ತೆಲುಗು ನಟ ರಾಮ್ ಚರಣ್ ಹುಟ್ಟುಹಬ್ಬದ ಪ್ರಯುಕ್ತ 'ಪೆದ್ದಿ' ಚಿತ್ರದ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ಈ ಚಿತ್ರದ ವಿಡಿಯೊ ಹಂಚಿಕೊಂಡು ನಟ ಶಿವರಾಜ್ ಕುಮಾರ್ ಅವರು ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.
ಧ್ರುವ ಸರ್ಜಾ ನಟನೆಯ 'ಕೆಡಿ' ಚಿತ್ರದ ಖಡಕ್ ಪಾತ್ರದಲ್ಲಿ ಬಾದ್ಷಾಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಶಿವರಾಜ್‌ಕುಮಾರ್, 'ನೀವು ಒಂದು ಪಾತ್ರಕ್ಕೆ ಜೀವ ತುಂಬುವ ರೀತಿ, ಅದಕ್ಕಾಗಿ ನೀವು ಪಡುವ ಶ್ರಮವನ್ನು ಹತ್ತಿರದಿಂದ ನೋಡಿದ್ದೇನೆ.
ನಿಮ್ಮೊಟ್ಟಿಗೆ ಕೆಲಸ ಮಾಡಿರುವುದು ತುಂಬಾ ಖುಷಿ ಕೊಟ್ಟಿದೆ' ಎಂದು ಬರೆದುಕೊಂಡು ರಾಮ್ ಚರಣ್ ಹುಟ್ಟು ಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.
'ಪೆದ್ದಿ' ಚಿತ್ರದ ಕನ್ನಡ 'ಗ್ಲಿಂಪ್ಸ್'ಗೆ ನಟ ಶಿವರಾಜ್ ಕುಮಾರ್ ಅವರು ಧ್ವನಿ ನೀಡಿದ್ದಾರೆ. ಟಿ-ಸೀರಿಸಿಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಚಿತ್ರದ ವಿಡಿಯೊ ಬಿಡುಗಡೆ ಮಾಡಲಾಗಿದೆ.
ಈ ಚಿತ್ರದಲ್ಲಿ ರಾಮ್ ಚರಣ್ ಅವರು ಪೈಲ್ವಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಪೆದ್ದಿ' ಚಿತ್ರವನ್ನು ಬುಚಿ ಬಾಬು ಸನಾ ಅವರು ನಿರ್ದೇಶನ ಮಾಡಿದ್ದಾರೆ. ವೃದ್ಧಿ ಫಿಲಂ ಸಂಸ್ಥೆ ನಿರ್ಮಾಣ ಮಾಡಿದೆ.

