Dailyhunt
ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸಮರ್ಪಣೆ: ಪರಿಸರವಾದಿಗಳಿಂದ ತೀವ್ರ ಆಕ್ಷೇಪ

ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸಮರ್ಪಣೆ: ಪರಿಸರವಾದಿಗಳಿಂದ ತೀವ್ರ ಆಕ್ಷೇಪ

ಭೋಪಾಲ್: ಮಧ್ಯಪ್ರದೇಶದ ಸೆಹೋರ್‌ನಲ್ಲಿ ನಡೆದ ಬೃಹತ್ ಧಾರ್ಮಿಕ ಕಾರ್ಯಕ್ರಮದಲ್ಲಿ ನರ್ಮದಾ ನದಿಗೆ ಸುಮಾರು 11 ಸಾವಿರ ಲೀಟರ್ ಹಾಲನ್ನು ಸಮರ್ಪಣೆ ಮಾಡಲಾಗಿದೆ. ಬೆರುಂಡಾ ಪ್ರದೇಶದಲ್ಲಿರುವ ಸತ್‌ದೇವ್‌ನಲ್ಲಿರುವ ಪಾತಾಳೇಶ್ವರ ಮಹಾದೇವ ದೇವಸ್ಥಾನದಲ್ಲಿ ಈ ಕಾರ್ಯಕ್ರಮ ನಡೆಯಿತು.

21 ದಿನಗಳ ಕಾಲ ನಡೆದ ಈ ಧಾರ್ಮಿಕ ಆಚರಣೆಯಲ್ಲಿ ನರ್ಮದಾ ನದಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಮುಕ್ತಾಯಗೊಂಡಿತು.

ಕೋಲಾರ: 1,120 ಲೀಟರ್ ಕಲಬೆರಕೆ ಹಾಲು ವಶಶಬರಿಮಲೆ ದೇವಾಲಯ: ಮಹಿಳೆಯರ ಮೇಲಿನ ತಾರತಮ್ಯ ಪ್ರಶ್ನಿಸಿದ ಅರ್ಜಿ ವಿಚಾರಣೆ

ಆ ಬೆನ್ನಲ್ಲೆ ನದಿಗೆ ಹಾಲನ್ನು ಸುರಿದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿದ ಪರಿಸರವಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಖ್ಯಾತ ಪರಿಸರವಾದಿ ಮತ್ತು ವನ್ಯಜೀವಿ ಕಾರ್ಯಕರ್ತ ಅಜಯ್ ದುಬೆ, 'ಹೆಚ್ಚಿನ ಪ್ರಮಾಣದಲ್ಲಿ ನದಿಗೆ ಹಾಲನ್ನು ಸುರಿದಿರುವುದು ನದಿ ಮತ್ತು ಪರಿಸರ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಸಾಕಷ್ಟು ಜನರು ಕುಡಿಯುವ ನೀರಿಗಾಗಿ ನದಿಯನ್ನೇ ಅವಲಂಬಿಸಿದ್ದಾರೆ. ಅಂತಹ ಸ್ಥಳೀಯ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ಜಲಚರಗಳು ಹಾಗೂ ಸಾಕು ಪ್ರಾಣಿಗಳಿಗೆ ಅಪಾಯವನ್ನುಂಟುಮಾಡುತ್ತವೆ' ಎಂದು ಕಳವಳ ವ್ಯಕ್ತಡಿಸಿದರು.

'11 ಸಾವಿರ ಲೀಟರ್ ಹಾಲು ನದಿಯಲ್ಲಿ ಮಾಲಿನ್ಯಕಾರಕವಾಗುತ್ತದೆ. ಇದರಿಂದ ನದಿಯಲ್ಲಿರುವ ಜಲಚರಗಳು ಸಾವುತ್ತವೆ. ನದಿ ಮೇಲ್ಮೈಯಲ್ಲಿ ಬೆಳೆಯುವ ಸಸ್ಯಗಳ ಪ್ರಕ್ರಿಯೆ ಮೇಲೆ ಭಾರಿ ಪರಿಣಾಮ ಬಿರುತ್ತದೆ. ಅಲ್ಲದೆ ಕುಡಿಯುವ ನೀರಿನ ಸಾಮರ್ಥ್ಯ ನಷ್ಟಕ್ಕೆ ಕಾರಣವಾಗಬಹುದು' ಎಂದು ಪರಿಸರವಾದಿ ಸುಭಾಷ್ ಪಾಂಡೆ ಹೇಳಿದರು.

ವಿಡಿಯೊದಲ್ಲಿ ಏನಿದೆ?

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ನರ್ಮದ ನದಿಯ ದಡದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿದ್ದರು. ಪುರೋಹಿತರು ಜಪ ಮಾಡುತ್ತಾ ನೈವೇದ್ಯದ ರೂಪದಲ್ಲಿ ಟ್ಯಾಂಕರ್‌ನಲ್ಲಿದ್ದ ಹಾಲನ್ನು ನದಿಗೆ ಅರ್ಪಿಸಿದ್ದನ್ನು ಕಾಣಬಹುದು.

‌ನರ್ಮದಾ ನದಿಯು ಮಧ್ಯಪ್ರದೇಶದ ಅಮರಕಂಟಕ್‌ನಿಂದ 1,312 ಕಿ.ಮೀಟರ್‌ವರೆಗೆ ಮಹಾರಾಷ್ಟ್ರ ಮತ್ತು ಗುಜರಾತ್‌, ಕ್ಯಾಂಬೆ ಕೊಲ್ಲಿಯ ಮೂಲಕ ಅರೇಬಿಯನ್ ಸಮುದ್ರವನ್ನು ಸೇರುತ್ತದೆ. ಇದು ಪಶ್ಚಿಮಕ್ಕೆ ಹರಿಯುವ ಅತಿದೊಡ್ಡ ನದಿಯಾಗಿದ್ದು, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ನೀರಾವರಿಗೆ ನಿರ್ಣಾಯಕ ನೀರಿನ ಮೂಲವಾಗಿ ಕಾರ್ಯನಿರ್ವಹಿಸುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani