Dailyhunt Logo
  • Light mode
    Follow system
    Dark mode
    • Play Story
    • App Story
ಟಾಕ್ಸಿಕ್‌ನಲ್ಲಿ ಯಶ್‌ 'ರಾಯ': ರಾಧಿಕಾ ಪಂಡಿತ್‌ ಹೆಸರಿನೊಂದಿಗೆ ಇದ್ಯಾ ನಂಟು?

ಟಾಕ್ಸಿಕ್‌ನಲ್ಲಿ ಯಶ್‌ 'ರಾಯ': ರಾಧಿಕಾ ಪಂಡಿತ್‌ ಹೆಸರಿನೊಂದಿಗೆ ಇದ್ಯಾ ನಂಟು?

ನ್ನಡ ಚಿತ್ರರಂಗದ ಜನಪ್ರಿಯ ನಟ ಯಶ್‌ ಅವರು ಇಂದು (ಜನವರಿ 8) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅಭಿಮಾನಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಅವರ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸದ್ಯ ಈ ವಿಡಿಯೊ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ನಟ ಯಶ್‌ 40ನೇ ಹುಟ್ಟುಹಬ್ಬದ ಪ್ರಯುಕ್ತ ಬಹುನಿರೀಕ್ಷಿತ 'ಟಾಕ್ಸಿಕ್‌' ಸಿನಿಮಾದಲ್ಲಿ ಅವರ ಪಾತ್ರವನ್ನು ಬಹಿರಂಗಪಡಿಸಲಾಗಿದೆ. ರಾಯಲ್‌ ಲುಕ್‌, ಬೋಲ್ಡ್‌ ದೃಶ್ಯಗಳು, ಮಾಸ್‌ ಡೈಲಾಗ್ ಮೂಲಕ ಯಶ್‌ 'ರಾಯ'ನಾಗಿ ಎಂಟ್ರಿ ಕೊಟ್ಟಿದ್ದಾರೆ.

ನಟ ಯಶ್‌

ಎಲ್ಲದಕ್ಕೂ ಗಂಡನನ್ನು ಏಕೆ ಕರೀತೀರಿ? ಯಶ್‌ ಬಗ್ಗೆ ಪತ್ನಿ ರಾಧಿಕಾ ಪಂಡಿತ್ ಗುಣಗಾನಹೊಸ ಹೆಜ್ಜೆ, ಅದೃಷ್ಟ ನೀಡಲಿ: ಯಶ್ ಹುಟ್ಟುಹಬ್ಬಕ್ಕೆ ಸುದೀಪ್ ಸೇರಿ ನಟರಿಂದ ಹಾರೈಕೆ

ನಟ ಯಶ್‌ ಅವರ ಪಾತ್ರದ ಹೆಸರು ರಿವೀಲ್‌ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಟಾಕ್ಸಿಕ್‌ ಸಿನಿಮಾದಲ್ಲಿನ ಯಶ್‌ ಪಾತ್ರದ 'ರಾಯ' ಹೆಸರಿಗೂ, ರಾಧಿಕಾ ಪಂಡಿತ್‌ ಅವರಿಗೂ ನಂಟು ಇರಬಹುದು ಎಂದು ಊಹಿಸುತ್ತಿದ್ದಾರೆ.

ರಾ ಎಂದರೆ ರಾಧಿಕಾ, ಯ ಎಂದರೆ ಯಶ್‌ ಎಂದು ನೆಟ್ಟಿಗರು ಹೋಲಿಕೆ ಮಾಡುತ್ತಿದ್ದಾರೆ. ಇನ್ನೊಂದು ರೀತಿಯಲ್ಲಿ ರಾ ಎಂದರೆ ರಾಕಿಂಗ್‌ ಸ್ಟಾರ್‌ ಯ ಎಂದರೆ ಯಶ್‌ ಎಂದೂ ಹೋಲಿಸುತ್ತಿದ್ದಾರೆ.

ಹೀಗಾಗಿ ಟಾಕ್ಸಿಕ್‌ ಚಿತ್ರಕ್ಕೂ ರಾಧಿಕಾ ಪಂಡಿತ್‌ ಹೆಸರಿನೊಂದಿಗೆ ನಂಟು ಇದೆಯಾ ಎಂದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ. ಸದ್ಯ ಇದೇ ಮೊದಲ ಬಾರಿಗೆ 'ರಾಯ' ಹೆಸರಿನ ಮೂಲಕ ಸದ್ದು ಮಾಡೋದಕ್ಕೆ ನಟ ಯಶ್‌ ಸಜ್ಜಾಗಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani