ಚಂದನವನದ ಹಾಸ್ಯ ನಟ ವೈಜನಾಥ್ ಬಿರದಾರ್ ಅವರು ಇತ್ತೀಚೆಗೆ ತೆರೆಕಂಡ ವಿಜಯ್ ದೇವರಕೊಂಡ ನಟನೆಯ ಬಹುನಿರೀಕ್ಷಿತ ʼರಣಬಾಲಿʼ ಸಿನಿಮಾದಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಪೋಷಕ ಹಾಗೂ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಪೇಕ್ಷಕರ ಮನ ಗೆದ್ದಿರುವ ವೈಜನಾಥ್ ಬಿರಾದರ್ ಅವರು ಇದೇ ಮೊದಲ ಬಾರಿಗೆ ತೆಲುಗು ಚಿತ್ರವೊಂದರಲ್ಲಿ ನಟಿಸಿದ್ದಾರೆ.
ರಣಬಾಲಿ ಸಿನಿಮಾವನ್ನು ರಾಹುಲ್ ಸಂಕೃತ್ಯನ್ ಅವರು ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ವೈಜನಾಥ್ ಬಿರಾದರ್ ಅವರು ʼಶಿಲ್ಪಿ ರಾಮಯ್ಯʼ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಬ್ರಿಟಿಷರ್ ದಬ್ಬಾಳಿಕೆಗೆ ಒಳಗಾಗುವ ಹಳ್ಳಿಯ ಹಿರಿಯ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ.
ರಣಬಾಲಿ ವೀಕ್ಷಿಸಿದ ಸಂದೀಪ್ ರೆಡ್ಡಿ ವಂಗಾ: ವಿಜಯ್ ದೇವರಕೊಂಡ ಬಗ್ಗೆ ಹೇಳಿದ್ದಿಷ್ಟುಬೀದರ್ ಜಿಲ್ಲೆಯವರಾದ ವೈಜನಾಥ್ ಬಿರಾದರ್ ಅವರು ತಮ್ಮ ಸಹಜ ಅಭಿನಯ, ಹಾಸ್ಯಪ್ರಜ್ಞೆ ಮತ್ತು ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. ʼಕನಸೆಂಬ ಕುದುರೆಯನೇರಿʼ ಸಿನಿಮಾದ ಅಭಿನಯಕ್ಕಾಗಿ ʼಅತ್ಯುತ್ತಮ ನಟʼ ಪ್ರಶಸ್ತಿ ಪಡೆದಿದ್ದಾರೆ. ಇವರು ಈವರೆಗೆ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಭಾರತದಲ್ಲಿ ಮೊದಲ ದಿನ 2,515 ಪ್ರದರ್ಶನ ಕಂಡಿದ್ದು, ₹9.25 ಕೋಟಿ ನಿವ್ವಳ ಗಳಿಕೆ ಮಾಡಿದೆ. ಒಟ್ಟು ₹10.75 ಕೋಟಿ ಗಳಿಸಿದೆ. ವಿದೇಶಗಳಲ್ಲಿ ಮೊದಲ ದಿನ ಒಟ್ಟು ₹5.75 ಕೋಟಿ ಗಳಿಸಿದೆ.
ವಿಜಯ್ ದೇವರಕೊಂಡ ಅವರ ಹಿಂದಿನ ಸಿನಿಮಾ 'ಕಿಂಗ್‌ಡಮ್' ಮೊದಲ ದಿನ ಭಾರತದಲ್ಲಿ ₹18 ಕೋಟಿ ನಿವ್ವಳ ಗಳಿಕೆ ಕಂಡಿತ್ತು. ಇದಕ್ಕೆ ಹೋಲಿಸಿದರೆ, 'ರಣಬಾಲಿ' ಸಿನಿಮಾ ಅರ್ಧದಷ್ಟು ಮಾತ್ರ ಗಳಿಸಿದೆ.
1854ರಿಂದ 1878ರ ದಶಕದಲ್ಲಿ ಬ್ರಿಟಿಷರ ಆಡಳಿತದಲ್ಲಿದ್ದ ರಾಯಲಸೀಮೆ ಕಂಡಿದ್ದ ಭೀಕರ ಬರಗಾಲ ಮತ್ತು ಬ್ರಿಟಿಷ್ ಅಧಿಕಾರಿಗಳ ಶೋಷಣೆಯ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ.

