Dailyhunt Logo
  • Light mode
    Follow system
    Dark mode
    • Play Story
    • App Story
ಖಮೇನಿ ಕಚೇರಿ ಸಮೀಪ ಇಸ್ರೇಲ್‌ ದಾಳಿ: ಏನಾಯಿತು ಇರಾನ್‌ನ ಪರಮೋಚ್ಚ ನಾಯಕನಿಗೆ?

ಖಮೇನಿ ಕಚೇರಿ ಸಮೀಪ ಇಸ್ರೇಲ್‌ ದಾಳಿ: ಏನಾಯಿತು ಇರಾನ್‌ನ ಪರಮೋಚ್ಚ ನಾಯಕನಿಗೆ?

ಮೆರಿಕ ಹಾಗೂ ಇಸ್ರೇಲ್ ಸೇರಿ ಇರಾನ್‌ ಮೇಲೆ ಶನಿವಾರ ದಾಳಿ ನಡೆಸಿವೆ, ಇರಾನ್‌ನ ಅಣು ಯೋಜನೆ ಸಂಬಂಧ ಮಾತುಕತೆ ಮುರಿದುಬಿದ್ದ ಕಾರಣ ಈ ದಾಳಿ ನಡೆದಿದೆ.

ಇರಾನ್‌ ಮೇಲೆ ಕ್ಷಿಪಣಿ ದಾಳಿ ಆರಂಭಿಸಿ ತುರ್ತು ಪರಿಸ್ಥಿತಿ ಘೋಷಿಸಿದ ಇಸ್ರೇಲ್

ಇರಾನ್ ರಾಜಧಾನಿ ಟೆಹರಾನ್ ಸೇರಿ ದೇಶದ ವಿವಿಧಡೆ ದಾಳಿ ನಡೆಸಲಾಗಿದೆ.

ಇರಾನ್‌ನ ಪರಮೋಚ್ಚ ನಾಯಕ ಅಯಾತುಲ್ಲಾ ಖಮೇನಿ ಅವರ ನಿವಾಸ, ಕಚೇರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿವೆ.

ಟೆಹ್ರಾನ್‌ನ ಉತ್ತರದ ಶೇಮಿರಾನ್‌ನಲ್ಲಿರುವ ಅಧ್ಯಕ್ಷರ ಅರಮನೆಯ ಸಮೀಪದ ಪ್ರದೇಶ, ಖಮೇನಿ ಅವರ ಕಚೇರಿಗಳ ಸಂಕೀರ್ಣದ ಮೇಲೆ ಏಳು ಕ್ಷಿಪಣಿಗಳು ದಾಳಿ ಮಾಡಿವೆ ಎಂದು ಇರಾನ್‌ನ ಅರೆ ಸರ್ಕಾರಿ ಸುದ್ದಿ ಸಂಸ್ಥೆ 'ತಸ್ನಿಮ್' ವರದಿ ಮಾಡಿದೆ. ರಾಜಧಾನಿಯಲ್ಲಿರುವ ಖಮೇನಿ ಅವರ ಕಚೇರಿಗಳ ಸಮೀಪವೂ ದಾಳಿಗಳು ನಡೆದಿವೆ.

ಇರಾನ್ ವಿರುದ್ಧ ಕಾರ್ಯಾಚರಣೆಗೆ 'ಆಪರೇಷನ್ ಎಪಿಕ್ ಫ್ಯೂರಿ' ಎಂದು ಹೆಸರಿಟ್ಟ ಅಮೆರಿಕ

ಖಮೇನಿ ಎಲ್ಲಿ?

ಖಮೇನಿ ಎಲ್ಲಿದ್ದಾರೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಅವರನ್ನು ಟೆಹ್ರಾನ್‌ನಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೂಲವೊಂದನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ.

(ವಿವಿಧ ಸುದ್ದಿ ಸಂಸ್ಥೆಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಇರಾನ್ ಅಪಾಯಕಾರಿ ದೇಶ, ಅದರ ವಿಚಾರದಲ್ಲಿ ದೊಡ್ಡ ನಿರ್ಧಾರ ಕೈಗೊಳ್ಳಬೇಕಿದೆ: ಟ್ರಂಪ್
Dailyhunt
Disclaimer: This content has not been generated, created or edited by Dailyhunt. Publisher: Prajavani