ಬೆಂಗಳೂರು: ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕಾರಕ್ಕೆ ಸಮಯ ನಿಗದಿಯಾಗಿದೆ. ಜೂನ್ 3ರಂದು ಅವರು ಲೋಕಭವನದ ಗಾಜಿನಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 3 ವರ್ಷಗಳ ಸತತ ಪ್ರಯತ್ನದ ಬಳಿಕ ಸಿಎಂ ಗಾದಿ ಏರುತ್ತಿರುವ ಡಿಕೆಶಿ ದೇಶದ ಅತ್ಯಂತ ಸಿರಿವಂತ ಸಿಎಂ ಖ್ಯಾತಿಗೂ ಪಾತ್ರರಾಗಲಿದ್ದಾರೆ.
ಚುನಾವಣೆ ಸಂದರ್ಭ ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಡಿಕೆಶಿ ಆಸ್ತಿಯು ಸದ್ಯದ ದೇಶದ ಶ್ರೀಮಂತ ಸಿಎಂ ಎನಿಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿಗಿಂತ ಹೆಚ್ಚಾಗಿದೆ. ಹೀಗಾಗಿ, ಅವರು ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಸಲ್ಲಿಸಲಾದ ಅವರ ಅಧಿಕೃತ ದಾಖಲೆಗಳ ಪ್ರಕಾರ, ಡಿ.ಕೆ. ಶಿವಕುಮಾರ್ ಅವರ ಒಟ್ಟು ನಿವ್ವಳ ಮೌಲ್ಯ ₹1,413 ಕೋಟಿಗಿಂತ ಹೆಚ್ಚು. ₹14 ಕೋಟಿಗೂ ಹೆಚ್ಚು ಬ್ಯಾಂಕ್ ಬ್ಯಾಲೆನ್ಸ್, ಹೊಂದಿದ್ದಾರೆ.
ಒಟ್ಟು ₹273 ಕೋಟಿ ಸ್ಥಿರಾಸ್ತಿ ಮತ್ತು ₹1,140 ಕೋಟಿ ಚರಾಸ್ತಿ ಹೊಂದಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
₹931 ಕೋಟಿ ಆಸ್ತಿ ಹೊಂದಿರುವ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈವರೆಗೆ ದೇಶದ ಅತ್ಯಂತ ಶ್ರೀಮಂತ ಸಿಎಂ ಎನಿಸಿದ್ದರು. ಈಗ ಆ ಸ್ಥಾನಕ್ಕೆ ಡಿಕೆ ಲಗ್ಗೆ ಇಡುತ್ತಿದ್ದಾರೆ.
ಇನ್ನೂ ಇತ್ತೀಚೆಗೆ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿ ಅಭೂತಪೂರ್ವ ಗೆಲುವು ಸಾಧಿಸುವುದರೊಂದಿಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಟಿವಿಕೆ ಅಧ್ಯಕ್ಷ ಸಿ ಜೋಸೆಫ್ ವಿಜಯ್ ಅವರು ಮೂರನೇ ಸ್ಥಾನದಲ್ಲಿದ್ದು, ಅವರ ಒಟ್ಟು ಆಸ್ತಿ ಮೌಲ್ಯ ₹648 ಕೋಟಿಯಾಗಿದೆ.
ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು ₹332 ಕೋಟಿ ಮೌಲ್ಯದ ಆಸ್ತಿ ಮೂಲಕ 4ನೇ ಸ್ಥಾನದಲ್ಲಿದ್ದಾರೆ. ನಾಗಾಲ್ಯಾಂಡ್ ಸಿಎಂ ನೈಫಿಯು ರಿಯೊ ₹46 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು ನಂತರದ ಸ್ಥಾನದಲ್ಲಿದ್ದಾರೆ.
ಉಳಿದಂತೆ, ₹42 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಮಧ್ಯ ಪ್ರದೇಶ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ 6ನೇ ಸ್ಥಾನ, ಪುದುಚೆರಿ ಸಿಎಂ ಎನ್. ರಂಗಸಾಮಿ (₹38 ಕೋಟಿ) 7ನೇ ಸ್ಥಾನ, ತೆಲಂಗಾಣ ಮುಖ್ಯಮಂತ್ರಿ ಅನುಮುಲ ರೇವಂತ್ ರೆಡ್ಡಿ (₹30 ಕೋಟಿ) 8ನೇ ಸ್ಥಾನ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (₹24 ಕೋಟಿ) 9ನೇ ಸ್ಥಾನ ಮತ್ತು ಗೋವಾ ಸಿಎಂ ಪ್ರಮೋದ್ ಸಾವಂತ್ (₹23 ಕೋಟಿ) 10ನೇ ಸ್ಥನದಲ್ಲಿದ್ದಾರೆ.
ಅನ್ನಭಾಗ್ಯ ಯೋಜನೆಗೆ ಸಿದ್ದರಾಮಯ್ಯರನ್ನು ಪ್ರೇರೇಪಿಸಿದ್ದ ಹುಟ್ಟೂರಿನ ಆ ಘಟನೆಗಳು..ಡಿಕೆಶಿ ಒಂದು ಬಾರಿಯ ಸಿಎಂ ಅಲ್ಲ, ದೀರ್ಘಾವಧಿ ಅಧಿಕಾರದಲ್ಲಿರುತ್ತಾರೆ: ಜ್ಯೋತಿಷಿ
