ಕಠ್ಮಂಡು: ನೇಪಾಳವು ಭೀಕರ ಪ್ರವಾಹದಿಂದ ತತ್ತರಿಸುತ್ತಿದ್ದು, ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ದೇಶವು ಶೋಕದಲ್ಲಿ ಮುಳುಗಿದ್ದರೆ, ಕೆಲ ದುಷ್ಕರ್ಮಿಗಳು ಮಾತ್ರ ಇದೇ ಸಂದರ್ಭವನ್ನು ಬಳಸಿಕೊಂಡು ಹಣ ಮಾಡುವ ದುಷ್ಕೃತ್ಯಕ್ಕೆ ಕೈಹಾಕಿದ್ದಾರೆ.
ಹೌದು, ಪ್ರವಾಹದಲ್ಲಿ ಬ್ಯಾಂಕ್ ಲಾಕರ್ ಒಂದು ಕೊಚ್ಚಿಹೋಗಿದ್ದು, ಅದನ್ನು ಒಡೆದು ಅದರಿಂದ ಲಕ್ಷಾಂತರ ರೂಪಾಯಿ ಹಣ ದೋಚಿದ್ದ 29 ದುಷ್ಕರ್ಮಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಪ್ರಕರಣ ದಾಖಲಿಸಿದ್ದಾರೆ.
ರಸುವಾ ಜಿಲ್ಲೆಯ ಭೋಟೆ ಕೋಶಿ ನದಿಯಲ್ಲಿ ಕೊಚ್ಚಿಹೋಗಿದ್ದ ಲಾಕರ್, ಕೆಲ ದಿನಗಳ ಬಳಿಕ ಗಾಲ್ಚಿ ಗ್ರಾಮೀಣ ಪಟ್ಟಣ ಪಂಚಾಯಿತಿಯ ಬೆಲ್ಖುಖೋಲಾ ಬಳಿ ತ್ರಿಶೂಲಿ ನದಿಯಲ್ಲಿ ಪತ್ತೆಯಾಗಿದೆ ಎಂದು ಧಾಡಿಂಗ್ ಠಾಣೆ ಪೊಲೀಸರು ಹೇಳಿದ್ದಾರೆ. ನೀರಿನಲ್ಲಿ ತೇಲಿಬಂದ ಲಾಕರ್ ಅನ್ನು ಸ್ಥಳೀಯರು ತೆರೆದಿದ್ದು, ಲಕ್ಷಾಂತರ ರೂಪಾಯಿ ಹಣ ದೋಚಿರುವ ಬಗ್ಗೆ ಮಾಹಿತಿ ಬಂದಿತ್ತು ಎಂದು ಅವರು ತಿಳಿಸಿದ್ದಾರೆ.
ಕೂಡಲೇ ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಿದ್ದು, ತನಿಖೆ ಚುರುಕುಗೊಳಿಸಲಾಗಿತ್ತು. ಪ್ರಾಥಮಿಕ ಶೋಧ ಕಾರ್ಯಾಚರಣೆಯಲ್ಲಿ 29 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಅವರಿಂದ 92,68,505 ನೇಪಾಳ ರೂಪಾಯಿ(ಭಾರತದ ಕರೆನ್ಸಿಯಲ್ಲಿ ಸುಮಾರು ₹ 57 ಲಕ್ಷ) ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಆಘಾತಕಾರಿ ಘಟನೆಯಲ್ಲಿ, ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದ್ದ ಮೃತದೇಹಗಳ ಬಳಿ ಇದ್ದ ಬಂಗಾರದ ಓಲೆಗಳನ್ನು ಕದಿಯುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನೇಪಾಳ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 626ಕ್ಕೆ ಏರಿದ್ದು, 2,426 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಈ ಪೈಕಿ, ನೇಪಾಳದ ಸುಮಾರು 1,924 ಮಂದಿ ಸೇರಿದ್ದು, 517 ವಿದೇಶಿಗರಾಗಿದ್ದಾರೆ.
Fact Check: ನೇಪಾಳ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಆನೆ ರಕ್ಷಿಸಿದೆಯೇ?ನೇಪಾಳ ಪ್ರವಾಹ | ಈಶಾ ಫೌಂಡೇಶನ್‌ನ 80 ಮಂದಿ ನಾಪತ್ತೆ: ಸದ್ಗುರು ಜಗ್ಗಿ ವಾಸುದೇವ್ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ನೇಪಾಳ ಪ್ರವಾಹ: ಕೊಚ್ಚಿಹೋದ ಬ್ಯಾಂಕ್ ಲಾಕರ್ ಒಡೆದು ಲಕ್ಷಾಂತರ ರೂಪಾಯಿ ದೋಚಿದರು
ಒಂದು ಸಾಲಿನಲ್ಲಿನೇಪಾಳದ ಭೀಕರ ಪ್ರವಾಹದ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು, ನದಿಯಲ್ಲಿ ಕೊಚ್ಚಿಬಂದಿದ್ದ ಬ್ಯಾಂಕ್ ಲಾಕರ್‌ನಿಂದ ಲಕ್ಷಾಂತರ ರೂಪಾಯಿ ದೋಚಿದ 29 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಏನು? ಏಕೆ? ಹೇಗೆ?
ಪ್ರವಾಹದಲ್ಲಿ ಸಿಕ್ಕ ಬ್ಯಾಂಕ್ ಲಾಕರ್‌ನಿಂದ ಹಣ ದೋಚಿದವರು ಯಾರು?
ಪ್ರವಾಹದಲ್ಲಿ ಕೊಚ್ಚಿಹೋಗಿ ನದಿಯಲ್ಲಿ ಪತ್ತೆಯಾಗಿದ್ದ ಬ್ಯಾಂಕ್ ಲಾಕರ್ ಅನ್ನು ತೆರೆದು, ಅದರಿಂದ ಲಕ್ಷಾಂತರ ರೂಪಾಯಿ ಹಣವನ್ನು ಕದ್ದ 29 ಜನರನ್ನು ನೇಪಾಳದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಘಟನೆ ಎಲ್ಲಿ ಮತ್ತು ಹೇಗೆ ನಡೆಯಿತು?
ರಸುವಾ ಜಿಲ್ಲೆಯ ಭೋಟೆ ಕೋಶಿ ನದಿಯಲ್ಲಿ ಕೊಚ್ಚಿಹೋಗಿದ್ದ ಲಾಕರ್, ನಂತರ ಧಾಡಿಂಗ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರು ಅದನ್ನು ತೆರೆದು ಹಣ ದೋಚಿದ್ದರು.
ಪೊಲೀಸರು ಎಷ್ಟು ಹಣವನ್ನು ವಶಪಡಿಸಿಕೊಂಡಿದ್ದಾರೆ?
ಆರೋಪಿಗಳಿಂದ ಒಟ್ಟು 92,68,505 ನೇಪಾಳ ರೂಪಾಯಿಗಳನ್ನು (ಭಾರತೀಯ ಕರೆನ್ಸಿಯಲ್ಲಿ ಸುಮಾರು 57 ಲಕ್ಷ ರೂಪಾಯಿ) ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರವಾಹದ ಸಂದರ್ಭದಲ್ಲಿ ವರದಿಯಾದ ಇತರ ಕ್ರಿಮಿನಲ್ ಚಟುವಟಿಕೆಗಳೇನು?
ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದ್ದ ಮೃತದೇಹಗಳ ಬಳಿ ಇದ್ದ ಬಂಗಾರದ ಓಲೆಗಳನ್ನು ಕದಿಯಲು ಯತ್ನಿಸಿದ ಇಬ್ಬರು ವ್ಯಕ್ತಿಗಳನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ನೇಪಾಳದ ಪ್ರವಾಹದಿಂದ ಉಂಟಾದ ಸಾವು-ನೋವಿನ ಪ್ರಮಾಣ ಎಷ್ಟು?
ಈ ಭೀಕರ ಪ್ರವಾಹ ದುರಂತದಲ್ಲಿ ಇಲ್ಲಿಯವರೆಗೆ 626 ಮಂದಿ ಸಾವನ್ನಪ್ಪಿದ್ದು, 2,426 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಪ್ರಮುಖ ಅಂಕಿಅಂಶಗಳು
29ಬಂಧಿತ ಆರೋಪಿಗಳ ಸಂಖ್ಯೆ92,68,505ವಶಪಡಿಸಿಕೊಂಡ ಹಣ (ನೇಪಾಳ ರೂಪಾಯಿ)626ಒಟ್ಟು ಮೃತರ ಸಂಖ್ಯೆ2,426ನಾಪತ್ತೆಯಾದವರ ಒಟ್ಟು ಸಂಖ್ಯೆ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

