ಜನಪ್ರಿಯ ಹಿಂದಿ ಧಾರಾವಾಹಿ ಮಹಾಭಾರತದಲ್ಲಿ ಕುಂತಿಯ ಪಾತ್ರ ನಿರ್ವಹಿಸಿದ್ದ ನಟಿ ಶಫಕ್ ನಾಜ್ ಅವರು ಇತ್ತೀಚೆಗೆ ಕರ್ವಾ ಚೌತ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದರು.
ಕುಟುಂಬ, ಸಂಬಂಧದ ಬಗ್ಗೆ ಟ್ರೋಲ್; ಖಡಕ್ ತಿರುಗೇಟು ಕೊಟ್ಟ ರಶ್ಮಿಕಾ-ವಿಜಯ್ಈ ಕುರಿತು ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟ್ರೋಲ್ ಮಾಡಲಾಗಿತ್ತು.
ಇದೀಗ ಈ ಎಲ್ಲಾ ಟ್ರೋಲ್ ಹಾಗೂ ನಿಂದನೆಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಮೊದಲು ಹೆಣ್ಣಿನ ಸ್ನೇಹ ಮಾಡಿ: ಪಾಂಡ್ಯ ಜತೆ ಟ್ರೋಲ್ ಮಾಡಿದವರಿಗೆ ನಟಿ ಅಮೀಷಾ ಚಾಟಿಕರ್ವಾ ಚೌತ್ ಹಬ್ಬವನ್ನು ಪತಿ ಜೀಶಾನ್ ಪೇವೇಕರ್ ಅವರೊಂದಿಗೆ ಸಡಗರದಿಂದ ಆಚರಿಸಿಕೊಂಡಿದ್ದರು. ಕೆಂಪು ಬಣ್ಣ ಸೀರೆ ತೊಟ್ಟು, ಕೈ ತುಂಬಾ ಬಳೆ, ಹಣೆಗೆ ಸಿಂಧೂರವಿಟ್ಟು ಹಬ್ಬವನ್ನು ಆಚರಿಸಿದ್ದರು. ಹಬ್ಬದ ಆಚರಣೆಯ ಫೋಟೊಗಳನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ಶಫಕ್ ನಾಜ್, ಮುಸ್ಲಿಂ ಧರ್ಮದವರಾಗಿದ್ದು, ಹಿಂದೂ ಹಬ್ಬವನ್ನು ಆಚರಿಸಿದ್ದಕ್ಕೆ ಹಾಗೂ ಸಿಂಧೂರ ಇಟ್ಟಿದ್ದಕ್ಕೆ, 'ಧರ್ಮ ಬದಲಾಯಿಸಿದ್ದೀರಾ?' ಎಂದು ಅನೇಕರು ಕಮೆಂಟ್ ಮಾಡಿದ್ದರು
ಈ ಕುರಿತು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿರುವ ಅವರು, 'ನನ್ನ ಪತಿ ಜೀಶಾನ್ ಪೇವೇಕರ್ ಮುಸ್ಲಿಂ ಆಗಿದ್ದಾರೆ. ಹಣೆಗೆ ಸಿಂಧೂರ ಧರಿಸಿದ ತಕ್ಷಣ ಧರ್ಮ ಬದಲಾಗುತ್ತದೆಯೇ, ಧರ್ಮ ಮತ್ತು ನಂಬಿಕೆಗಳು ಅಷ್ಟೊಂದು ಹಗುರವೇ' ಎಂದು ಟೀಕಿಸಿದವರನ್ನು ಪ್ರಶ್ನಿಸಿದ್ದಾರೆ.
'ನಿತ್ಯ ಎಷ್ಟು ಬಾರಿ ನಮಾಜ್ ಮಾಡುತ್ತೇನೆ, ಉಪವಾಸ ಮಾಡುತ್ತೇನೆ ಎಂದು ನಿಮಗೆ ವಿವರಿಸುವ ಅಗತ್ಯವಿಲ್ಲ. ಧರ್ಮವು ವೈಯಕ್ತಿಕವಾದ ನಂಬಿಕೆಯಾಗಿದೆ. ಒಂದು ಸಮುದಾಯದ ಆಚರಣೆಗಳಲ್ಲಿ ಭಾಗಿಯಾಗುವುದು ಹಾಗೂ ಆಚರಿಸುವುದರಿಂದ ಧರ್ಮದ ನಂಬಿಕೆ ಎಂದಿಗೂ ಕಡಿಮೆಯಾಗುವುದಿಲ್ಲ' ಎಂದು ಟ್ರೋಲ್ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ.
'ಭಾರತವು ಹಲವು ಧರ್ಮ, ಸಂಸ್ಕೃತಿಗಳಿಂದ ಕೂಡಿದ ದೇಶವಾಗಿದೆ. ಬೇರೆಯವರ ಧರ್ಮಕ್ಕೆ ಅಗೌರವ ಉಂಟು ಮಾಡುವುದರಿಂದ ನಿಮಗೇನೂ ಲಾಭವಾಗದು. ಈದ್, ದೀಪಾವಳಿ ಹಾಗೂ ಹೋಳಿ ಹಬ್ಬಗಳನ್ನು ಆಚರಿಸಿ ಫೋಟೊಗಳನ್ನು ಹಂಚಿಕೊಳ್ಳುತ್ತೇನೆ. ನನಗೆ ಇಷ್ಟವಾದದ್ದನ್ನು ಮಾಡುತ್ತೇನೆ. ಧರ್ಮಗಳ ನಡುವೆ ದ್ವೇಷ ಬಿತ್ತುವ ಬದಲು ನನ್ನ ಖಾತೆಯನ್ನು ಅನ್‌ಫಾಲೋ ಮಾಡಿ' ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

