Dailyhunt Logo
  • Light mode
    Follow system
    Dark mode
    • Play Story
    • App Story
ಸಿಜೆಪಿ ಪ್ರತಿಭಟನೆ: ದೆಹಲಿಗೆ ಬರುವ ರೈಲುಗಳು ರದ್ದು, ಮೆಟ್ರೊ ನಿಲ್ದಾಣ ಬಂದ್

ಸಿಜೆಪಿ ಪ್ರತಿಭಟನೆ: ದೆಹಲಿಗೆ ಬರುವ ರೈಲುಗಳು ರದ್ದು, ಮೆಟ್ರೊ ನಿಲ್ದಾಣ ಬಂದ್

ನವದೆಹಲಿ: ಅಕ್ಟೋಬರ್‌ 10ರಂದು ಮುಂಜಾನೆ 4ರಿಂದ ಮಧ್ಯಾಹ್ನ 2ಗಂಟೆ ನಡುವೆ ದೆಹಲಿಗೆ ಬರಬೇಕಿದ್ದ ಕೆಲವು ರೈಲುಗಳನ್ನು ರೈಲ್ವೆ ಮಂಡಳಿ ರದ್ದು ಪಡಿಸಿದೆ.

ನವದೆಹಲಿ ಹಾಗೂ ಹಝ್ರತ್ ನಿಜಾಮುದ್ದೀನ್ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದು ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಳೆಯ ಸಿಜೆಪಿ ಧರಣಿಗೆ ದೆಹಲಿ ಪೊಲೀಸರ ತಡೆ: ಜಂತರ್ ಮಂತರ್‌ನಲ್ಲಿ ನಿಷೇಧಾಜ್ಞೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ದೆಹಲಿಯ ಜಂತರ್ ಮಂತರ್‌ನಲ್ಲಿ ಅ.10ಎಂದು ಶಾಂತಿಯುತ ಪ್ರತಿಭಟನೆಗೆ ಕರೆಕೊಟ್ಟಿದೆ.

'ಅಕ್ಟೋಬರ್ 9ರಂದು ಮೂಲ ನಿಲ್ದಾಣದಿಂದ ಮಧ್ಯಾಹ್ನ 2 ಗಂಟೆಗೆ ಬಳಿಕ ಹೊರಟು, ಅ.10 ರಂದು ನವದೆಹಲಿ ಹಾಗೂ ಹಝ್ರತ್ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ಮುಂಜಾನೆ 4ರಿಂದ ಮಧ್ಯಾಹ್ನ 2 ಗಂಟೆ ನಡುವೆ ತಲುಪುವ ಎಲ್ಲಾ ಮೇಲ್ ಹಾಗೂ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಪೂರ್ಣವಾಗಿ ರದ್ದು ಮಾಡಲಾಗಿದೆ' ಎಂದು ಪ್ರಕಟಣೆ ತಿಳಿಸಿದೆ.

ನಾಳೆ ಸಿಜೆಪಿ ಪ್ರತಿಭಟನೆ: ಭದ್ರತೆಗೆ 20 ಸಾವಿರ ಸಿಬ್ಬಂದಿ

ಭಾರಿ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮಂಡಳಿ ಹೇಳಿದೆ.

ಇದರ ಜೊತೆಗೆ ಪ್ರತಿಭಟನೆಗೆ ಆಗಮಿಸುವ ಯುವಕರನ್ನು ತಡೆಯಲು 57 ಮೆಟ್ರೊ ನಿಲ್ದಾಣಗಳನ್ನು ಮುಚ್ಚುವಂತೆ ದೆಹಲಿ ಪೊಲೀಸರು ದೆಹಲಿ ಮೆಟ್ರೊ ರೈಲು ನಿಗಮಕ್ಕೆ ಮನವಿ ಮಾಡಿದ್ದಾರೆ.

ದೆಹಲಿಯಾದ್ಯಂತ ಭಾರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಜಂತರ್ ಮಂತರ್‌ ಕಡೆಗೆ ತೆರಳುವ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.

ಒಗ್ಗಟ್ಟು ಪ್ರದರ್ಶಿಸಿ, ಸುದೀರ್ಘ ಆಂದೋಲನಕ್ಕೆ ಸಜ್ಜಾಗಿ: ಸಿಜೆಪಿ ಕರೆ
Dailyhunt
Disclaimer: This content has not been generated, created or edited by Dailyhunt. Publisher: Prajavani