Dailyhunt Logo
  • Light mode
    Follow system
    Dark mode
    • Play Story
    • App Story
ಸೂಪರ್ ಸ್ಟಾರ್ ರಜನಿಕಾಂತ್ ಮುಂದಿನ ಸಿನಿಮಾದಲ್ಲಿ ಶ್ರೀಲೀಲಾ..?

ಸೂಪರ್ ಸ್ಟಾರ್ ರಜನಿಕಾಂತ್ ಮುಂದಿನ ಸಿನಿಮಾದಲ್ಲಿ ಶ್ರೀಲೀಲಾ..?

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯಲ್ಲಿ ಮೂಡಿಬರಲಿರುವ ಧರ್ಮನ್ - ದಿ ಡೆಡ್ಲಿ ಡಾಕ್ಟರ್ ಚಿತ್ರದ ಪಾತ್ರವೊಂದರಲ್ಲಿ ನಟಿ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ.

ರಾಜಕೀಯ,ಸಿನಿಮಾ ರಂಗದ ದಿಗ್ಗಜರೊಂದಿಗೆ ವರನಟ ಡಾ.ರಾಜ್: ಇಲ್ಲಿವೆ ಅಪರೂಪದ ಚಿತ್ರಗಳುಮಹಾಂತೇಶ ಮಸ್ಕಿಗೆ ಡಾ. ಎಚ್.ಎನ್. ರಾಜ್ಯ ಪ್ರಶಸ್ತಿPHOTOS: ನಟ ರಜನಿಕಾಂತ್ ಬೆಂಗಳೂರು ರೌಂಡ್ಸ್Video | ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅವರಿಂದ ಆಶೀರ್ವಾದ ಪಡೆದ ರಜನಿಕಾಂತ್ರಜನಿಕಾಂತ್‌ ಭಾರತದ ಶೇಷ್ಠ ನಟರಲ್ಲಿ ಒಬ್ಬರು: ಜಾರ್ಖಂಡ್‌ ರಾಜ್ಯಪಾಲ

ಕನ್ನಡ ಭಾಷೆಯಲ್ಲಿ ತೆರೆಕಂಡಿದ್ದ ಕಿಸ್ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಶ್ರೀಲೀಲಾ, ಪ್ರಸ್ತುತ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.

ಧರ್ಮನ್ - ದಿ ಡೆಡ್ಲಿ ಡಾಕ್ಟರ್ ಸಿನಿಮಾವು ರಜನಿಕಾಂತ್ ಅಭಿನಯದ 173ನೇ ಚಿತ್ರವಾಗಿದೆ. ವಿಶೇಷವೆಂದರೆ, ಈ ಚಿತ್ರವನ್ನು ನಟ ಕಮಲ್ ಹಾಸನ್ ಅವರ 'ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್' ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ.

ಈಗಾಗಲೇ ನಿರ್ಮಾಣ ಹಂತದಲ್ಲಿರುವ ಈ ಸಿನಿಮಾ ಅಶ್ವತ್ ಮಾರಿಮುತ್ತು ನಿರ್ದೇಶನದಲ್ಲಿ ಮೂಡಿಬಂದಿದೆ. ಸಿನಿಮಾದ ಪಾತ್ರವೊಂದರಲ್ಲಿ ಶ್ರೀಲೀಲಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ನಿರ್ದೇಶಕರು ಈಗಾಗಲೇ ನಟಿಯೊಂದಿಗೆ ಚರ್ಚಿಸಿದ್ದಾರೆ. ಆದರೆ ಚಿತ್ರತಂಡ ಅಥವಾ ನಟಿ ಈವರೆಗೆ ಅಧಿಕೃತವಾಗಿ ಖಚಿತಪಡಿಸಿಲ್ಲ.

'ಧರ್ಮಮೇ ವೆಲ್ಲುಂ' (ನ್ಯಾಯವೇ ಗೆಲ್ಲುತ್ತದೆ) ಎಂಬ ಅಡಿಬರಹ ಚಿತ್ರಕ್ಕಿದೆ. 'ಇದು ಸಂಪೂರ್ಣ ಮನರಂಜನಾತ್ಮಕ ಚಿತ್ರವಾಗಿದ್ದು, ಪ್ರೇಕ್ಷಕರನ್ನು ಹಿಡಿದಿಡುವ ರೋಚಕ ದೃಶ್ಯಗಳಿಂದ ಕೂಡಿರಲಿದೆ. ರಜನಿಕಾಂತ್ ವೈದ್ಯರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಮುಖ ಪಾತ್ರದಲ್ಲಿ ಸಿಮ್ರನ್ ಹಾಗೂ ರಾಶಿ ಖನ್ನಾ ನಟಿಸುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani