Dailyhunt Logo
  • Light mode
    Follow system
    Dark mode
    • Play Story
    • App Story
ಮೋದಿ, ಶಾ, ಜ್ಞಾನೇಶ್, ಭಾಗವತ್‌ರನ್ನು ಕಾನೂನಿನ ಮುಂದೆ ತರುತ್ತೇವೆ: ರಾಹುಲ್ ಗಾಂಧಿ

ಮೋದಿ, ಶಾ, ಜ್ಞಾನೇಶ್, ಭಾಗವತ್‌ರನ್ನು ಕಾನೂನಿನ ಮುಂದೆ ತರುತ್ತೇವೆ: ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಕಾನೂನಿನ ಮುಂದೆ ತರುತ್ತೇವೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಯೋಜಿಸಿದ್ದ ಭೋಜನಕೂಟದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ರಾಹುಲ್ ಗಾಂಧಿ, ಸುಮಾರು 300 ಸಂಸದರು ಶಾಂತಿಯುತ ಪ್ರತಿಭಟನೆ ನಡೆಸಲು ಬಯಸಿದ್ದರು. ಆದರೆ ಎರಡು ದಿನಗಳಿಂದ ಪ್ರತಿಭಟನೆಗೆ ಅವಕಾಶ ನೀಡಲಿಲ್ಲ ಎಂದರು.

ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ರಾಹುಲ್, ಪ್ರಿಯಾಂಕಾ ವಿರುದ್ಧ ಎಫ್‌ಐಆರ್

ಮೊದಲ ದಿನ ಚುನಾವಣಾ ಆಯೋಗದ ಎದುರು ಪ್ರತಿಭಟನೆ ನಡೆಸಲು ಮುಂದಾದಾಗ ತಡೆಯಲಾಯಿತು. ಬಳಿಕ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಬಯಸಿದಾಗಲೂ ತಡೆಯಲಾಗಿದ್ದು, ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ನರೇಂದ್ರ ಮೋದಿ, ಅಮಿತ್ ಶಾ, ಜ್ಞಾನೇಶ್ ಕುಮಾರ್ ಮತ್ತು ಮೋಹನ್ ಭಾಗವತ್ ಅವರು 'ಕ್ರಿಮಿನಲ್ ಸಂಚು' ನಡೆಸಿ ದೇಶವನ್ನು ಹೈಜಾಕ್ ಮಾಡಿದ್ದಾರೆ, ಸಂವಿಧಾನವನ್ನು ನಾಶ ಮಾಡಿದ್ದಾರೆ ಹಾಗೂ 'ಮತ ಕಳ್ಳತನ' ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

'ವಿರೋಧ ಪಕ್ಷವಾಗಿ ನಾವು ಕ್ರಮ ಕೈಗೊಳ್ಳುತ್ತೇವೆ. ಅವರನ್ನು ನ್ಯಾಯದ ಮುಂದೆ ತರುತ್ತೇವೆ. ನರೇಂದ್ರ ಮೋದಿ, ಅಮಿತ್ ಶಾ, ಜ್ಞಾನೇಶ್ ಕುಮಾರ್ ಮತ್ತು ಮೋಹನ್ ಭಾಗವತ್‌ರನ್ನು ಕಾನೂನಿನ ಮುಂದೆ ತರುವುದು ಖಂಡಿತಾ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಅರಾಜಕತೆ ಸೃಷ್ಟಿಗೆ ರಾಹುಲ್ ಗಾಂಧಿ ಯತ್ನ: ವಿಜಯೇಂದ್ರ
Dailyhunt
Disclaimer: This content has not been generated, created or edited by Dailyhunt. Publisher: Prajavani