ನಟ ವಿಜಯ್ ದೇವರಕೊಂಡ ತಮಗೆ ಪ್ರಪೋಸ್ ಮಾಡಲು ಕಾಯದೆ, ತಾವೇ ಸ್ವತಃ ಒಂದು ವರ್ಷದವರೆಗೂ ಮದುವೆಯ ಪ್ರಸ್ತಾಪವಿಟ್ಟು ಅವರ ಮನವೊಲಿಸಿದ್ದಾಗಿ ನಟಿ ರಶ್ಮಿಕಾ ಮಂದಣ್ಣ ಬಹಿರಂಗಪಡಿಸಿದ್ದಾರೆ.
ಕರಣ್ ಜೋಹರ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ 'ಕಾಫಿ ವಿತ್ ಕರಣ್ 9' ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ, ವಿಜಯ್ ದೇವರಕೊಂಡ ಅವರಿಗೆ ಮದುವೆ ಆಗೋಣ ಅಂತ ಒಪ್ಪಿಸಿದ್ದ ಬಗ್ಗೆ ವಿವರಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಕರಣ್ ಜೋಹರ್ ಅವರು ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಭಾಗವಹಿಸಿದ್ದು, ತಮ್ಮ ವೈಯಕ್ತಿಕ ಜೀವನ, ಪ್ರೀತಿ, ಮದುವೆ ಹಾಗೂ ವೃತ್ತಿಜೀವನದ ಬಗ್ಗೆ ಕೆಲವೊಂದು ವಿಚಾರವನ್ನು ಕರಣ್ ಮುಂದೆ ಹಂಚಿಕೊಂಡಿದ್ದಾರೆ.
ವಿಜಯ್ ದೇವರಕೊಂಡ ಕಲಿತ ಶಾಲೆಗೆ ಭೇಟಿ ನೀಡಿ ರಶ್ಮಿಕಾ ಮಂದಣ್ಣ ಹೇಳಿದ್ದಿಷ್ಟು...ವಿಜಯ್-ರಶ್ಮಿಕಾ ನಟನೆಯ ʼರಣಬಾಲಿʼ ಗಳಿಕೆಯಲ್ಲಿ ಕುಸಿತ; 2ನೇ ದಿನ ಗಳಿಸಿದ್ದೆಷ್ಟು?ಬಿಡುಗಡೆಯಾದ ಪ್ರೋಮೊದಲ್ಲಿ ಕರಣ್ ಜೋಹರ್ ಅವರು ವಿಜಯ್‌ಗೆ, 'ನೀವು ಅಧಿಕೃತವಾಗಿ ಪ್ರೇಮ ನಿವೇದನೆ ಮಾಡಿದ್ದೀರಾ' ಎಂದು ಹೇಳಿದ್ದಾರೆ. ಆಗ ವಿಜಯ್ 'ಮದುವೆಯಾಗುವಂತೆ ಮೊದಲು ಪ್ರಸ್ತಾಪಿಸಿದ್ದು ರಶ್ಮಿಕಾ' ಎಂದಿದ್ದಾರೆ.
'ನಾವಿಬ್ಬರೂ ಮದುವೆ ಮಾಡಿಕೊಳ್ಳೋಣ' ಎಂದು ರಶ್ಮಿಕಾ ಮೊದಲು ಹೇಳಿದ್ದಳು. ಅದಕ್ಕೆ ನಾನು, ಸರಿ, ಈಗಾಗಲೇ ನೀನು ಇದನ್ನು ನೂರಾರು ಬಾರಿ ಕೇಳಿದ್ದೀಯಾ ಎಂದಿದ್ದೆ' ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ರಶ್ಮಿಕಾ, 'ವಿಜಯ್ ನನಗೆ ಪ್ರೇಮ ನಿವೇದನೆ ಮಾಡಲಿ ಎಂದು ನಾನು ಕಾಯಲಿಲ್ಲ. ಇಬ್ಬರೂ ಮದುವೆಯಾಗಲು ನಿರ್ಧರಿಸುವ ಮುನ್ನ, ಸತತ ಒಂದು ವರ್ಷ ನಾನೇ ಪದೇ ಪದೇ ಮದುವೆ ವಿಷಯವೆತ್ತಿ ಅವರನ್ನು ಒಪ್ಪಿಸಿದೆ' ಎಂದು ಹೇಳಿಕೊಂಡಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಭಾಗವಹಿಸಿರುವ 'ಕಾಫಿ ವಿತ್ ಕರಣ್' ಶೋನ ಈ ಸಂಚಿಕೆಗಳು ಅಕ್ಟೋಬರ್ 21ರಂದು ಪ್ರಸಾರ ಆಗಲಿದೆ. ಕಳೆದ ವರ್ಷ ಫೆ.26ರಂದು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ಜೋಡಿ ಕುಟುಂಬಸ್ಥರ ಸಮ್ಮುಖದಲ್ಲಿ ಉದಯಪುರದಲ್ಲಿ ಅದ್ದೂರಿಯಾಗಿ ಮದುವೆಯಾಗಿದರು.

