ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಈ ವಿಶೇಷ ಖಾದ್ಯ ಚಿರಪರಿಚಿತ. ಅದರಲ್ಲೂ ಶಿವರಾತ್ರಿಯ ಸಂದರ್ಭದಲ್ಲಿ ಗೃಹಿಣಿಯರು ಮನೆಗಳಲ್ಲಿ ಗುಗ್ಗರಿಯನ್ನು ತಯಾರಿಸುತ್ತಾರೆ. ಕಡಲೆ ಕಾಳುಗಳನ್ನು ಬೇಯಿಸಿ ಅದಕ್ಕೆ ಒಗ್ಗರಣೆ ನೀಡಿ ತಯಾರಿಸುವ ತಿಂಡಿಯಾಗಿದೆ. ಇದನ್ನು ಕಡಲೆಕಾಳು, ಹೆಸರುಕಾಳು ಅಥವಾ ಇತರೆ ಕಾಳುಗಳಿಂದ ಮಾಡಲಾಗುತ್ತದೆ.
ಕಡಲೆ ಕಾಳು ಅತ್ಯಂತ ಪ್ರಮುಖವಾದ ಪೌಷ್ಟಿಕ ಹಾಗೂ ಆರೋಗ್ಯಕರ ಬೇಳೆಕಾಳು. ಇದು ಪ್ರೋಟಿನ್, ನಾರಿನಾಂಶ, ಮತ್ತು ಕಬ್ಬಿಣದ ಸತ್ವವನ್ನು ಒಳಗೊಂಡಿದೆ. ಹೀಗಾಗಿ ಇದನ್ನು ಬೇರೆ ಬೇರೆ ಕಾಳುಗಳೊಂದಿಗೆ ಮಿಶ್ರಣ ಮಾಡಿ ತಯಾರಿಸಿದರೆ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಜೊತೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹೀಗೆ ಕಡಲೆಕಾಳಿನಿಂದ ತಯಾರಿಸುವ ಈ ವಿಶೇಷ ಖಾದ್ಯವನ್ನು ಸರಳವಾಗಿ ಮಾಡುವ ವಿಧಾನ ಇಲ್ಲಿದೆ.
Karnataka Rains: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈ ವಾರ ಮಳೆ ಮುನ್ಸೂಚನೆರೆಸಿಪಿ: ಮನೆಯಲ್ಲಿಯೇ ಹೀಗೆ ತಯಾರಿಸಿ ಗರಿಗರಿಯಾದ ಬದನೆಕಾಯಿ, ಬಿಟ್ರೂಟ್ ಚಿಪ್ಸ್ಗುಗ್ಗರಿ ಮಾಡಲು ಬೇಕಾಗಿರುವ ಸಾಮಾಗ್ರಿಗಳು
ಕಡಲೆಕಾಳು
ಎಣ್ಣೆ
ತೆಂಗಿನ ತುರಿ
ಈರುಳ್ಳಿ
ಹಸಿ ಮೆಣಸಿನಕಾಯಿ
ಕರಿಬೇವು
ಉಪ್ಪು
ಖಾರದ ಪುಡಿ
ಅರಿಸಿನ
ಮಾಡುವ ವಿಧಾನ
ಮೊದಲು ಕಡಲೆಕಾಳುಗಳನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಡಿ. ಮರುದಿನ ನೆನೆಸಿಟ್ಟ ಕಡಲೆಕಾಳಿನಲ್ಲಿರುವ ನೀರನ್ನು ಬಸೆಯಬೇಕು. ಬಳಿಕ ಕುಕ್ಕರಿನಲ್ಲಿ ನೀರಿನೊಂದಿಗೆ ಕಡಲೆಕಾಳನ್ನು ಹಾಕಿ 4 ವಿಶಲ್ ಕೂಗಿಸಬೇಕು. ಬಳಿಕ ಕಡಲೆಕಾಳು ಮೃದುವಾಗಿದೆಯಾ ಎಂದು ಪರಿಶೀಲಿಸಬೇಕು. ನಂತರ ಮತ್ತೊಂದು ಪಾತ್ರೆಯಲ್ಲಿ ಎಣ್ಣೆ, ಹಸಿ ಮೆಣಸಿನಕಾಯಿ, ಕತ್ತರಿಸಿಕೊಂಡ ಈರುಳ್ಳಿ, ಕರಿಬೇವು ಹಾಕಿ ಕೆಂಪು ಬಣ್ಣಕ್ಕೆ ತಿರುಗುವವರೆಗೂ ಹುರಿದುಕೊಳ್ಳಬೇಕು. ನಂತರ ಇದಕ್ಕೆ ಖಾರದ ಪುಡಿ, ಅರಿಸಿನ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಬಳಿಕ ಅದಕ್ಕೆ ಕಡಲೆಕಾಳನ್ನು ಹಾಕಿ ಮಿಶ್ರಣ ಮಾಡಿ ಕುದಿಸಬೇಕು. ಕೊನೆಯದಾಗಿ ಕಡಲೆಕಾಳಿನ ಮೇಲೆ ತೆಂಗಿನ ತುರಿ ಹಾಕಿದರೆ ಮುಗಿಯಿತು. ಕಡಲೆಕಾಳಿನ ಗುಗ್ಗರಿ ಸವಿಯಲು ಸಿದ್ಧ.

