Dailyhunt Logo
  • Light mode
    Follow system
    Dark mode
    • Play Story
    • App Story
ಪ್ರತಿ FIR ಪದಕವಿದ್ದಂತೆ, ಶತಕ ಗಳಿಸುವುದೇ ಗುರಿ: ರಾಹುಲ್ ತಿರುಗೇಟು

ಪ್ರತಿ FIR ಪದಕವಿದ್ದಂತೆ, ಶತಕ ಗಳಿಸುವುದೇ ಗುರಿ: ರಾಹುಲ್ ತಿರುಗೇಟು

ನವದೆಹಲಿ: 'ನನ್ನ ವಿರುದ್ಧ ದಾಖಲಾಗಿರುವ ಪ್ರತಿಯೊಂದು ಎಫ್‌ಐಆರ್ ಕೂಡ ನನ್ನ ಎದೆಯ ಮೇಲೆ ಬೀಳುವ ಪದಕವಿದ್ದಂತೆ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ವಿರುದ್ಧ ಅಕ್ಟೋಬರ್‌ 6ರಂದು ನಡೆಸಿದ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಆಕಾಶವಾಣಿ ಭವನಕ್ಕೆ ಬಲವಂತವಾಗಿ ಪ್ರವೇಶಿಸಿದ ಆರೋಪದ ಮೇಲೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅವರ ಬೆಂಬಲಿಗರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, 'ಸದ್ಯ ನನ್ನ ವಿರುದ್ಧ 45 ಪ್ರಕರಣಗಳಿವೆ. ಶತಕ ಗಳಿಸುವುದು ನನ್ನ ಗುರಿಯಾಗಿದೆ' ಎಂದು ಹೇಳಿದ್ದಾರೆ.

'ಎಷ್ಟೇ ಪ್ರಕರಣಗಳು ದಾಖಲಾದರೂ ಸಂವಿಧಾನ ರಕ್ಷಣೆಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ' ಎಂದು ರಾಹುಲ್ ಪುನರುಚ್ಚರಿಸಿದ್ದಾರೆ.

'ಇಂಡಿಯಾ' ಮೈತ್ರಿಕೂಟದ ಸಂಸದರು ಮಂಗಳವಾರ ನಡೆಸಿದ್ದ ಪ್ರತಿಭಟನಾ ಮೆರವಣಿಗೆಯನ್ನು ಪೊಲೀಸರು ತಡೆದಿದ್ದರು. ಆ ಬಳಿಕ ಸಂಸದರು ಆಕಾಶವಾಣಿ ಭವನದ ಆವರಣದಲ್ಲಿ ಎಂಟು ಗಂಟೆಗೂ ಹೆಚ್ಚು ಹೊತ್ತು ಧರಣಿ ನಡೆಸಿದ್ದರು. ರಾಹುಲ್ ಗಾಂಧಿ ಸೇರಿದಂತೆ 260 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್‌ ಮಂತರ್‌ ಕಡೆಗೆ ತೆರಳುತ್ತಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ಮಂದಿ ವಿರೋಧ ಪಕ್ಷದ ನಾಯಕರನ್ನು ದೆಹಲಿ ಪೊಲೀಸರು ಬುಧವಾರ ಮತ್ತೆ ವಶಕ್ಕೆ ಪಡೆದಿದ್ದಾರೆ.

ರಾಹುಲ್ ಗಾಂಧಿ

ಜ್ಞಾನೇಶ್‌ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ನಿಲ್ಲದು: ರಾಹುಲ್ ಗಾಂಧಿದೆಹಲಿಯಲ್ಲಿ ಮುಂದುವರಿದ ಪ್ರತಿಭಟನೆ: ರಾಹುಲ್, ಪ್ರಿಯಾಂಕಾ ಮತ್ತೆ ಪೊಲೀಸ್ ವಶಕ್ಕೆ
Dailyhunt
Disclaimer: This content has not been generated, created or edited by Dailyhunt. Publisher: Prajavani