ದೇಶದಾದ್ಯಂತ ಈರುಳ್ಳಿ ಬೆಲೆ ಏರಿಕೆಯಾಗಿದೆ. ಪರಿಣಾಮ ಸರ್ಕಾರವೇ ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟ ಮಾಡಲು ಮುಂದಾಗಿದೆ. ಭಾರತದ ರಾಜಕೀಯದಲ್ಲಿ ಈರುಳ್ಳಿಗೆ ವಿಶೇಷ ಸ್ಥಾನವಿದೆ. ಅದರ ಬೆಲೆ ಏರಿಕೆಯಾದಾಗ ಗ್ರಾಹಕರು, ಇಳಿಕೆಯಾದಾಗ ರೈತರು ಸರ್ಕಾರದ ವಿರುದ್ಧ ಅಸಮಾಧಾನ ತೋರ್ಪಡಿಸುತ್ತಾರೆ.
ಕೆಲವೊಮ್ಮೆ ಈರುಳ್ಳಿ ಬೆಲೆ ಚುನಾವಣಾ ವಿಷಯವೂ ಅಗಿದೆ.
₹ 35ಕ್ಕೆ ಈರುಳ್ಳಿ ಮಾರಾಟ ಮಾಡಲಿರುವ ಕೇಂದ್ರ ಸರ್ಕಾರ: ಕರ್ನಾಟಕದಲ್ಲಿ ಸಿಗುತ್ತಾ?ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಸರ್ಕಾರಗಳನ್ನು ನಡುಗಿಸಿದ್ದ ಈರುಳ್ಳಿ ಬೆಲೆ: ದೇಶದ ರಾಜಕೀಯದಲ್ಲಿ 'ಕೆಂಪು' ಪ್ರಭಾವ
ಒಂದು ಸಾಲಿನಲ್ಲಿಭಾರತೀಯ ರಾಜಕೀಯದಲ್ಲಿ ಈರುಳ್ಳಿ ಬೆಲೆ ಏರಿಕೆಯು ಸರ್ಕಾರಗಳ ಪತನ ಮತ್ತು ಚುನಾವಣಾ ಫಲಿತಾಂಶಗಳ ಮೇಲೆ ಹೇಗೆ ಭಾರಿ ಪ್ರಭಾವ ಬೀರುತ್ತದೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.
ಪ್ರಮುಖ ಪ್ರಶ್ನೋತ್ತರ
ಈರುಳ್ಳಿ ಬೆಲೆ ಏರಿಕೆ ಭಾರತದ ರಾಜಕೀಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಈರುಳ್ಳಿ ಬೆಲೆ ಏರಿಕೆಯಾದಾಗ ಗ್ರಾಹಕರು ಮತ್ತು ಇಳಿಕೆಯಾದಾಗ ರೈತರು ಅಸಮಾಧಾನಗೊಳ್ಳುತ್ತಾರೆ; ಇದು ಅನೇಕ ಬಾರಿ ಸರ್ಕಾರಗಳ ಜನಪ್ರಿಯತೆ ಮತ್ತು ಚುನಾವಣಾ ಫಲಿತಾಂಶದ ಮೇಲೆ ನಿರ್ಣಾಯಕ ಪರಿಣಾಮ ಬೀರಿದೆ.
1980ರ ಚುನಾವಣೆಯನ್ನು 'ಈರುಳ್ಳಿ ಚುನಾವಣೆ' ಎಂದು ಕರೆಯಲು ಕಾರಣವೇನು?
1980ರ ಸಾರ್ವತ್ರಿಕ ಚುನಾವಣೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರಮುಖ ವಿಷಯವಾಗಿತ್ತು. ಅಂದಿನ ಸಂಸತ್ತಿನ ಚರ್ಚೆಗಳಲ್ಲಿ ಈ ಚುನಾವಣೆಯನ್ನು 'ಈರುಳ್ಳಿ ಚುನಾವಣೆ' ಎಂದು ಉಲ್ಲೇಖಿಸಲಾಗಿತ್ತು.
1998ರ ದೆಹಲಿ ಚುನಾವಣೆಯಲ್ಲಿ ಈರುಳ್ಳಿ ಬೆಲೆಯ ಪಾತ್ರವೇನು?
ದೆಹಲಿಯಲ್ಲಿ ಈರುಳ್ಳಿ ಬೆಲೆ ಕೆ.ಜಿಗೆ ₹50-70 ತಲುಪಿದ್ದು ಬಿಜೆಪಿಯ ಸೋಲಿಗೆ ಒಂದು ಪ್ರಮುಖ ಕಾರಣವಾಯಿತು, ಇದರಿಂದಾಗಿ ಆಡಳಿತದಲ್ಲಿದ್ದ ಪಕ್ಷವು ಅಧಿಕಾರ ಕಳೆದುಕೊಂಡಿತು.
2013ರ ದೆಹಲಿ ಚುನಾವಣೆಯಲ್ಲಿ ಈರುಳ್ಳಿ ಪ್ರಭಾವವೇನಾಗಿತ್ತು?
ಈರುಳ್ಳಿ ಬೆಲೆ ಕೆ.ಜಿಗೆ ₹80-100ಕ್ಕೆ ಏರಿದಾಗ, ಶೀಲಾ ದೀಕ್ಷಿತ್ ಸರ್ಕಾರ ಬೆಲೆ ನಿಯಂತ್ರಣಕ್ಕೆ ವಿಫಲ ಯತ್ನಗಳನ್ನು ನಡೆಸಿತು. ಪರಿಣಾಮವಾಗಿ, ದೆಹಲಿಯಲ್ಲಿ 15 ವರ್ಷಗಳ ಆಡಳಿತ ನಡೆಸಿದ್ದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು.
ಸರ್ಕಾರಗಳು ಬೆಲೆ ಏರಿಕೆಯನ್ನು ನಿಯಂತ್ರಿಸಲು ಯಾವ ಕ್ರಮಗಳನ್ನು ಕೈಗೊಳ್ಳುತ್ತವೆ?
ಸರ್ಕಾರಗಳು ಬೆಲೆಗಳನ್ನು ನಿಯಂತ್ರಿಸಲು ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟ ಮಾಡುವುದು, ಮೊಬೈಲ್ ವ್ಯಾನ್‌ಗಳ ಮೂಲಕ ಪೂರೈಕೆ ಮಾಡುವುದು ಮತ್ತು ಆಮದು ಮಾಡಿಕೊಳ್ಳುವಂತಹ ತುರ್ತು ಕ್ರಮಗಳನ್ನು ಕೈಗೊಳ್ಳುತ್ತವೆ.
ಪ್ರಮುಖ ಅಂಕಿಅಂಶಗಳು
₹50-701998ರಲ್ಲಿ ದೆಹಲಿಯಲ್ಲಿನ ಈರುಳ್ಳಿ ದರ₹80-1002013ರ ದೆಹಲಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ₹55ಮೊಬೈಲ್ ವ್ಯಾನ್ ಮೂಲಕ ಮಾರಾಟದ ದರ19801980ರ ಚುನಾವಣೆ ವರ್ಷ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
1980: 'ಈರುಳ್ಳಿ ಚುನಾವಣೆ'
1977ರಲ್ಲಿ ಅಧಿಕಾರ ಕಳೆದುಕೊಂಡಿದ್ದ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್, 1980ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಮರಳಿತು. ಆ ಸಮಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರಮುಖ ಚುನಾವಣಾ ವಿಷಯವಾಗಿತ್ತು. ಈರುಳ್ಳಿ ಬೆಲೆಯೂ ರಾಜಕೀಯ ಚರ್ಚೆಯ ಕೇಂದ್ರವಾಗಿತ್ತು. ಆ ಕಾಲದ ರಾಜ್ಯಸಭಾ ಚರ್ಚೆಗಳಲ್ಲಿಯೂ 1980ರ ಚುನಾವಣೆಯನ್ನು 'ಈರುಳ್ಳಿ ಚುನಾವಣೆ' (Onion Election) ಎಂದು ಉಲ್ಲೇಖಿಸಿರುವ ದಾಖಲೆಗಳಿವೆ.
ಇಂದಿರಾ ಗಾಂಧಿಯವರ ಗೆಲುವಿಗೆ ಈರುಳ್ಳಿ ಬೆಲೆ ಒಂದೇ ಕಾರಣ ಅಲ್ಲ. ಜನತಾ ಪಕ್ಷದೊಳಗಿನ ರಾಜಕೀಯ ಭಿನ್ನಾಭಿಪ್ರಾಯ ಸೇರಿ ಹಲವು ಕಾರಣಗಳೂ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿದ್ದವು. ಆದರೂ, ಮೊದಲ ಬಾರಿಗೆ ಈರುಳ್ಳಿ ದೇಶದಲ್ಲಿ ಚುನಾವಣಾ ರಾಜಕೀಯದ ವಸ್ತುವಾಯಿತು.
ಮಳೆ ಕೊರತೆ: ₹50 ದಾಟಿದ ಕೆ.ಜಿ ಈರುಳ್ಳಿ ದರ1998: ದೆಹಲಿ ಚುನಾವಣೆ
ಈರುಳ್ಳಿ ಬೆಲೆ ಏರಿಕೆಯ ರಾಜಕೀಯ ಪರಿಣಾಮ ಅತ್ಯಂತ ಸ್ಪಷ್ಟವಾಗಿ ಕಾಣಿಸಿಕೊಂಡದ್ದು 1998ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ. ಆ ವರ್ಷದ ಅಕ್ಟೋಬರ್ ವೇಳೆಗೆ ದೆಹಲಿಯಲ್ಲಿ ಈರುಳ್ಳಿ ಬೆಲೆ ಸುಮಾರು ಕೆ.ಜಿಗೆ ₹50-70 ಆಗಿತ್ತು ಎಂದು ಸಮಕಾಲೀನ ವರದಿಗಳು ದಾಖಲಿಸಿವೆ. ಬೆಲೆ ಏರಿಕೆ ಚುನಾವಣೆಯ ಪ್ರಮುಖ ವಿಷಯವಾಗಿತ್ತು. ಸರ್ಕಾರ ಈರುಳ್ಳಿ ಆಮದು ಮಾಡುವ ಪ್ರಯತ್ನ ನಡೆಸಿತು.
ಆ ಸಮಯದಲ್ಲಿ ದೆಹಲಿಯಲ್ಲಿ ಬಿಜೆಪಿ ಸರ್ಕಾರವಿತ್ತು. ಸಾಹಿಬ್ ಸಿಂಗ್ ವರ್ಮಾ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಸುಷ್ಮಾ ಸ್ವರಾಜ್ ಮುಖ್ಯಮಂತ್ರಿಯಾದರು. ಬಳಿಕ ನಡೆದ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಯಿತು. ಕಾಂಗ್ರೆಸ್ ಮತ್ತೆ ಅಧಿಕಾರ ಪಡೆದುಕೊಂಡಿತು.
ಈರುಳ್ಳಿ ಬೆಲೆ ಏರಿಕೆ ಚುನಾವಣೆಯ ಪ್ರಮುಖ ವಿಷಯಗಳಲ್ಲಿ ಒಂದಾಗಿತ್ತು. ಬಿಜೆಪಿಯ ಸೋಲಿಗೆ ಕಾರಣಗಳು ಹಲವು ಇದ್ದರೂ, ಈರುಳ್ಳಿ ಬೆಲೆ ಏರಿಕೆ ಚುನಾವಣೆ ಪ್ರಚಾರದ ಪ್ರಮುಖ ವಿಷಯವಾಗಿತ್ತು.
ನಂತರದ ರಾಜ್ಯಸಭಾ ಚರ್ಚೆಯೊಂದರಲ್ಲಿ ಸಷ್ಮಾ ಸ್ವರಾಜ್ ಅವರು 1980 ಮತ್ತು 1998ರಲ್ಲಿ ಈರುಳ್ಳಿ ಬೆಲೆ ಏರಿಕೆ ಸರ್ಕಾರಗಳಿಗೆ ರಾಜಕೀಯವಾಗಿ ಹಾನಿ ಮಾಡಿತ್ತು ಎಂದು ಉಲ್ಲೇಖಿಸಿದ್ದರು.
2013: ಮತ್ತೆ ದೆಹಲಿ ಚುನಾವಣೆಯಲ್ಲಿ ಈರುಳ್ಳಿ ಸದ್ದು
2013ರಲ್ಲಿ ದೆಹಲಿಯಲ್ಲಿ ಈರುಳ್ಳಿ ಬೆಲೆ ಮತ್ತೆ ಚುನಾವಣಾ ವಿಷಯವಾಯಿತು. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಕೆ.ಜಿ.ಗೆ ₹80-100ಕ್ಕೇ ಏರಿತ್ತು. ಆಗ ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸರ್ಕಾರ ಬೆಲೆ ನಿಯಂತ್ರಿಸಲು ವಿವಿಧ ಕ್ರಮಗಳನ್ನು ಕೈಗೊಂಡಿತು. ಚುನಾವಣಾ ಆಯೋಗದಿಂದ ಅನುಮತಿ ಪಡೆದು ಸರ್ಕಾರ 125 ಮೊಬೈಲ್ ವ್ಯಾನ್‌ಗಳ ಮೂಲಕ ಕೆ.ಜಿಗೆ ₹55 ರಲ್ಲಿ ಈರುಳ್ಳಿ ಮಾರಾಟ ಮಾಡುವುದಾಗಿ ಘೋಷಿಸಿತು.
1998ರಲ್ಲಿ ಈರುಳ್ಳಿ ಬೆಲೆ ಏರಿಕೆಯ ಚರ್ಚೆಯ ನಡುವೆ ಬಿಜೆಪಿಯನ್ನು ಸೋಲಿಸಿ ಅವರು ಅಧಿಕಾರಕ್ಕೆ ಬಂದಿದ್ದ ಶೀಲಾ ದೀಕ್ಷಿತ್ ಅವರಿಗೆ ಆ ಚುನಾವಣೆ ಸವಾಲಿನದ್ದಾಗಿತ್ತು. ಆದರೆ 2013ರ ದೆಹಲಿ ಚುನಾವಣೆಯಲ್ಲಿ ಶೀಲಾ ದೀಕ್ಷಿತ್ ಸರ್ಕಾರ ಪತನಗೊಂಡಿತು. 15 ವರ್ಷಗಳ ಆಡಳಿತ ಕೊನೆಗೊಂಡಿತು.
ಆಧಾರ: ರಾಜ್ಯಸಭೆ, ಭಾರತೀಯ ಚುನಾವಣಾ ಆಯೋಗ, ಭಾರತೀಯ ಸಂಸತ್ತು ಹಾಗೂ ವಿವಿಧ ಮಾಧ್ಯಮ ವರದಿಗಳಿಂದ
ಕ್ಯಾರೆಟ್, ಈರುಳ್ಳಿ ಬೆಳೆ ನಿರ್ವಹಣೆಗೆ ತೋಟಗಾರಿಕೆ ಕಾಲೇಜಿನ ಸಲಹೆ
