ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಟೀಸರ್ ನಿನ್ನೆ (ಫೆ.20) ಬಿಡುಗಡೆಯಾಗಿದೆ. 'ಕೆವಿಎನ್ ಪ್ರೊಡಕ್ಷನ್' ಯೂಟ್ಯೂಬ್ ಚಾನೆಲ್‌ನಲ್ಲಿ 1 ನಿಮಿಷ 55 ಸೆಕೆಂಡಿನ ಟೀಸರ್‌ಗೆ ದಾಖಲೆಯ ವೀಕ್ಷಣೆ ಬಂದಿದೆ. ಅದರಲ್ಲೂ ಬಿಡುಗಡೆಯಾದ ಒಂದೇ ದಿನದಲ್ಲಿ ಟಾಕ್ಸಿಕ್ ಟೀಸರ್ ಹಿಂದಿ ಭಾಷೆಯಲ್ಲಿ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.
ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಟೀಸರ್ ಬಿಡುಗಡೆಯಾಗಿದೆ. ಅದರಲ್ಲಿ ಕನ್ನಡ ಅಲ್ಲದೇ ಹಿಂದೆ ಭಾಷೆಯಲ್ಲಿ ಟೀಸರ್ ಅತಿ ಹೆಚ್ಚು ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿದೆ. ಈಗ ಕನ್ನಡದಲ್ಲಿ 74 ಲಕ್ಷ, ಹಿಂದಿಯಲ್ಲಿ 2.2 ಕೋಟಿ, ತೆಲುಗಿನಲ್ಲಿ 11 ಲಕ್ಷ, ತಮಿಳಿನಲ್ಲಿ 54 ಲಕ್ಷ, ಮಲಯಾಳಂದಲ್ಲಿ 27 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಅಚ್ಚರಿ ಎಂದರೆ ಹಿಂದಿಯಲ್ಲಿ ಟಾಕ್ಸಿಕ್ ಟೀಸರ್ ದಾಖಲೆಯ ವೀಕ್ಷಣೆ ಪಡೆದುಕೊಂಡಿದೆ. ಈಗಾಗಲೇ ಟಾಕ್ಸಿಕ್ ಸಿನಿಮಾ ಬಿಡುಗಡೆ ದಿನವೇ ಬಾಲಿವುಡ್ ನಟ ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ತೆರೆಗೆ ಬರುತ್ತಿದೆ. ಹೀಗಾಗಿ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.

