Dailyhunt Logo
  • Light mode
    Follow system
    Dark mode
    • Play Story
    • App Story
ಪಂಜಾಬ್: ಎಎಪಿಗೆ ಆಘಾತ, ಬಿಜೆಪಿ ಸೇರಿದ ಮೂವರು ಬಂಡಾಯ ಶಾಸಕರು

ಪಂಜಾಬ್: ಎಎಪಿಗೆ ಆಘಾತ, ಬಿಜೆಪಿ ಸೇರಿದ ಮೂವರು ಬಂಡಾಯ ಶಾಸಕರು

ನವದೆಹಲಿ: ಪಂಜಾಬ್ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ತೀವ್ರ ಹಿನ್ನಡೆಯಾಗಿದ್ದು, ಶಾಸಕ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಸೇರಿದಂತೆ ಮೂವರು ಬಂಡಾಯ ಶಾಸಕರು ಸೋಮವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಇದಕ್ಕೂ ಮುನ್ನ, ಎಎಪಿಯಿಂದ ಅಮಾನತುಗೊಂಡಿದ್ದ ಶಾಸಕ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಅವರು ಪಂಜಾಬ್ ವಿಧಾನಸಭೆಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದರು.

'ನನ್ನ ರಾಜೀನಾಮೆ ಪತ್ರವನ್ನು ವಿಧಾನಸಭೆ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಅವರಿಗೆ ರವಾನಿಸಿದ್ದೇನೆ' ಎಂದು ಅಮೃತಸರ ಉತ್ತರ ಕ್ಷೇತ್ರದ ಶಾಸಕರಾಗಿರುವ ಸಿಂಗ್ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಳಿಕ, ಇಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹಿರಿಯ ನಾಯಕರ ಸಮ್ಮುಖದಲ್ಲಿ ಸಿಂಗ್ ಅವರು ಪಂಜಾಬ್‌ನ ಇತರ ಇಬ್ಬರು ಶಾಸಕರಾದ ಚೇತನ್ ಸಿಂಗ್ ಜೌರಾಮ್‌ಜರ ಮತ್ತು ಹರ್ಮೀತ್ ಸಿಂಗ್ ಪಠಾಣ್‌ಮಾಜರ ಅವರೊಂದಿಗೆ ಕಮಲ ಪಾಳಯ ಸೇರಿದರು.

ಪಾಟಿಯಾಲ ಜಿಲ್ಲೆಯ ಸಮಾಣಾ ಕ್ಷೇತ್ರದ ಶಾಸಕ ಚೇತನ್ ಸಿಂಗ್ ಹಾಗೂ ಸನೌರ್ ಕ್ಷೇತ್ರದ ಶಾಸಕ ಹರ್ಮೀತ್ ಸಿಂಗ್ ಅವರು ಭಾನುವಾರವಷ್ಟೇ ಎಎಪಿ ತೊರೆದಿದ್ದರು. ಇದರ ಬೆನ್ನಲ್ಲೇ ಇದೀಗ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ.

ಪಂಜಾಬ್: ಶಾಸಕ ಸ್ಥಾನಕ್ಕೆ ಮಾಜಿ IPS ಅಧಿಕಾರಿ ವಿಜಯ್ ಪ್ರತಾಪ್ ಸಿಂಗ್ ರಾಜೀನಾಮೆPunjab Election: ಎಎಪಿ ಅಭ್ಯರ್ಥಿಗಳ ಮೊದಲ ಪಟ್ಟಿ;ಜೈಲಲ್ಲಿರುವ ಸಚಿವನಿಗೆ ಟಿಕೆಟ್
Dailyhunt
Disclaimer: This content has not been generated, created or edited by Dailyhunt. Publisher: Prajavani