ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್ ಕಾರ್ಯಕ್ರಮದ ವೇಳೆ ಗುಂಡಿನ ದಾಳಿ ನಡೆದಿದೆ. ಈ ಸಂಬಂಧ ದಾಳಿಕೋರನ ಚಿತ್ರ ಹಾಗೂ ವಿಡಿಯೊವನ್ನು ಟ್ರಂಪ್ ಹಂಚಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮ ಟ್ರುಥ್‌ನಲ್ಲಿ ಟ್ರಂಪ್ ಹಂಚಿರುವ ಚಿತ್ರದಲ್ಲಿ, ಬಂಧಿತ ಆರೋಪಿಗೆ ಕೈಕೋಳ ತೊಡಿಸಲಾಗಿದೆ.
ಹತ್ತಿರದಲ್ಲಿಯೇ ಭದ್ರತಾ ಸಿಬ್ಬಂದಿ ಇದ್ದಾರೆ.
ಈ ದಾಳಿಗೆ ಸಂಬಂಧಿಸಿದ ಸಿಸಿಟಿವಿ ವಿಡಿಯೊವನ್ನು ಟ್ರಂಪ್ ಹಂಚಿದ್ದಾರೆ.
ಶಂಕಿತ ಶೂಟರ್ ಕ್ಯಾಲಿಫೋರ್ನಿಯಾದ 30 ವರ್ಷದ ವ್ಯಕ್ತಿ ಎಂದು ತಿಳಿದು ಬಂದಿದೆ. ಕೃತ್ಯದ ಹಿಂದಿನ ಉದ್ದೇಶದ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ.
ವಾಷಿಂಗ್ಟನ್ ಹಿಲ್ಟನ್‌ನಿಂದ ಸುರಕ್ಷಿತವಾಗಿ ಹೊರಬಂದ ನಂತರ ಪ್ರತಿಕ್ರಿಯಿಸಿದ ಟ್ರಂಪ್, ನಾನು ಸುರಕ್ಷಿತವಾಗಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
ಕಾನೂನು ಜಾರಿ ಇಲಾಖೆಯು ಶಿಷ್ಟಾಚಾರದ ಅನುಸಾರವಾಗಿ ಆವರಣದಿಂದ ಹೊರಹೋಗುವಂತೆ ನನ್ನನ್ನು ವಿನಂತಿಸಿದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಮುಂದಿನ ಒಂದು ತಿಂಗಳಲ್ಲಿ ಕಾರ್ಯಕ್ರಮ ಮರು ನಿಗದಿಪಡಿಸುತ್ತೇವೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಸಿಕ್ರೇಟ್ ಸರ್ವಿಸ್ ಏಜೆಂಟ್‌ಗಳ ಕಾರ್ಯವೈಖರಿಯನ್ನು ಟ್ರಂಪ್ ಶ್ಲಾಘಿಸಿದ್ದಾರೆ.

