Dailyhunt Logo
  • Light mode
    Follow system
    Dark mode
    • Play Story
    • App Story
ಟ್ರಂಪ್ ಗಾಲ್ಫ್ ಕೋರ್ಸ್ ಹೊರಭಾಗದಲ್ಲಿ ಬಂದೂಕುಧಾರಿ ವ್ಯಕ್ತಿ ಬಂಧನ

ಟ್ರಂಪ್ ಗಾಲ್ಫ್ ಕೋರ್ಸ್ ಹೊರಭಾಗದಲ್ಲಿ ಬಂದೂಕುಧಾರಿ ವ್ಯಕ್ತಿ ಬಂಧನ

ಕ್ಯಾಲಿಫೋರ್ನಿಯಾ: ದಕ್ಷಿಣ ಕ್ಯಾಲಿಫೋರ್ನಿಯಾದ ಟ್ರಂಪ್ ಗಾಲ್ಫ್ ಕೋರ್ಸ್ ಹೊರಭಾಗದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬಂಧೂಕುಧಾರಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಡೌನಿಯ ನಿವಾಸಿ 38 ವರ್ಷದ ಜೆನಿನ್ ಜಾನ್ ತೇಲೆ ಎಂದು ಗುರುತಿಸಲಾಗಿದೆ.

ಈತ ಸುಧಾರಿತ ಶಸ್ತ್ರಾಸ್ತ್ರ ಹೊಂದಿದ್ದ ಎಂದು 'ಸಿಎನ್‌ಎನ್‌' ವರದಿ ಮಾಡಿದೆ.

ಶಂಕಿತ ವ್ಯಕ್ತಿ ರಾಂಚೊ ಪಾಲೋಸ್ ವರ್ಡೆಸ್‌ನಲ್ಲಿರುವ 'ಟ್ರಂಪ್ ನ್ಯಾಷನಲ್ ಗಾಲ್ಫ್ ಕ್ಲಬ್' ಆವರಣದಲ್ಲಿ ಫೋಟೊ ಹಾಗೂ ವಿಡಿಯೊಗಳನ್ನು ಚಿತ್ರೀಕರಿಸುತ್ತಾ, ಭದ್ರತಾ ಸಿಬ್ಬಂದಿಯ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಿದ್ದ ಎನ್ನಲಾಗಿದೆ.

ಫೆಡರಲ್ ಅಧಿಕಾರಿಗಳ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಲಾಸ್ ಏಂಜಲೀಸ್ ಕೌಂಟಿ ಷೆರಿಫ್ ಇಲಾಖೆಯ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಟ್ರಂಪ್ ಪ್ರವಾಸದ ಸಂದರ್ಭದಲ್ಲೇ ಘಟನೆ

ರಿಪಬ್ಲಿಕನ್ ನ್ಯಾಷನಲ್ ಕಮಿಟಿ ಆಯೋಜಿಸಿದ್ದ ಭೋಜನಕೂಟದಲ್ಲಿ ಪಾಲ್ಗೊಳ್ಳಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏರ್ ಫೋರ್ಸ್ ಒನ್ ವಿಮಾನದಲ್ಲಿ ಕ್ಯಾಲಿಫೋರ್ನಿಯಾಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲೇ ಈ ಬಂಧನ ನಡೆದಿದೆ.

ಆದರೆ, ಅಮೆರಿಕದ ಅಧ್ಯಕ್ಷರ ಮೇಲೆ ನೇರ ದಾಳಿ ನಡೆಸಲು ಈತ ಯೋಜನೆ ರೂಪಿಸಿದ್ದನೇ ಎಂಬುದು ತಿಳಿದು ಬಂದಿಲ್ಲ. ಪ್ರಕರಣ ಸಂಬಂಧ ಯುಎಸ್ ಸೀಕ್ರೆಟ್ ಸರ್ವಿಸ್ ಮತ್ತು ಎಫ್‌ಬಿಐ ಜಂಟಿಯಾಗಿ ತನಿಖೆಯನ್ನು ಮುಂದುವರಿಸಿವೆ.

ಈ ಹಿಂದೆಯೂ ಟ್ರಂಪ್ ಅವರನ್ನು ಹತ್ಯೆಗೈಯುವ ವಿಫಲ ಯತ್ನಗಳು ನಡೆದಿದ್ದವು.

ಹತ್ಯೆ ಮಾಡುವುದಾಗಿ ಇರಾನ್‌ ಘೋಷಣೆ: 1,000 ಕ್ಷಿಪಣಿ ಸಜ್ಜಾಗಿವೆ ಎಂದ ಟ್ರಂಪ್ಮತ್ತೆ ಟ್ರಂಪ್ ಹತ್ಯೆ ಯತ್ನ? ಪ್ರೆಸ್ ಪಾಸ್‌ನೊಂದಿಗೆ ಗನ್ ತಂದಿದ್ದವನ ಬಂಧನ
Dailyhunt
Disclaimer: This content has not been generated, created or edited by Dailyhunt. Publisher: Prajavani