Dailyhunt Logo
  • Light mode
    Follow system
    Dark mode
    • Play Story
    • App Story
ಮೊಜ್ತಬಾ ಖಮೇನಿ ಆರೋಗ್ಯವಾಗಿದ್ದಾರೆ: ಸಾವಿನ ವದಂತಿ ತಳ್ಳಿ ಹಾಕಿದ ಪ್ರತಿನಿಧಿ

ಮೊಜ್ತಬಾ ಖಮೇನಿ ಆರೋಗ್ಯವಾಗಿದ್ದಾರೆ: ಸಾವಿನ ವದಂತಿ ತಳ್ಳಿ ಹಾಕಿದ ಪ್ರತಿನಿಧಿ

ವದೆಹಲಿ: ಇರಾನ್‌ನ ಪರಮೋಚ್ಛ ನಾಯಕ ಮೊಜ್ತಬಾ ಖಮೇನಿ ಆರೋಗ್ಯವಾಗಿದ್ದಾರೆ ಎಂದು ಭಾರತದಲ್ಲಿನ ಅವರ ಉಪ ಪ್ರತಿನಿಧಿ ಡಾ. ಮೊಹಮ್ಮದ್ ಹೊಸೈನ್ ಜಿಯಾಯೆನೀಯಾ ತಿಳಿಸಿದ್ದಾರೆ.

ಆ ಮೂಲಕ ಮೊಜ್ತಬಾ ಖಮೇನಿ ಆರೋಗ್ಯ ಕುರಿತು ಇದ್ದ ವದಂತಿಗಳನ್ನು ತಳ್ಳಿ ಹಾಕಿದ್ದಾರೆ.

ಈ ಕುರಿತು ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.

'ದೇವರ ದಯೆಯಿಂದ ಇರಾನ್‌ನ ಪರಮೋಚ್ಛ ನಾಯಕ ಮೊಜ್ತಬಾ ಖಮೇನಿ ಆರೋಗ್ಯ ಉತ್ತಮವಾಗಿದೆ. ಯಾವುದೇ ಊಹಾಪೋಹಗಳಿಗೆ ಆಸ್ಪದ ಕೊಡಬಾರದು' ಎಂದಿದ್ದಾರೆ.

'ಖಮೇನಿ ಅವರಿಗೆ ಆರೋಗ್ಯ ಸಮಸ್ಯೆಗಳಿದ್ದು, ಈ ಕುರಿತಾಗಿನ ವದಂತಿಗಳು ಅಧಿಕೃತವಲ್ಲ. ಅವರು ಚೆನ್ನಾಗಿಯೇ ಇದ್ದಾರೆ' ಎಂದು ಖಚಿತಪಡಿಸಿದ್ದಾರೆ.

ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಇರಾನ್ ನಿಲುವನ್ನು ಪುನರುಚ್ಚರಿಸಿದ ಅವರು, 'ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧವನ್ನು ಆರಂಭಿಸಿದೆ. ಆದರೆ ನಾವದನ್ನು ಕೊನೆಗೊಳಿಸಲಿದ್ದೇವೆ' ಎಂದು ಹೇಳಿದ್ದಾರೆ.

ಅಮೆರಿಕ-ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಮೊಜ್ತಾಬಾ ಖಮೇನಿ ಬದುಕುಳಿದಿದ್ದರು. ಆದರೆ ಅವರ ಆರೋಗ್ಯದ ಬಗ್ಗೆ ವದಂತಿಗಳು ಹರಿದಾಡುತ್ತಿವೆ.

ಏಳು ವಾರ ಕಳೆದರೂ ಖಮೇನಿ ಅಂತ್ಯಕ್ರಿಯೆ ನಡೆದಿಲ್ಲ ಏಕೆ? ಇರಾನ್ ಲೆಕ್ಕಾಚಾರಗಳೇನು?ಖಮೇನಿ ಸೇರಿದಂತೆ ಅಮೆರಿಕ ದಾಳಿಯಲ್ಲಿ ಮೃತಪಟ್ಟ ಇರಾನ್‌ನ 11 ಪ್ರಮುಖ ನಾಯಕರಿವರು..
Dailyhunt
Disclaimer: This content has not been generated, created or edited by Dailyhunt. Publisher: Prajavani