ನವದೆಹಲಿ: ನೀಟ್-ಯುಜಿ 2026 ಮರುಪರೀಕ್ಷೆ ಜೂನ್ 21ರಂದು ನಡೆಯಲಿದ್ದು, ವಂಚನೆ ಜಾಲ ಹಾಗೂ ಸುಳ್ಳು ಸುದ್ದಿ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಜೂನ್ 22ರವರೆಗೆ ಟೆಲಿಗ್ರಾಮ್ ಮೆಸೇಜಿಂಗ್ ಆಯಪ್ ಬಳಕೆಯನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಶಿಫಾರಸು ಮೇರೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಕ್ರಮ ಕೈಗೊಂಡಿದೆ.
ಪರೀಕ್ಷೆ ನಂತರ 'ಪ್ರಶ್ನೆಪತ್ರಿಕೆ ಸೋರಿಕೆ' ಆಗಿದೆಯೆಂದು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಲು ಹಾಗೂ ಹರಡಲು ಟೆಲಿಗ್ರಾಮ್ ಆಯಪ್ ಬಳಸಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಪೋಸ್ಟ್ ಮಾಡಿದ ಸಂದೇಶಗಳನ್ನು ಎಡಿಟ್ ಮಾಡುವ ವೈಶಿಷ್ಟ್ಯವನ್ನು ಭಾರತದಲ್ಲಿ ಜೂನ್ 30ರವರೆಗೆ ನಿಷ್ಕ್ರಿಯಗೊಳಿಸುವಂತೆ ಟೆಲಿಗ್ರಾಮ್ ಸಂಸ್ಥೆಗೆ ಸಚಿವಾಲಯವು ಮತ್ತೊಂದು ಆದೇಶದಲ್ಲಿ ಸೂಚಿಸಿದೆ.
'ನೀಟ್- ಯುಜಿ ಮರುಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳನ್ನು ವಂಚಿಸಲು ವಂಚಕರ ಜಾಲವು ಟೆಲಿಗ್ರಾಮ್ ಆಯಪ್ ಅನ್ನು ವ್ಯಾಪಕವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ' ಎಂದು ಎನ್‌ಟಿಎ ಮಹಾನಿರ್ದೇಶಕ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ.
'ಸುಳ್ಳು ಸುದ್ದಿ ಹರಡುವ ಹಾಗೂ ನೀಟ್ ಅಭ್ಯರ್ಥಿಗಳನ್ನು ವಂಚಿಸುವವರ ಮೇಲೆ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐಸಿಸಿಸಿಸಿ) ನಿಗಾ ವಹಿಸಿದೆ. ಬಿಹಾರ, ಗುಜರಾತ್ ಹಾಗೂ ರಾಜಸ್ಥಾನ ಪೊಲೀಸರು ಹಾಗೂ ಕಾನೂನು ಜಾರಿ ಸಂಸ್ಥೆಗಳ ಸಹಕಾರದೊಂದಿಗೆ ಅನೇಕ ಟೆಲಿಗ್ರಾಮ್ ಚಾನೆಲ್‌ಗಳು, ಗ್ರೂಪ್‌ಗಳು ಹಾಗೂ ಬಾಟ್‌ಗಳನ್ನು ಐಸಿಸಿಸಿಸಿ ತೆಗೆದುಹಾಕಿದೆ' ಎಂದು ಹೇಳಿದ್ದಾರೆ.
'ಟೆಲಿಗ್ರಾಮ್ ಚಾನೆಲ್ ಅಡ್ಮಿನ್‌ಗಳು ಪರೀಕ್ಷೆ ನಂತರ, ಹಳೆಯ ಸಂದೇಶಗಳನ್ನು ಎಡಿಟ್ ಮಾಡಿ ನಿಜವಾದ ಪ್ರಶ್ನೆಪತ್ರಿಕೆ ಯನ್ನು ಸೇರಿಸಬಹುದು. ಪ್ರಶ್ನೆಪತ್ರಿಕೆ ಮೊದಲೇ ಲಭ್ಯವಿತ್ತು ಎಂಬುದಾಗಿ ಬಿಂಬಿಸಲು ಅದರ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೆ ಮಾಡಬಹುದು. ಇತ್ತೀಚೆಗೆ ನಡೆದ ಅನೇಕ ಪರೀಕ್ಷೆಗಳ ಸಂದರ್ಭದಲ್ಲೂ ಇದೇ ವಿಧಾನ ಅನುಸರಿಸಿರುವ ನಿದರ್ಶನಗಳಿವೆ' ಎಂದು ತಿಳಿಸಿದ್ದಾರೆ.
'ಮರುಪರೀಕ್ಷೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದ ಪ್ರಕರಣವೊಂದನ್ನು ಅಹಮದಾಬಾದ್ ಪೊಲೀಸರು ಸೋಮವಾರ ಪತ್ತೆಹಚ್ಚಿದ್ದಾರೆ. ಇಂತಹ ಸಂದೇಶಗಳನ್ನು ಹರಡುವುದರಿಂದ ಅಭ್ಯರ್ಥಿಗಳು ಆತಂಕಗೊಳ್ಳಲಿದ್ದು, ಮಾನಸಿಕವಾಗಿ ಒತ್ತಡಕ್ಕೆ ಸಿಲುಕುತ್ತಾರೆ. ಹೀಗಾಗಿ, ಈ ಕ್ರಮ ಕೈಗೊಳ್ಳಬೇಕಾಯಿತು' ಎಂದು ಸಿಂಗ್ ತಿಳಿಸಿದ್ದಾರೆ.
ನಿರ್ಬಂಧದ ಬೆನ್ನಲ್ಲೇ, ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಟೆಲಿಗ್ರಾಮ್ ಅಪ್ಲಿಕೇಶನ್ ಅನ್ನು ತೆಗೆದುಹಾಕಿದೆ. ಆಯಪಲ್ ಕಂಪನಿ ಕೂಡ ಇದೇ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
- ಅಭಿಷೇಕ್ ಸಿಂಗ್, ಎನ್‌ಟಿಎ ಮಹಾನಿರ್ದೇಶಕಟೆಲಿಗ್ರಾಮ್ ಆಯಪ್‌ನಲ್ಲಿ ಸಂದೇಶಗಳ 'ಎಡಿಟ್' ವೈಶಿಷ್ಟ್ಯದ ನಿರ್ಬಂಧದಿಂದಾಗಿ ಹೊಸ ಸಂದೇಶಗಳನ್ನು ಕಳುಹಿಸಲು, ಸ್ವೀಕರಿಸಲು ಬಳಕೆದಾರರಿಗೆ ತೊಂದರೆಯಾಗುವುದಿಲ್ಲ.. ಜೈಪುರ:ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ದೀಪ್ಕೆ ಕಪಾಳಕ್ಕೆ ಹೊಡೆದ ದುಷ್ಕರ್ಮಿಗಳುಜೂನ್ 17ರಿಂದ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ 'ಕೈ' ಅಭಿಯಾನ
