ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇತ್ತೀಚೆಗೆ 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ನಡುವಿನ ಬಾಂಧವ್ಯ ಹಾಗೂ ಮದುವೆಯ ನಿರ್ಧಾರಗಳ ಕುರಿತು ಮನಬಿಚ್ಚಿ ಮಾತನಾಡಿದ್ದರು.
ಆದರೆ, ಈ ಕಾರ್ಯಕ್ರಮದ ವಿಡಿಯೊ ತುಣುಕುಗಳನ್ನು ಇಟ್ಟುಕೊಂಡು ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಟ್ರೋಲ್ ಹಾಗೂ ನಕಲಿ ಎಡಿಟೆಡ್ ವಿಡಿಯೊಗಳಿಗೆ ರಶ್ಮಿಕಾ ಮಂದಣ್ಣ ಸುದೀರ್ಘ ಪೋಸ್ಟ್ ಮೂಲಕ ತಿರುಗೇಟು ನೀಡಿದ್ದಾರೆ.
ತಮ್ಮ ವಿರುದ್ಧದ ಅಪಪ್ರಚಾರ, ಟೀಕೆಗಳು, ಉಚಿತ ಸಲಹೆಗಳು ಹಾಗೂ ಸ್ತ್ರೀವಾದದ ಹೆಸರಿನಲ್ಲಿ ನಡೆಯುತ್ತಿರುವ ಕಿರುಕುಳವನ್ನು ಉಲ್ಲೇಖಿಸಿ ರಶ್ಮಿಕಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ರಶ್ಮಿಕಾ ಮಂದಣ್ಣ ಬೆಂಬಲಿಸಲು ಹೋಗಿ ಟ್ರೋಲ್ ಆದ ಜಾವೇದ್ ಅಖ್ತರ್; ಕ್ಷಮೆಯಾಚನೆVIDEO: ಮದುವೆಯಾಗೋಣ ಅಂತ ನೂರಾರು ಬಾರಿ ವಿಜಯ್‌ಗೆ ಹೇಳಿದ್ದ ರಶ್ಮಿಕಾ ಮಂದಣ್ಣರಶ್ಮಿಕಾ ಪೋಸ್ಟ್‌ನಲ್ಲೇನಿದೆ?
'ನನ್ನ ಹಾಗೂ ನನ್ನ ಸಂಗಾತಿಯ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅನಗತ್ಯ ಕಮೆಂಟ್‌ಗಳು, ಅಭಿಪ್ರಾಯಗಳು ಹಾಗೂ ಉಚಿತ ಸಲಹೆಗಳ ಮಹಾಪೂರವೇ ಹರಿದುಬರುತ್ತಿದೆ. ಜನರು ನಮ್ಮನ್ನು ಈ ಮಟ್ಟಿಗೆ ವಿರೋಧಿಸಿ ಮಾತನಾಡುತ್ತಿರುವುದನ್ನು ಕಂಡು ನನಗೆ ಆಶ್ಚರ್ಯವಾಯಿತು. ಹಾಗಾಗಿಯೇ ಈ ಸ್ಪಷ್ಟನೆ ನೀಡುತ್ತಿದ್ದೇನೆ' ಎಂದು ಅವರು ಬರೆದುಕೊಂಡಿದ್ದಾರೆ.
'ನಮಗೆ ಮದುವೆ ಎಂದರೆ ಕೇವಲ ಒಬ್ಬರ ಮುಂದೆ ಮಂಡಿಯೂರಿ ಪ್ರೇಮ ನಿವೇದನೆ ಮಾಡುವುದು ಅಥವಾ ಬೆರಳಿಗೆ ಉಂಗುರ ತೊಡಿಸುವುದಷ್ಟೇ ಆಗಿರಲಿಲ್ಲ. ಇವೆಲ್ಲವೂ ಕೇವಲ ಹೊರಗಿನ ಶೃಂಗಾರ ಅಥವಾ ಆಚರಣೆಯ ಭಾಗವಷ್ಟೇ. ನಮ್ಮ ಪಾಲಿಗೆ ಇಬ್ಬರೂ ಜೊತೆಯಾಗಿ ಒಂದು ಉತ್ತಮ ಜೀವನವನ್ನು ಮತ್ತು ಸುಂದರ ಭವಿಷ್ಯವನ್ನು ನಿರ್ಮಿಸಿಕೊಳ್ಳುವುದಾಗಿತ್ತು. ನಾನು ಭಾವನಾತ್ಮಕ ವ್ಯಕ್ತಿಯಾದರೆ, ಅವರು ವಾಸ್ತವಿಕವಾಗಿ ಯೋಚಿಸುವವರು. ನಾವಿಬ್ಬರೂ ಒಪ್ಪಿಯೇ ಮದುವೆಯಾಗಿದ್ದೇವೆ. ನನ್ನ ಜೀವನಪರ್ಯಂತ ಜೊತೆಗಿದ್ದು, ನನ್ನ ಮಕ್ಕಳ ತಂದೆಯಾಗುವ ವ್ಯಕ್ತಿಯನ್ನು ನಾನು ಪ್ರೀತಿಸದೇ ಮತ್ತೇಕೆ ಮದುವೆಯಾಗಲಿ' ಎಂದು ಪ್ರಶ್ನಿಸಿದ್ದಾರೆ.

ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ
'ಸಂಕಷ್ಟದಲ್ಲಿ ಜೊತೆಗಿದ್ದದ್ದು ಅವರೊಬ್ಬರೇ...'
'ನನ್ನ ಜೀವನ ಅಥವಾ ಸಂಬಂಧದ ಬಗ್ಗೆ ನಿಜವಾದ ಕಾಳಜಿ ಇರುವಂತೆ ನಟಿಸುತ್ತಾ, ರೀಲ್ಸ್ ಮಾಡಿ ಜನಪ್ರಿಯತೆಗಳಿಸಲು ಯತ್ನಿಸುತ್ತಿರುವ ಮತ್ತು ಉಚಿತವಾಗಿ ಸಂಬಂಧಗಳ ಬಗ್ಗೆ ಉಪದೇಶ ಕೊಡುತ್ತಿರುವ ಯುವತಿಯರಿಗೆ ಧನ್ಯವಾದಗಳು ಎಂದಿದ್ದಾರೆ. ಆದರೆ, ಕೆಲವು ವರ್ಷಗಳ ಹಿಂದೆ ನನ್ನ ಕಷ್ಟದ ದಿನಗಳಲ್ಲಿ ನೀವು ಯಾರೂ ಇರಲಿಲ್ಲ. ಅಂದು ನನ್ನ ಜೊತೆಗಿದ್ದದ್ದು ಅವರು ಮಾತ್ರ. ಇಂದಿಗೂ ಅವರೇ ಇದ್ದಾರೆ. ನಾನೀಗ ತುಂಬಾ ಸಂತೋಷವಾಗಿದ್ದೇನೆ. ಆ ಖುಷಿ ನನ್ನ ನಗು, ಸಿನಿಮಾಗಳು ಹಾಗೂ ಅಭಿನಯದಲ್ಲೇ ಎದ್ದು ಕಾಣುತ್ತಿದೆ' ಎಂದಿದ್ದಾರೆ.
'ನನ್ನ ಮೂಳೆ ಮುರಿದಾಗ, ಪ್ರತಿ ತಿಂಗಳು ಹೊಟ್ಟೆನೋವಿನಿಂದ ಬಳಲಿದಾಗ ಹಾಗೂ ಮಧ್ಯರಾತ್ರಿ ಆತಂಕದಿಂದ ಎಚ್ಚರವಾದಾಗ ಅವರೊಬ್ಬರೇ ನನ್ನ ಜೊತೆಗಿದ್ದರು. ನನ್ನ ಜೀವನದ ಕುರಿತು ನಾನು ಹೇಳಿದ್ದಕ್ಕಿಂತಲೂ ಹೆಚ್ಚಾಗಿ ನಕಲಿ ಎಡಿಟ್‌ಗಳು ಹಾಗೂ ಕಾಲ್ಪನಿಕ ಕಥೆಗಳನ್ನು ಜನರು ನಂಬುತ್ತಿರುವುದು ವಿಚಿತ್ರವಾಗಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ನನ್ನ ಬಗ್ಗೆ ಎಷ್ಟಾದರೂ ಮಾತನಾಡಿ, ಸಹಿಸಿಕೊಳ್ಳುತ್ತೇನೆ. ಆದರೆ ನಮ್ಮ ಕುಟುಂಬದ ಬಗ್ಗೆ ಮುಖವಾಡ ಧರಿಸಿ ಮಾತನಾಡುವುದು ಸ್ತ್ರೀವಾದವಲ್ಲ, ಅದು ಕಿರುಕುಳ. ನನ್ನ ಜೀವನದ ನಿರ್ಧಾರವನ್ನು ನಾನೇ ತೆಗೆದುಕೊಂಡಿದ್ದೇನೆ' ಎಂದು ಖಾರವಾಗಿ ಉತ್ತರಿಸಿದ್ದಾರೆ.
ಪೋಸ್ಟ್‌ನ ಕೊನೆಯಲ್ಲಿ, 'ನನ್ನ ಪ್ರೀತಿಯ ಕೆಲವು ಕನ್ನಡಿಗ ಸ್ನೇಹಿತರಿಗೆ, 10 ವರ್ಷಗಳ ಸಮಯದ ನಂತರವೂ ನನ್ನ ಮೇಲೆ ಇಷ್ಟು ಪ್ರೀತಿಯಿಟ್ಟಿರುವುದನ್ನು ಕಂಡು ಸಂತೋಷವಾಗುತ್ತಿದೆ. ಇಷ್ಟು ವರ್ಷಗಳ ಬಳಿಕವೂ ನನ್ನನ್ನು ಸಂಭ್ರಮಿಸುತ್ತಿರುವುದಕ್ಕೆ ಧನ್ಯಳು' ಎಂದು ರಶ್ಮಿಕಾ ಧನ್ಯವಾದ ತಿಳಿಸಿದ್ದಾರೆ.
ವಿಜಯ್-ರಶ್ಮಿಕಾ ನಟನೆಯ ʼರಣಬಾಲಿʼ ಗಳಿಕೆಯಲ್ಲಿ ಕುಸಿತ; 2ನೇ ದಿನ ಗಳಿಸಿದ್ದೆಷ್ಟು?ಪರಿಶುದ್ಧ ಪ್ರೀತಿ ನೀಡುವ ಮಹಿಳೆ 'ಜಯಮ್ಮ': ರಶ್ಮಿಕಾ ಮಂದಣ್ಣ ಭಾವುಕ ಪೋಸ್ಟ್ರಶ್ಮಿಕಾ ಮಂದಣ್ಣ ಬೆನ್ನಲ್ಲೇ ವಿಜಯ್ ದೇವರಕೊಂಡ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಅನಗತ್ಯವಾಗಿ ಟೀಕೆ ಮಾಡುತ್ತಿರುವ ಟ್ರೋಲಿಗರಿಗೆ ತಿರುಗೇಟು ಕೊಟ್ಟಿದ್ದಾರೆ. 'ನನ್ನ ಅತ್ಯುತ್ತಮ ಗೆಳತಿ, ನನ್ನ ಹೆಂಡತಿ. ನನ್ನ ಜೀವನದಲ್ಲಿ ಅವಳು ಕರೆದುಕೊಂಡು ಬಂದಿದ್ದು ನಾನು ಮಾಡಿದ ಸರಿಯಾದ ನಿರ್ಧಾರ. ನಾವಿಬ್ಬರೂ ಸಂತೋಷವಾಗಿದ್ದೇವೆ. ಒಂದು ವೇಳೆ ಈ ಜಗತ್ತಿನ ವಿರುದ್ಧ ನಾವಿಬ್ಬರೇ ನಿಲ್ಲಬೇಕಾಗಿ ಬಂದರೂ, ಅದಕ್ಕೂ ನಾವು ಸಿದ್ಧ. ಆದರೆ ನಾವು ಇಷ್ಟವಿಲ್ಲ ಎಂದು ಹೋಗಬಹುದು' ಎಂದು ಬರೆದುಕೊಂಡಿದ್ದಾರೆ.

