Dailyhunt Logo
  • Light mode
    Follow system
    Dark mode
    • Play Story
    • App Story
ನೀಟ್ ಪರೀಕ್ಷೆಯಿಂದ ಪ್ರಧಾನ್ ರಾಜೀನಾಮೆವರೆಗೆ ಏನೆಲ್ಲ ಆಯ್ತು? ಇಲ್ಲಿದೆ ಮಾಹಿತಿ

ನೀಟ್ ಪರೀಕ್ಷೆಯಿಂದ ಪ್ರಧಾನ್ ರಾಜೀನಾಮೆವರೆಗೆ ಏನೆಲ್ಲ ಆಯ್ತು? ಇಲ್ಲಿದೆ ಮಾಹಿತಿ

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ನೀಟ್ ಪರೀಕ್ಷೆಯಿಂದ ಪ್ರಧಾನ್ ರಾಜೀನಾಮೆವರೆಗೆ ಏನೆಲ್ಲ ಆಯ್ತು? ಇಲ್ಲಿದೆ ಮಾಹಿತಿ

ಒಂದು ಸಾಲಿನಲ್ಲಿನೀಟ್ ಪರೀಕ್ಷೆಯ ಅಕ್ರಮದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಂಘಟನೆಗಳ ತೀವ್ರ ಪ್ರತಿಭಟನೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ.

ಏನು? ಏಕೆ? ಹೇಗೆ?


ಧರ್ಮೇಂದ್ರ ಪ್ರಧಾನ್ ಅವರು ಏಕೆ ರಾಜೀನಾಮೆ ನೀಡಿದರು?

ನೀಟ್ ಪರೀಕ್ಷಾ ಅಕ್ರಮ ಮತ್ತು ಅದರಿಂದ ಉಂಟಾದ ಆಕ್ರೋಶದ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಾಗೂ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಲು ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.


ಯಾವ ಸಂಘಟನೆಯು ಈ ಪ್ರತಿಭಟನೆಯ ನೇತೃತ್ವ ವಹಿಸಿತ್ತು?

ಕಾಕ್ರೋಚ್‌ ಜನತಾ ಪಕ್ಷ (ಸಿಜೆಪಿ) ವೇದಿಕೆಯು ಈ ಪ್ರತಿಭಟನೆಯನ್ನು ಮುನ್ನಡೆಸುತ್ತಿದ್ದು, ವಿದ್ಯಾರ್ಥಿಗಳ ಪರವಾಗಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದೆ.


ಪ್ರತಿಭಟನೆಯಲ್ಲಿ ಸೊನಮ್ ವಾಂಗ್ಚೂಕ್ ಅವರ ಪಾತ್ರವೇನು?

ಸಾಮಾಜಿಕ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಅವರು ಜಂತರ್ ಮಂತರ್‌ನಲ್ಲಿ 26 ದಿನಗಳ ಕಾಲ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ವಿದ್ಯಾರ್ಥಿಗಳ ಹೋರಾಟಕ್ಕೆ ಬಲ ತುಂಬಿದರು.


ಪ್ರತಿಭಟನಾಕಾರರ ಮುಂದಿನ ಬೇಡಿಕೆಗಳೇನು?

ಸಚಿವರ ರಾಜೀನಾಮೆಯ ಹೊರತಾಗಿಯೂ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಬೇಕು ಮತ್ತು ಅಕ್ರಮದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಿಜೆಪಿ ಒತ್ತಾಯಿಸಿದೆ.


ಸರ್ಕಾರವು ಪರೀಕ್ಷಾ ಅಕ್ರಮದ ತನಿಖೆಗೆ ಕೈಗೊಂಡ ಕ್ರಮವೇನು?

ಪ್ರಧಾನಿ ನರೇಂದ್ರ ಮೋದಿಯವರು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.

ಪ್ರಮುಖ ಅಂಕಿಅಂಶಗಳು

ಮೇ 3ಪರೀಕ್ಷೆ ನಡೆದ ದಿನಾಂಕಜೂನ್ 21ಮರು ಪರೀಕ್ಷೆ ನಡೆದ ದಿನಾಂಕ20 ಲಕ್ಷಪರೀಕ್ಷೆ ಬರೆದ ವಿದ್ಯಾರ್ಥಿಗಳುಜುಲೈ 25ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ನವದೆಹಲಿ: ನೀಟ್‌ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಇಂದು ಯಶಸ್ಸು ಸಿಕ್ಕಿದೆ.

ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಿದ್ದಾರೆ. 'ಸವಾಲಿನ ಪರಿಸ್ಥಿತಿಯಿಂದ ಹಿಂದೆ ಸರಿದಿಲ್ಲ. ಮೊದಲ ದಿನದಿಂದಲೇ ನಾನು ಜವಾಬ್ದಾರಿ ಹೊತ್ತುಕೊಂಡಿದ್ದೇನೆ. ಕಳೆದ 10 ದಿನಗಳಿಂದ ಏನೆಲ್ಲಾ ಆಗಿದೆಯೋ ಅದನ್ನೆಲ್ಲ ಕಂಡು ಬೇಸರವಾಗಿದೆ' ಎಂದು ಅವರು ಹೇಳಿಕೊಂಡಿದ್ದಾರೆ.

'ಜಂತರ್ ಮಂತರ್‌ನಲ್ಲಿ ಹಾಗೂ ದೇಶದಾದ್ಯಂತ ಉದ್ಭವಿಸಿರುವ ಪರಿಸ್ಥಿತಿಯ ಲಾಭವನ್ನು ದೇಶ ವಿರೋಧಿ ಶಕ್ತಿಗಳು ಪಡೆದುಕೊಳ್ಳದಂತೆ ತಡೆಯುವುದು, ದೇಶದ ಏಕತೆಯನ್ನು ಕಾಯ್ದುಕೊಳ್ಳುವುದು, ಭಾರತದ ಯಾವೊಬ್ಬ ವಿದ್ಯಾರ್ಥಿಯ ಭವಿಷ್ಯವೂ ಕಾನೂನು ಸಂಕೀರ್ಣತೆಗಳಲ್ಲಿ ಸಿಲುಕದಂತೆ ನೋಡಿಕೊಳ್ಳುವುದು ಮತ್ತು ನಮ್ಮ ಮಕ್ಕಳು ತಮ್ಮ ಸಮಯವನ್ನು ವ್ಯಾಸಂಗ ಹಾಗೂ ವೃತ್ತಿಜೀವನ ರೂಪಿಸಿಕೊಳ್ಳುವುದರತ್ತ ವಿನಿಯೋಗಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ನಾನು ಗೌರವಾನ್ವಿತ ಪ್ರಧಾನಮಂತ್ರಿಯವರಿಗೆ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ' ಎಂದು ತಿಳಿಸಿದ್ದಾರೆ.

Pradhan Resigns: ಪ್ರಧಾನಿ ಮೋದಿಗೆ ಧರ್ಮೇಂದ್ರ ಪ್ರಧಾನ್ ಬರೆದ ಪತ್ರದ ಪೂರ್ಣ ಪಾಠವಿದ್ಯಾರ್ಥಿ ಹೋರಾಟಕ್ಕೆ ಮಣಿದು ಕೊನೆಗೂ ರಾಜೀನಾಮೆ ನೀಡಿದ ಪ್ರಧಾನ್

ಆದಾಗ್ಯೂ ಪ್ರತಿಭಟನೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಸಿಜೆಪಿ ನಾಯಕ ಅಭಿಜಿತ್‌ ದೀಪ್ಕೆ, ತಮ್ಮ ಇತರ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಡೆಸುತ್ತೇವೆ ಎಂದಿದ್ದಾರೆ.

ನೀಟ್‌ ಪರೀಕ್ಷೆ ನಡೆದ ದಿನದಿಂದ ಈವರೆಗೆ ಏನೆಲ್ಲ ಆಯಿತು ಎಂಬುದರ ಪ್ರಮುಖ ಅಂಶಗಳು ಇಲ್ಲಿವೆ.

  • ಮೇ 3: ನೀಟ್ ಪರೀಕ್ಷೆ ಆಯೋಜನೆ. ಅಂದಾಜು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರ ಬೆನ್ನಲ್ಲೇ, ಪ್ರಶ್ನೆಪತ್ರಿಕೆ ಸೋರಿಕೆ ಸುದ್ದಿ ಹರಡಿತ್ತು.

  • ಮೇ 10: ರಾಜಸ್ಥಾನದಲ್ಲಿನ ಶಿಕ್ಷಕರೊಬ್ಬರು ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆ ಸಾಕ್ಷಿ ಸಮೇತ ಅಲ್ಲಿಯ ತನಿಖಾ ಸಂಸ್ಥೆಗೆ ಮಾಹಿತಿ ನೀಡಿದ್ದರು.

  • ಮೇ 12: ಮೇ 3ರಂದು ನಡೆದ ಪರೀಕ್ಷೆಯನ್ನು ರದ್ದು ಮಾಡುವುದಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಘೋಷಣೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ ಒಪ್ಪಿಸಿ, ದೇಶದಾದ್ಯಂತ ಮರು ಪರೀಕ್ಷೆ ನಡೆಸಲಾಗುವುದು ಎಂದೂ ಮಾಹಿತಿ.

  • ಮೇ 15: ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ದೃಢಪಟ್ಟಿವೆ ಎಂದು ಒಪ್ಪಿಕೊಂಡ ಧರ್ಮೇಂದ್ರ ಪ್ರಧಾನ್‌. ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಂಡದ ಭಾಗವಾಗಿದ್ದ ಪುಣೆಯ ಶಿಕ್ಷಕ ಬಂಧನ. ಅದಾದ ನಂತರ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಕೂಗು ದೇಶದಾದ್ಯಂತ ಎದ್ದಿತು.

  • ಮೇ 16: ಕಾಕ್ರೋಚ್‌ ಜನತಾ ಪಕ್ಷ (ಸಿಜೆಪಿ) ವೇದಿಕೆ ಆರಂಭಿಸಿದ ಅಭಿಜಿತ್‌ ದೀಪ್ಕೆ

  • ಜೂನ್‌ 2: ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೇಶದ ಪ್ರಮುಖ ನಗರಗಳಲ್ಲಿ ಪ್ರತಿಭಟನೆ.

  • ಜೂನ್‌ 6: ಭಾರತಕ್ಕೆ ವಾಪಸ್‌ ಆದ ದೀಪ್ಕೆ. ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಸಿಜೆಪಿಯ ಮೊದಲ ಪ್ರತಿಭಟನೆ

  • ಜೂನ್ 11: ಪರೀಕ್ಷಾ ಸುಧಾರಣೆ ಮತ್ತು ವಿದ್ಯಾರ್ಥಿಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಸಿಜೆಪಿಯಿಂದ ಐದು ಅಂಶಗಳ ಪ್ರಸ್ತಾಪ

  • ಜೂನ್ 20: ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ ಸಿಜೆಪಿ

  • ಜೂನ್ 28: ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಾಮಾಜಿಕ ಕಾರ್ಯಕರ್ತ ಸೊನಮ್ ವಾಂಗ್ಚೂಕ್

  • ಜುಲೈ 9: ಮುಂಗಾರು ಅಧಿವೇಶನದ ಮೊದಲ ದಿನ (ಜುಲೈ 20) 'ಸಂಸತ್ ಚಲೊ' ನಡೆಸುವುದಾಗಿ ಸಿಜೆಪಿ ಘೋಷಣೆ

  • ಜುಲೈ 16: ವಾಂಗ್ಚೂಕ್ ಅವರ ಆರೋಗ್ಯದ ಮೇಲೆ ನಿಗಾ ಇಡುವಂತೆ, ಜೀವ ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ದೆಹಲಿ ಹೈಕೋರ್ಟ್ ನಿರ್ದೇಶನ

  • ಜುಲೈ 18: ವಾಂಗ್ಚೂಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ ದೆಹಲಿ ಪೊಲೀಸ್

  • ಜುಲೈ 20: ವಿದ್ಯಾರ್ಥಿಗಳೂ ಸೇರಿದಂತೆ ಸಾವಿರಾರು ಜನರು ಸಿಜೆಪಿ ನೇತೃತ್ವದಲ್ಲಿ 'ಸಂಸತ್‌ ಚಲೊ' ಪ್ರತಿಭಟನಾ ಮೆರವಣಿಗೆಯಲ್ಲಿ ಹೆಜ್ಜೆ ಇಟ್ಟರು.

ಪ್ರಧಾನ್ ರಾಜೀನಾಮೆ ಭರವಸೆ ಸಿಗದೆ ಸೊನಮ್ ಉಪವಾಸ ಅಂತ್ಯಗೊಳಿಸಿದ್ದೇಕೆ? ಕೇಂದ್ರದ ಭರವಸೆ: ಸೊನಮ್ ವಾಂಗ್ಚೂಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ
  • ‌ಜುಲೈ 20: ಪೊಲೀಸರು - ವಿದ್ಯಾರ್ಥಿಗಳ ಘರ್ಷಣೆ; ಲಾಠಿಚಾರ್ಜ್‌

  • ಜುಲೈ 20: ಸಿಜೆಪಿ ಪ್ರತಿನಿಧಿಗಳೊಂದಿಗೆ ಜೆ.ಪಿ. ನಡ್ಡಾ ನಿವಾಸದಲ್ಲಿ ಮೊದಲ ಸುತ್ತಿನ ಮಾತುಕತೆ

  • ಜುಲೈ 21: ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್‌ ಖಂಡಿಸಿ ಪ್ರತಿಭಟನೆಗೆ ಧುಮುಕಿದ ವಿರೋಧ ಪಕ್ಷಗಳು. ಪ್ರಧಾನಿ ನರೇಂದ್ರ ಮೋದಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು

  • ಜುಲೈ 21: ಪ್ರಧಾನಿ ನಿವಾಸದ ಎದುರು ಧರಣಿ ಕುಳಿತಿದ್ದ ರಾಹುಲ್ ಗಾಂಧಿ ಸೇರಿದಂತೆ, ಕಾಂಗ್ರೆಸ್‌ ನಾಯಕರು ಪೊಲೀಸರ ವಶಕ್ಕೆ

  • ಜುಲೈ 23: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗೆ ತ್ವರಿತ ನ್ಯಾಯಾಲಯ ಆರಂಭಿಸುವುದಾಗಿ ಪ್ರಧಾನಿ ಮೋದಿ ಘೋಷಣೆ

  • ಜುಲೈ 24: ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಡಾ. ಜಿತೇಂದ್ರ ಸಿಂಗ್ ಅವರು ಮೇದಾಂತ ಆಸ್ಪತ್ರೆಗೆ ಭೇಟಿ ನೀಡಿ, ಮಾತುಕತೆ ನಡೆಸಿದ ಬೆನ್ನಲ್ಲೇ (26ನೇ ದಿನ) ಉಪವಾಸ ನಿಲ್ಲಿಸಿದ ವಾಂಗ್ಚೂಕ್‌

  • ಜುಲೈ 24: ಸಿಜೆಪಿ ನಾಯಕರೊಂದಿಗೆ ನಡ್ಡಾ ಎರಡನೇ ಸುತ್ತಿನ ಮಾತುಕತೆ; ಪ್ರಧಾನ್ ರಾಜೀನಾಮೆಗೆ ಪಟ್ಟು ಹಿಡಿದ ಸಿಜೆಪಿ

  • ಜುಲೈ 24: ವಿಡಿಯೊ ಸಂದೇಶ ಹಂಚಿಕೊಂಡು, ತ್ವರಿತ ಕ್ರಮದ ಭರವಸೆ ನೀಡಿದ ಪ್ರಧಾನಿ ಮೋದಿ

  • ಜುಲೈ 25: ತಮಗೆ ವಿಷಮಶೀತ ಜ್ವರ (Typhoid) ಇದೆ. ಆದರೂ, ಹೋರಾಟ ನಿಲ್ಲಿಸುವುದಿಲ್ಲ ಎಂದು ಘೋಷಿಸಿದ ದೀಪ್ಕೆ

  • ಜುಲೈ 25: ಧರ್ಮೇಂದ್ರ ಪ್ರಧಾನ್ ರಾಜೀನಾಮೆ

  • ಜುಲೈ 25: 'ಪ್ರಜಾಪ್ರಭುತ್ವ ಗೆಲುವು ಸಾಧಿಸಿದೆ. ಆದಾಗ್ಯೂ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ನೀಡಬೇಕು. ಪ್ರಕರಣದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ನಮ್ಮ ಇನ್ನೆರಡು ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಿಲ್ಲದು' ಎಂದು ಘೋಷಿಸಿದ ದೀಪ್ಕೆ

Dailyhunt
Disclaimer: This content has not been generated, created or edited by Dailyhunt. Publisher: Prajavani