Dailyhunt Logo
  • Light mode
    Follow system
    Dark mode
    • Play Story
    • App Story
ರಣಬಾಲಿ ವೀಕ್ಷಿಸಿದ ಸಂದೀಪ್ ರೆಡ್ಡಿ ವಂಗಾ: ವಿಜಯ್ ದೇವರಕೊಂಡ ಬಗ್ಗೆ ಹೇಳಿದ್ದಿಷ್ಟು

ರಣಬಾಲಿ ವೀಕ್ಷಿಸಿದ ಸಂದೀಪ್ ರೆಡ್ಡಿ ವಂಗಾ: ವಿಜಯ್ ದೇವರಕೊಂಡ ಬಗ್ಗೆ ಹೇಳಿದ್ದಿಷ್ಟು

ಹೈದರಾಬಾದ್: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ರಣಬಾಲಿ' ಸಿನಿಮಾ ತೆರೆಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಈ ನಡುವೆ 'ಅರ್ಜುನ್ ರೆಡ್ಡಿ' ಮತ್ತು 'ಅನಿಮಲ್' ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು 'ರಣಬಾಲಿ' ಸಿನಿಮಾ ವೀಕ್ಷಿಸಿ, ವಿಜಯ್ ದೇವರಕೊಂಡ ಅವರ ಅಭಿನಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ವಂಗಾ, ವಿಜಯ್ ದೇವರಕೊಂಡ ಅವರನ್ನು 'ಭಾರತೀಯ ಚಿತ್ರರಂಗದ ಮುಂದಿನ ಆಕ್ಷ್ಯನ್ ಹೀರೊ' ಎಂದು ಬಣ್ಣಿಸಿದ್ದಾರೆ.

'ವಿಜಯ್, ನಿಮ್ಮ ಆಕ್ಷನ್ ದೃಶ್ಯಗಳಲ್ಲಿ ಅದ್ಭುತವಾಗಿ ನಟಿಸಿದ್ದೀರಿ. ನೀವು ಭಾರತೀಯ ಚಿತ್ರರಂಗದ ಮುಂದಿನ ಆಕ್ಷ್ಯನ್ ಐಕಾನ್ ಆಗಲಿದ್ದೀರಿ' ಎಂದು ವಂಗಾ ಬರೆದುಕೊಂಡಿದ್ದಾರೆ.

ಈ ಚಿತ್ರದಲ್ಲಿ ವಿಜಯ್ ಮತ್ತು ರಶ್ಮಿಕಾ ಜೋಡಿಯ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ. 'ಜಯಮ್ಮ' ಪಾತ್ರದಲ್ಲಿ ರಶ್ಮಿಕಾ ಜೀವಿಸಿದ್ದಾರೆ ಎಂದಿದ್ದಾರೆ.

ಮಾರಾಟ ಮಾಡಿದ್ದ ತನ್ನ ಕಾರನ್ನೇ GPS, 3ನೇ ಕೀ ಬಳಸಿ ಕಳವು ಮಾಡಿದ ಭೂಪ!ದಸರಾದಲ್ಲಿ ಬಲೂನ್ ಮಾರಲು ಬಂದಿದ್ದ ಬಾಲಕಿಯ ಅತ್ಯಾಚಾರ, ಕೊಲೆ; ಅಪರಾಧಿಗೆ ಮರಣದಂಡನೆ

ನಿರ್ದೇಶಕ ರಾಹುಲ್ ಸಂಕೃತ್ಯನ್ ಅವರ ಕಾರ್ಯವನ್ನು ಶ್ಲಾಘಿಸಿದ ವಂಗಾ, 'ಶಾಲಾ ಪಠ್ಯಪುಸ್ತಕಗಳಲ್ಲಿ ತೋರಿಸಲು ಹಿಂಜರಿದ ನಮ್ಮ ಇತಿಹಾಸದ ಒಂದು ಭಾಗವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ' ಎಂದು ಹೇಳಿದ್ದಾರೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಪ್ರತಿಕ್ರಿಯೆ

'ಸಂದೀಪ್ ವಂಗಾ ಅವರ ಶ್ಲಾಘನೆಗೆ ವಿಜಯ್ ದೇವರಕೊಂಡ ಹರ್ಷ ವ್ಯಕ್ತಪಡಿಸಿದ್ದಾರೆ. ಸಂದೀಪ್ ಅವರ ಸಂದೇಶ ನೋಡಿ ತುಂಬಾ ಸಂತೋಷವಾಯಿತು. 'ಅರ್ಜುನ್ ರೆಡ್ಡಿ' ಪ್ರೀಮಿಯರ್ ನಂತರ ಅವರು ನನ್ನನ್ನು ಅಪ್ಪಿಕೊಂಡಿದ್ದ ನೆನಪು ಮತ್ತೆ ಮರುಕಳಿಸಿತು. 10 ವರ್ಷಗಳ ನಂತರವೂ ಅವರ ಈ ಮಾತುಗಳು ನನಗೆ ಖುಷಿ ತಂದಿದೆ' ಎಂದು ಪ್ರತಿಕ್ರಿಯಿಸಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಸಹ ವಂಗಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಈ ಚಿತ್ರದಲ್ಲಿ 'ರಣಬಾಲಿ' (ವಿಜಯ್ ದೇವರಕೊಂಡ) ಬ್ರಿಟಿಷರ ವಿರುದ್ಧ ದಂಗೆ ಏಳುತ್ತಾನೆ.

ರಣಬಾಲಿ ಜೀವನಕ್ಕೆ ಬರುವ ಜಯಮ್ಮ (ರಶ್ಮಿಕಾ ಮಂದಣ್ಣ), ಜನರ ರಕ್ಷಣೆಗೆ ನಿಂತ ಪತಿಯ ಕಾರ್ಯಕ್ಕೆ ನೆರವಾಗುತ್ತಾಳೆ.

ರಾಹುಲ್ ಸಂಕೃತ್ಯನ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾಕ್ಕೆ, ಅಜಯ್-ಅತುಲ್' ಅವರ ಸಂಗೀತವಿದೆ. 'ಮೈತ್ರಿ ಮೂವಿ ಮೇಕರ್ಸ್' ಬ್ಯಾನರ್‌ನಡಿ ನವೀನ್ ಯೆರ್ನೇನಿ ಹಾಗೂ ವೈ.ರವಿಶಂಕರ್ ನಿರ್ಮಿಸಿದ್ದಾರೆ.

ಎಕಾನಮಿ 360: ಭರ್ಜರಿ ವ್ಯಾಪಾರದ ಹೊಳಪಿನಲ್ಲಿ ಮರೆಯಾದ ಶ್ರೀಸಾಮಾನ್ಯ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆಗೆ ಷರತ್ತುಬದ್ಧ ಜಾಮೀನು ಮಂಜೂರು
Dailyhunt
Disclaimer: This content has not been generated, created or edited by Dailyhunt. Publisher: Prajavani