Dailyhunt Logo
  • Light mode
    Follow system
    Dark mode
    • Play Story
    • App Story
ಖಮೇನಿ ಹತ್ಯೆ ಬಳಿಕವೂ ಇಸ್ರೇಲ್, ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ಕ್ಷಿಪಣಿ ದಾಳಿ

ಖಮೇನಿ ಹತ್ಯೆ ಬಳಿಕವೂ ಇಸ್ರೇಲ್, ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ಕ್ಷಿಪಣಿ ದಾಳಿ

ದುಬೈ: ಸರ್ವೊಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಬಳಿಕವೂ ಇಸ್ರೇಲ್ ಮತ್ತು ಗಲ್ಫ್ ಅರಬ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಇರಾನ್ ಭಾನುವಾರ ಕ್ಷಿಪಣಿ ದಾಳಿ ನಡಿಸಿದೆ.

ಖಮೇನಿ ನಿಧನ ವಾರ್ತೆ ಪ್ರಕಟಿಸುವಾಗ ಭಾವುಕರಾದ ಇರಾನ್ ಟಿವಿ ನಿರೂಪಕ

ಭಾನುವಾರ ಬೆಳವಣಿಗೆ ಬೆನ್ನಲ್ಲೇ, ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

ಈ ಮಹಾಪಾರಾಧಕ್ಕೆ ಪ್ರತೀಕಾರ ತೀರಿಸಿಯೇ ಸಿದ್ದ ಎಂದು ಇರಾನ್ ಸಂಪುಟ ಹೇಳಿದೆ. ಇಸ್ರೇಲ್ ಮತ್ತು ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ಕಂಡು ಕೇಳರಿಯದ ದಾಳಿ ನಡೆಸುವುದಾಗಿ ರೆವಲ್ಯೂಷನರಿ ಗಾರ್ಡ್ ಎಚ್ಚರಿಕೆ ನೀಡಿದೆ.

ಇಸ್ರೇಲ್, ಅಮೆರಿಕ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆ

'ನೀವು ಲಕ್ಷ್ಮಣ ರೇಖೆಯನ್ನು ದಾಟಿದ್ದೀರಿ ಮತ್ತು ಇದಕ್ಕೆ ಬೆಲೆ ತೆರಲೇಬೇಕು' ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೇರ್ ಕಾಲಿಬಾಫ್ ಭಾನುವಾರ ದೂರದರ್ಶನ ಭಾಷಣದಲ್ಲಿ ಗುಡುಗಿದ್ದಾರೆ.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಟ್ರಂಪ್, 'ಅವರು ಅದನ್ನು ಮಾಡದಿರುವುದು ಒಳಿತು. ಒಂದು ವೇಳೆ ಅವರು ದಾಳಿ ಮಾಡಿದರೆ, ನಾವು ಹಿಂದೆಂದೂ ಕಂಡಿರದ ಬಲದೊಂದಿಗೆ ಅವರ ಪ್ರತ್ಯುತ್ತರ ನೀಡುತ್ತೇವೆ' ಎಂದು ಸಾಮಾಜಿಕ ಜಾಲತಾಣ ಟ್ರೂಥ್‌ನಲ್ಲಿ ಬರೆದುಕೊಂಡಿದ್ದಾರೆ.

(ವಿವಿಧ ಮೂಲಗಳನ್ನು ಆಧರಿಸಿದ ಬರೆದ ಸುದ್ದಿ)

ಅಯಾತೊಲ್ಲಾ ಖಮೇನಿ ಮಗಳು, ಮೊಮ್ಮಗಳು, ಅಳಿಯ ಹತ್ಯೆ: ಇರಾನ್ ಮಾಧ್ಯಮಗಳ ವರದಿ
Dailyhunt
Disclaimer: This content has not been generated, created or edited by Dailyhunt. Publisher: Prajavani