾಲನಾ ಕೇಂದ್ರ)- ಅಂದಾಜು ₹ 58,000
    * ಭಾರತೀಯ ಆಹಾರ ದಿನಸಿ- ಸುಮಾರು ₹ 58,000-87,000
    * ಸಾರಿಗೆ ಅಥವಾ ವಾಹನ ನಿರ್ವಹಣೆ- ₹ 29,000-58,000

ಮೂವರು ಸದಸ್ಯರ ಕುಟುಂಬ ಜೀವನ ನಡೆಸಬೇಕಾದರೆ ಕನಿಷ್ಠ ₹ 2.9 ಲಕ್ಷ ಬೇಕು ಎಂದು ಹೇಳಿದ್ದಾರೆ. ಇಲ್ಲಿ ಭಾರತೀಯ ದಿನಸಿ ಪದಾರ್ಥಗಳಿಗೆ ಹೆಚ್ಚಿನ ಬೆಲೆ ಇರುತ್ತದೆ ಎಂದು ಅವರು ವಿವರಿಸಿದ್ದಾರೆ.

ವಿಡಿಯೊಗೆ ನೆಟ್ಟಿಗರ ಪ್ರತಿಕ್ರಿಯೆಗಳು...

ಸುನಾಕ್ಷಿ ಶರ್ಮಾ ಅವರ ವಿಡಿಯೊಗೆ ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಭಾರತದ ಮೆಟ್ರೊ ನಗರಗಳಿಗೆ ಹೋಲಿಸಿದರೆ ಇದು ದುಬಾರಿ ಎನಿಸಿದರೂ, ಟೋಕಿಯಾದಲ್ಲಿ ಸಂಬಳ ಕೂಡ ಹೆಚ್ಚಿರುತ್ತದೆ ಎಂದು ವಾದಿಸಿದ್ದಾರೆ.

ಸಾರ್ವಜನಿಕ ಸಾರಿಗೆ ಉತ್ತಮವಾಗಿರುವ ಟೋಕಿಯೊದಂತಹ ನಗರದಲ್ಲಿ ಸ್ವಂತ ಕಾರು ಇಟ್ಟುಕೊಳ್ಳುವುದು ಮತ್ತು ನಗರದ ಮಧ್ಯಭಾಗದಲ್ಲೇ ವಾಸಿಸುವುದು ಖರ್ಚನ್ನು ಹೆಚ್ಚಿಸುತ್ತದೆ ಎಂದು ಇನ್ನು ಕೆಲವರು ಹೇಳಿದ್ದಾರೆ.

ಬಹಳಷ್ಟು ಜನರು ವಿದೇಶಿ ಜೀವನ ಮೇಲ್ನೋಟಕ್ಕೆ ಸುಂದರವಾಗಿ ಕಂಡರೂ, ಅಲ್ಲಿ ದಿನನಿತ್ಯದ ಖರ್ಚುಗಳು ಸವಾಲಿನದ್ದಾಗಿರುತ್ತವೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಮುಂಬೈನ ಅಂಧೇರಿ ಪಶ್ಚಿಮ ಪ್ರದೇಶದಲ್ಲಿರುವ ಐಷಾರಾಮಿ ಜೀವನಕ್ಕೂ ಟೋಕಿಯೊ ನಗರದ ಮಧ್ಯ ಭಾಗದಲಿರುವ ಪ್ರದೇಶಗಳಲ್ಲಿನ ಬಾಡಿಗೆ ದರಕ್ಕೆ ಹೋಲಿಕೆ ಮಾಡಲಾಗಿದೆ. ಅಂಧೇರಿಯಲ್ಲಿ ಇದೇ ರೀತಿಯ ಜೀವನಶೈಲಿಗೆ ತಿಂಗಳಿಗೆ ₹ 1.2 ಲಕ್ಷ ಬಾಡಿಗೆ ಇರುತ್ತದೆ ಎಂದು ಕೆಲವರು ಪೋಸ್ಟ್ ಮಾಡಿದ್ದಾರೆ.

ಹೊರ್ಮುಜ್‌ ವಿಚಾರವಾಗಿ ಜಪಾನ್, ಯುರೋಪ್‌ ರಾಷ್ಟ್ರಗಳಿಂದ ಜಂಟಿ ಹೇಳಿಕೆಹೊರ್ಮುಜ್‌ಗೆ ಯುದ್ಧ ನೌಕೆ ಕಳುಹಿಸುವುದಿಲ್ಲ ಎಂದ ಜಪಾನ್, ಆಸ್ಟ್ರೇಲಿಯಾ
Dailyhunt
Disclaimer: This content has not been generated, created or edited by Dailyhunt. Publisher: Prajavani