Dailyhunt Logo
  • Light mode
    Follow system
    Dark mode
    • Play Story
    • App Story
ಪತ್ರಿಕೋದ್ಯಮವನ್ನು ದುರುಪಯೋಗಪಡಿಸಿಕೊಳ್ಳಬಾರದು: ದೆಹಲಿ ಪೊಲೀಸ್

ಪತ್ರಿಕೋದ್ಯಮವನ್ನು ದುರುಪಯೋಗಪಡಿಸಿಕೊಳ್ಳಬಾರದು: ದೆಹಲಿ ಪೊಲೀಸ್

ನವದೆಹಲಿ: ಪತ್ರಿಕೋದ್ಯಮಕ್ಕೆ ತನ್ನದೇ ಆದ ಮಹತ್ವದ ಜವಾಬ್ದಾರಿಯಿದೆ, ಆದರೆ ಅದನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಕೆಲವು ವ್ಯಕ್ತಿಗಳು ಒಂದು ದಿನ ಪತ್ರಕರ್ತರಂತೆ ಬಂದು ವರದಿ ಮಾಡುತ್ತಾರೆ. ಮರುದಿನ ಖುದ್ದಾಗಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ.

ಅಂತಹವರನ್ನು ವಶಕ್ಕೆ ಪಡೆಯಲಾಗುತ್ತಿದೆ ಎಂದು ಹೆಚ್ಚುವರಿ ಡಿಸಿಪಿ ಮನ್‌ಜೀತ್ ಶಿಯೋರನ್ ಹೇಳಿದ್ದಾರೆ.

ಪ್ರತಿಭಟನಾ ಸ್ಥಳಗಳಿಂದ ಸೂಕ್ತ ಅಂತರ ಕಾಯ್ದುಕೊಂಡು ವರದಿ ಮಾಡುವಂತೆ ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೂ ಅವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಮನ್‌ಜೀತ್ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ, ಪ್ರತಿಭಟನೆಗಳ ವರದಿ ಮಾಡಲು ತೆರಳುವ ಪತ್ರಕರ್ತರಿಗೆ ದೆಹಲಿ ಪೊಲೀಸರು ಮಹತ್ವದ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದಾರೆ.

ಗುರುತಿನ ಚೀಟಿ ಕಡ್ಡಾಯ:

ಮಾಧ್ಯಮ ಪ್ರತಿನಿಧಿಗಳು ತಮ್ಮ ಸಂಸ್ಥೆ ನೀಡಿದ ಮಾನ್ಯತೆ ಪಡೆದ ಗುರುತಿನ ಚೀಟಿ ಅಥವಾ ಪಿಐಬಿ/ಡಿಐಪಿ ಮಾನ್ಯತಾ ಪತ್ರಗಳನ್ನು ಕಡ್ಡಾಯವಾಗಿ ಸ್ಪಷ್ಟವಾಗಿ ಕಾಣುವಂತೆ ಧರಿಸಿರಬೇಕು. ಇದು ಭದ್ರತಾ ಸಿಬ್ಬಂದಿಗೆ ಪತ್ರಕರ್ತರನ್ನು ಸುಲಭವಾಗಿ ಗುರುತಿಸಲು ನೆರವಾಗುತ್ತದೆ.

ಕರ್ತವ್ಯಕ್ಕೆ ಅಡ್ಡಿಯಾಗದಂತೆ ಎಚ್ಚರ ವಹಿಸಬೇಕು:

ವರದಿ ಮಾಡುವ ವೇಳೆ ಪೊಲೀಸರ ಕಾರ್ಯಾಚರಣೆ ಹಾಗೂ ಅವರ ಸಂಚಾರಕ್ಕೆ ಯಾವುದೇ ರೀತಿಯಲ್ಲೂ ಅಡ್ಡಿಯಾಗದಂತೆ ಎಚ್ಚರ ವಹಿಸಬೇಕು.

ಸುರಕ್ಷಿತ ಅಂತರ: ಉದ್ವಿಗ್ನ ಪರಿಸ್ಥಿತಿ ಉಂಟಾದಾಗ ಸುರಕ್ಷಿತ ಅಂತರ ಕಾಯ್ದುಕೊಂಡು ಚಿತ್ರೀಕರಣ ಹಾಗೂ ವರದಿಗಾರಿಕೆ ನಡೆಸಬೇಕು. ಪ್ರತಿಭಟನಾಕಾರರ ಗುಂಪಿನಿಂದ ತಾವು ಪ್ರತ್ಯೇಕವಾಗಿ ಕಾಣುವಂತಹ ಸ್ಥಳಗಳಲ್ಲಿ ನಿಂತು ವರದಿ ಮಾಡಬೇಕು ಎಂದು ಮಾರ್ಗಸೂಚಿ ಬಿಡುಗಡೆಗೊಳಿಸಿದೆ.

ನಾಳೆಯ ಸಿಜೆಪಿ ಧರಣಿಗೆ ದೆಹಲಿ ಪೊಲೀಸರ ತಡೆ: ಜಂತರ್ ಮಂತರ್‌ನಲ್ಲಿ ನಿಷೇಧಾಜ್ಞೆಸಿಜೆಪಿ ಪ್ರತಿಭಟನೆ: ದೆಹಲಿಗೆ ಬರುವ ರೈಲುಗಳು ರದ್ದು, ಮೆಟ್ರೊ ನಿಲ್ದಾಣ ಬಂದ್
Dailyhunt
Disclaimer: This content has not been generated, created or edited by Dailyhunt. Publisher: Prajavani