ದೀಪಾವಳಿ ಹಬ್ಬದ ಸಂಭ್ರಮಕ್ಕೆ ಮನೆಯಲ್ಲಿಯೇ ಸುಲಭವಾಗಿ ಹಾಗೂ ರುಚಿಕರವಾಗಿ ಸೆವೆನ್ ಕಪ್ ಬರ್ಫಿ ತಯಾರಿಸಬಹುದು. ಕೇವಲ ಏಳು ಕಪ್ ಅಳತೆಯ ಸರಳ ಪದಾರ್ಥಗಳನ್ನು ಬಳಸಿ ಮಾಡುವ ಸಿಹಿ ಖಾದ್ಯವಾಗಿದೆ.
ವಿಡಿಯೊ | ಮೊಟ್ಟೆಯ ವಿಭಿನ್ನ ರೆಸಿಪಿ: ರುಚಿಯಾದ ಎಗ್ ಚಾಪ್ಸ್ ರೆಸಿಪಿ: ಬಾಯಲ್ಲಿ ನೀರೂರಿಸುವ ಹಲ್ವ ವೈವಿಧ್ಯಬೇಕಾಗುವ ಸಾಮಗ್ರಿ...
ಕಡಲೆ ಹಿಟ್ಟು: 1 ಕಪ್
ತುರಿದ ತೆಂಗಿನಕಾಯಿ: 1 ಕಪ್
ಸಕ್ಕರೆ: 3 ಕಪ್
ಹಾಲು: 1 ಕಪ್
ತುಪ್ಪ: 1 ಕಪ್
ಗೋಡಂಬಿ, ಬಾದಾಮಿ: ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ:
ಮೊದಲು ಒಂದು ಬಾಣಲೆಯಲ್ಲಿ ಕಡಲೆಹಿಟ್ಟನ್ನು ಹಾಕಿ ಸಣ್ಣ ಉರಿಯಲ್ಲಿ ಸುವಾಸನೆ ಬರುವವರೆಗೆ ಹುರಿದುಕೊಳ್ಳಿ. ನಂತರ ಇದಕ್ಕೆ ತುರಿದ ತೆಂಗಿನಕಾಯಿ, ಸಕ್ಕರೆ, ಹಾಲು ಹಾಗೂ ತುಪ್ಪವನ್ನು ಸೇರಿಸಿ ಗಂಟುಗಳಾಗದಂತೆ ಚೆನ್ನಾಗಿ ಬೆರೆಸಿ.
ಇನ್ನೊಂದೆಡೆ ಗೋಡಂಬಿ ಮತ್ತು ಬಾದಾಮಿಯನ್ನು ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ಪುಡಿಮಾಡಿಕೊಂಡು ಮಿಶ್ರಣಕ್ಕೆ ಸೇರಿಸಿ. ಬಳಿಕ ಮಧ್ಯಮ ಉರಿಯಲ್ಲಿ ಈ ಮಿಶ್ರಣವು ತಳ ಹಿಡಿಯದಂತೆ ಸತತವಾಗಿ ತಿರುಗಿಸುತ್ತಾ ಇರಿ.
ಮಿಶ್ರಣವು ಗಟ್ಟಿಯಾಗಿ ಬಾಣಲೆಯ ತಳ ಬಿಡಲು ಪ್ರಾರಂಭಿಸಿದಾಗ, ಮುಂಚಿತವಾಗಿಯೇ ತುಪ್ಪ ಸವರಿಟ್ಟ ತಟ್ಟೆಗೆ ಅದನ್ನು ಸುರಿಯಿರಿ. ಮಿಶ್ರಣವು ಸ್ವಲ್ಪ ಆರಿದ ನಂತರ ನಿಮಗಿಷ್ಟವಾದ ಆಕಾರಕ್ಕೆ ಚಾಕುವಿನಿಂದ ಗೆರೆ ಹಾಕಿ ಕತ್ತರಿಸಿ. ಸಂಪೂರ್ಣವಾಗಿ ತಣ್ಣಗಾದ ಬಳಿಕ ಬರ್ಫಿ ತುಂಡುಗಳನ್ನು ಬೇರ್ಪಡಿಸಿದರೆ ಸವಿಯಲು ರುಚಿಕರವಾದ ಸೆವೆನ್ ಕಪ್ ಬರ್ಫಿ ಸಿದ್ಧ.

