ಮುಂಬೈ: ಇತ್ತೀಚೆಗೆ ಒಮಾನ್ ಕರಾವಳಿಯಲ್ಲಿ ತೈಲ ಹಡಗುಗಳ ಮೇಲೆ ಅಮೆರಿಕದ ಸೇನಾ ಪಡೆಗಳು ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದಾರೆ. ಘಟನೆಯನ್ನು ಖಂಡಿಸಿದ ಇರಾನ್‌ನ ಸರ್ವೋಚ್ಚ ನಾಯಕನ ಉಪ ಪ್ರತಿನಿಧಿ ಮೊಹಮ್ಮದ್ ಹುಸೇನ್ ಜಿಯಾಯ್ ನಿಯಾ, ಮುಗ್ಧ ಜನರ ಹತ್ಯೆಯನ್ನು ಎಂದಿಗೂ ಒಪ್ಪಲಾಗದು ಎಂದು ಹೇಳಿದ್ದಾರೆ.
ಪರಿಸ್ಥಿತಿ ನೋಡುತ್ತಿದ್ದರೆ, ಇರಾನ್ ಮೇಲೆ ದಾಳಿ ಮಾಡಿದವರಿಗೆ ಶಾಂತಿ ಇಷ್ಟವಿಲ್ಲದಂತಿದೆ. ಈ ಯುದ್ಧದಿಂದ ಈ ಬಾರಿಯಾದರೂ ಅವರು ತಕ್ಕ ಪಾಠ ಕಲಿಯುತ್ತಾರೆ ಎಂದು ನಾನು ನಂಬುತ್ತೇನೆ. ಫೆ.28ಕ್ಕೂ ಮುನ್ನ ಈ ಪ್ರದೇಶದಲ್ಲಿ ಶಾಂತಿ ನೆಲೆಸಿತ್ತು. ಹೊರ್ಮುಜ್ ಜಲಸಂಧಿಯಲ್ಲಿ ಯುದ್ಧದ ವಾತಾವರಣ ಇರಲಿಲ್ಲ. ಸದ್ಯದಲ್ಲಿಯೇ ಯಥಾಸ್ಥಿತಿಗೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಮಾನ್ ಕರಾವಳಿಯಲ್ಲಿ ಇತ್ತೀಚೆಗೆ ಭಾರತೀಯ ಸಿಬ್ಬಂದಿ ಇದ್ದ ಮೂರು ವಾಣಿಜ್ಯ ಹಡಗುಗಳ ಮೇಲೆ ಅಮೆರಿಕ ನೌಕಾಪಡೆಗಳು ದಾಳಿ ನಡೆಸಿದ್ದು, ಇದರಿಂದ ಮೂವರು ಭಾರತೀಯರು ಮೃತಪಟ್ಟಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಮೆರಿಕದ ಎದುರು ತೀವ್ರ ಪ್ರತಿಭಟನೆ ದಾಖಲಿಸಿತ್ತು.
ಮೂವರು ಭಾರತೀಯರ ಸಾವು: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜತೆ ಜೈಶಂಕರ್ ಮಾತುಕತೆಸರಣಿ ದಾಳಿ:
ಪಲಾವು ದೇಶದ ಧ್ವಜ ಹೊತ್ತಿದ್ದ, 24 ಮಂದಿ ಭಾರತೀಯ ಸಿಬ್ಬಂದಿಯನ್ನು ಒಳಗೊಂಡಿದ್ದ 'ಮರಿವೆಕ್ಸ್' ಹಡಗಿನ ಮೇಲೆ ಜೂನ್ 8ರಂದು ಅಮೆರಿಕ ಪಡೆಗಳು ದಾಳಿ ನಡೆಸಿದ್ದವು. ಈ ವೇಳೆ ಎಲ್ಲಾ ಸಿಬ್ಬಂದಿಯನ್ನು ರಕ್ಷಿಸಲಾಗಿತ್ತು.
ಜೂನ್ 10ರಂದು ಪಲಾವು ಧ್ವಜವಿದ್ದ 'ಸೆಟ್ಟಿಬೆಲ್ಲೊ' ಹೆಸರಿನ ಮತ್ತೊಂದು ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿದ್ದು, ಹಡಗಿನಲ್ಲಿದ್ದ 24 ಮಂದಿ ಭಾರತೀಯ ಸಿಬ್ಬಂದಿಯ ಪೈಕಿ ಮೂವರು ಮೃತಪಟ್ಟಿದ್ದಾರೆ.
ಗಿನಿ-ಬಿಸ್ಸಾವ್ ದೇಶದ ಧ್ವಜವನ್ನು ಹೊತ್ತಿದ್ದ 'ಜಲವೀರ್' ಎಂಬ ಹಡಗಿನ ಮೇಲೂ ಗುರುವಾರ (ಜೂನ್ 11) ದಾಳಿ ನಡೆದಿದೆ.
ತಿರುಗೇಟು ನೀಡಿದ್ದ ಅಮೆರಿಕ
ನಿರ್ಬಂಧದ ಹೊರತಾಗಿಯೂ ಇರಾನ್‌ನ ಕಚ್ಚಾತೈಲವನ್ನು ಅಕ್ರಮವಾಗಿ ಹೊರ್ಮುಜ್ ಜಲಸಂಧಿಯ ಮೂಲಕ ಸಾಗಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ತಿಳಿಸಿದ್ದರು.
ಭಾರತದ ಹಡಗುಗಳ ಮೇಲೆ ಡ್ರೋನ್ ದಾಳಿ ನಡೆಸಲು ಯತ್ನಿಸಿದ ಇರಾನ್: ಟ್ರಂಪ್ ಆರೋಪ
