'ಕೆಡಿ ದಿ ಡೆವಿಲ್' ಸಿನಿಮಾದ ಚಿತ್ರೀಕರಣ ಪೂರ್ಣಗೊಂಡು ಏಪ್ರಿಲ್ 30ರಂದು ಬಿಡುಗಡೆಗೆ ಸಜ್ಜಾಗಿದೆ. ಇದೀಗ, ನಿರ್ದೇಶಕ ಪ್ರೇಮ್ ಅವರು ಈ ಸಿನಿಮಾದ 'ಗುರುವೇ ನಿನ್ನಾಟ ಬಲ್ಲೋರು' ಹಾಡಿನ ಮೇಕಿಂಗ್ ವಿಡಿಯೊ ಹಂಚಿಕೊಂಡಿದ್ದಾರೆ.
'ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಈ ಚಿತ್ರದ ಹಾಡಿಗಾಗಿ ತುಂಬಾ ಚೆನ್ನಾಗಿ ಕಾರ್ಯನಿರ್ವಹಿಸಿದ್ದಾರೆ' ಎಂದು ಪ್ರೇಮ್ ಹೇಳಿಕೊಂಡಿದ್ದಾರೆ.
ಡಿಕೆಡಿ ಸ್ಪರ್ಧಿಗಳಿಗೆ ಶಿವಣ್ಣ ದಂಪತಿಯಿಂದ ₹ 50 ಸಾವಿರ ಧನ ಸಹಾಯ'ಕೆಡಿ ಚಿತ್ರದ ಹಾಡಿಗಾಗಿ ಕೋರಿಯೋಗ್ರಾಫರ್ ಮೋಹನ್ ಮಾಸ್ಟರ್ ಅವರು ಸಿಗ್ನೇಚರ್ ಸ್ಟೆಪ್ಸ್ ಹಾಕಿಸಿದ್ದಾರೆ. ಈ ಸ್ಟೆಪ್ಸ್ ಆರಂಭದಲ್ಲಿ ಕಷ್ಟ ಎನಿಸಿತ್ತು. ನಾನು ಈ ನೃತ್ಯ ಮಾಡುವಾಗ ಮೊದಲ ಹಂತದಲ್ಲೇ ಸ್ಟೆಪ್ಸ್ ಸರಿಯಾಗಿ ಬಂದಿದ್ದು ಖುಷಿ ವಿಚಾರ. ಚಲಿಸುವ ಗಾಡಿಯ ಮೇಲೆ ನಿಂತು ಡ್ಯಾನ್ಸ್ ಮಾಡುವುದು ಸುಲಭದ ಮಾತಲ್ಲ. ಆದರೆ, ಕೋರಿಯೋಗ್ರಾಫರ್ ಅದನ್ನು ಸರಾಗವಾಗಿ ಮಾಡಿಸಿದ್ದರು' ಎಂದು ಈ ಚಿತ್ರದ ನಟ ಧ್ರುವ ಸರ್ಜಾ ಅವರು ಹೇಳಿದ್ದಾರೆ.
'ಈ ಹಾಡಿನ ನೃತ್ಯದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ನಟಿ ರೀಷ್ಮಾ ನಾಣಯ್ಯ, 'ಧ್ರುವ ಸರ್ಜಾ ಅವರು ತುಂಬಾ ಚೆನ್ನಾಗಿ ನೃತ್ಯ ಮಾಡುತ್ತಾರೆ. ಅದರಲ್ಲಿ ಎರಡು ಮಾತೇ ಇಲ್ಲ. ಈ ಹಾಡಿಗೆ ಚೆನ್ನಾಗಿ ನೃತ್ಯ ಮಾಡಲೇಬೇಕು ಎಂದು ನಾವಿಬ್ಬರು ತುಂಬಾ ಪ್ರಯತ್ನ ಮಾಡಿದ್ದೇವೆ' ಎಂದಿದ್ದಾರೆ.
'ಗುರುವೇ ನಿನ್ನಾಟ ಬಲ್ಲೋರು' ಕೋರಿಯೋಗ್ರಾಫರ್ ಮೋಹನ್ ಮಾಸ್ಟರ್ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ಈ ಹಾಡಿನಲ್ಲಿ ಸಾವಿರಕ್ಕೂ ಅಧಿಕ ನೃತ್ಯಗಾರರಾಗಿದ್ದರು. ಈ ಹಾಡಿನ ಬಗ್ಗೆ ತುಂಬಾ ಹೆಮ್ಮೆ ಇದೆ. ಇದರ ಕೀರ್ತಿ ಪ್ರೇಮ್ ಸರ್, ಧ್ರುವ ಅವರಿಗೆ ಸಲ್ಲಬೇಕು. ನನ್ನ ನೃತ್ಯ ಪಯಣದಲ್ಲಿ ಈ ಹಾಡಿಗೆ ವಿಶೇಷ ಸ್ಥಾನವಿದೆ' ಎಂದು ಹೇಳಿಕೊಂಡಿದ್ದಾರೆ.
ಈ ಹಾಡಿಗೆ ಮಂಜುನಾಥ್ ಹಾಗೂ ಪ್ರೇಮ್ ಅವರು ಸಾಹಿತ್ಯ ಬರೆದು ಹಾಡಿದ್ದಾರೆ. ಕೈಲಾಶ್ ಖೇರ್ ಅವರು ಇವರ ಜೊತೆ ಧ್ವನಿ ನೀಡಿದ್ದಾರೆ.

