Dailyhunt Logo
  • Light mode
    Follow system
    Dark mode
    • Play Story
    • App Story
ಶ್ವೇತಭವನದ ಸಮೀಪ ಗುಂಡಿನ ಚಕಮಕಿ: ಬಂದೂಕುಧಾರಿಯ ಹತ್ಯೆ

ಶ್ವೇತಭವನದ ಸಮೀಪ ಗುಂಡಿನ ಚಕಮಕಿ: ಬಂದೂಕುಧಾರಿಯ ಹತ್ಯೆ

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಶ್ವೇತಭವನದ ಸಮೀಪ ಗುಂಡಿನ ಚಕಮಕಿ: ಬಂದೂಕುಧಾರಿಯ ಹತ್ಯೆ

ಒಂದು ಸಾಲಿನಲ್ಲಿಶ್ವೇತಭವನದ ಸಮೀಪ ಗುಂಡು ಹಾರಿಸಿದ ಬಂದೂಕುಧಾರಿಯನ್ನು ಅಮೆರಿಕದ ಸೀಕ್ರೆಟ್ ಏಜೆಂಟ್‌ಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಪ್ರಮುಖ ಸಂಗತಿಗಳು• ಗುಂಡಿನ ಚಕಮಕಿಶ್ವೇತಭವನದ ಸಮೀಪವಿರುವ ಪೆನ್ಸಿಲ್ವೇನಿಯಾ ಅವೆನ್ಯೂ ಪ್ರದೇಶದಲ್ಲಿ ಶನಿವಾರ ಸಂಜೆ 6 ಗಂಟೆಗೆ ಈ ಗುಂಡಿನ ಚಕಮಕಿ ಸಂಭವಿಸಿದೆ.ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ವಾಷಿಂಗ್ಟನ್‌: ಶ್ವೇತಭವನದ ಸಮೀಪ ಗುಂಡು ಹಾರಿಸಿದ ಬಂದೂಕುಧಾರಿಯನ್ನು ಅಮೆರಿಕದ ಸೀಕ್ರೆಟ್ ಏಜೆಂಟ್‌ಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಈ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿದ್ದರು. ಆದರೆ ಈ ಘಟನೆಯಿಂದ ಅವರ ದೈನಂದಿನ ಕೆಲಸಗಳಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ಸೀಕ್ರೆಟ್ ಸರ್ವೀಸ್ ಸಂವಹನ ಮುಖ್ಯಸ್ಥ ಅಂಥೋನಿ ಗುಗ್ಲಿಯೆಲ್ಮಿ ತಿಳಿಸಿದ್ದಾರೆ.

ಶನಿವಾರ ಸಂಜೆ ಘಟನೆ ನಡೆದಿದೆ.

ಈ ಕುರಿತು ಮಾಹಿತಿ ನೀಡಿರುವ ಅಮೆರಿಕದ ಸೀಕ್ರೆಟ್ ಸರ್ವೀಸ್, 'ಪೆನ್ಸಿಲ್ವೇನಿಯಾ ಅವೆನ್ಯೂ ಪ್ರದೇಶದಲ್ಲಿ ಶನಿವಾರ ಸಂಜೆ 6ಗಂಟೆಗೆ ಒಬ್ಬ ವ್ಯಕ್ತಿ ಬ್ಯಾಗ್‌ನಿಂದ ಬಂದೂಕು ತೆಗೆದು ಗುಂಡು ಹಾರಿಯಲು ಪ್ರಾರಂಭಿಸಿದನು'.

'ತಕ್ಷಣವೇ ಸೀಕ್ರೆಟ್ ಸರ್ವಿಸ್ ಪೊಲೀಸರು ಪ್ರತಿ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆಯಿತು. ಶಂಕಿತ ಬಂದೂಕುಧಾರಿಯನ್ನು ಆಸ್ಪತ್ರೆ ಸಾಗಿಸಿದರೂ ಅಲ್ಲಿ ಮೃತಪಟ್ಟಿರುವುದಾಗಿ ದೃಢೀಕರಿಸಲಾಯಿತು. ಓರ್ವ ವ್ಯಕ್ತಿಗೆ ಗುಂಡು ತಗುಲಿದೆ' ಎಂದು ತಿಳಿಸಿದೆ.

'ಭದ್ರತಾ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ. ಈ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷರು ಶ್ವೇತಭವನದಲ್ಲಿದ್ದರು. ಆದರೆ ಅವರ ಕಾರ್ಯ ನಿರ್ವಹಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ' ಎಂದು ತಿಳಿಸಿದೆ.

'ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿ ಬಿಡುಗಡೆ ಮಾಡಲಾಗುವುದು' ಎಂದು ಹೇಳಿದೆ.

'ಪ್ರತ್ಯಕ್ಷದರ್ಶಿ, ಕೆನಡಾ ಮೂಲದ ಪ್ರವಾಸಿಯ ಪ್ರಕಾರ, ಪಟಾಕಿಯ ಸದ್ದಿನ ರೀತಿಯಲ್ಲಿ ಸುಮಾರು 20ರಿಂದ 25 ಬಾರಿ ಶಬ್ದ ಕೇಳಿಸಿತು. ಬಳಿಕ ಭಯಚಕಿತರಾಗಿ ಎಲ್ಲರೂ ಓಡಲು ಆರಂಭಿಸಿದರು' ಎಂದು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani