Dailyhunt Logo
  • Light mode
    Follow system
    Dark mode
    • Play Story
    • App Story
ವಿಜಯ್‌ ದೇವರಕೊಂಡ ಕಲಿತ ಶಾಲೆಗೆ ಭೇಟಿ ನೀಡಿ ರಶ್ಮಿಕಾ ಮಂದಣ್ಣ ಹೇಳಿದ್ದಿಷ್ಟು...

ವಿಜಯ್‌ ದೇವರಕೊಂಡ ಕಲಿತ ಶಾಲೆಗೆ ಭೇಟಿ ನೀಡಿ ರಶ್ಮಿಕಾ ಮಂದಣ್ಣ ಹೇಳಿದ್ದಿಷ್ಟು...

'ರಣಬಾಲಿ' ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ, ನಟ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಆಂಧ್ರಪ್ರದೇಶದ ಪುಟ್ಟಪರ್ತಿಗೆ ಭೇಟಿ ನೀಡಿದ್ದಾರೆ.

ವಿಜಯ್ ದೇವರಕೊಂಡ ಅವರು ಪುಟ್ಟಪರ್ತಿಯ ಶ್ರೀ ಸತ್ಯಸಾಯಿ ಹೈಯರ್ ಸೆಕೆಂಡರಿ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ.

ಮದುವೆಯಾದ ನಂತರ ಇದೇ ಮೊದಲ ಬಾರಿಗೆ ಅವರು ಪುಟ್ಟಪರ್ತಿಯ ಪ್ರಶಾಂತಿ ನಿಲಯ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.

ರಣಬಾಲಿ ಮೂಲಕ ತೆಲುಗಿಗೆ ಕಾಲಿಟ್ಟ ವೈಜನಾಥ್ ಬಿರಾದರ್: ಶಿಲ್ಪಿ ರಾಮಯ್ಯನಾಗಿ ಮಿಂಚು

ಈ ಕುರಿತು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ಅವರು, ಅಡಿಬರಹದಲ್ಲಿ ಭಾವುಕ ನುಡಿಗಳನ್ನು ಬರೆದುಕೊಂಡಿದ್ದಾರೆ.

ʼವಿಜಯ್ ಬೆಳೆದ ಸ್ಥಳ, ಅವರು ಓದಿದ ಶಾಲೆ ಮತ್ತು ಶಾಲೆಯ ದಿನಗಳ ಬಗ್ಗೆ ಕಥೆಗಳನ್ನು ಕೇಳಿದ್ದೆ. ಅವರ ಸ್ನೇಹಿತರೆಲ್ಲರೂ ಪುಟ್ಟಪರ್ತಿಯಲ್ಲಿ ಓದಿದವರೇ ಆಗಿದ್ದಾರೆ. ಹಾಗಾಗಿ ನಾನು ಅವರನ್ನು ಪ್ರೀತಿಯಿಂದ 'ಪರ್ತಿ ಬಾಯ್ಸ್, ಗರ್ಲ್ಸ್' ಎಂದು ಕರೆಯುತ್ತಿದ್ದೆ. ಕಾಲಕ್ರಮೇಣ ಅವರೂ ಕೂಡ ನನ್ನ ಅತ್ಯುತ್ತಮ ಸ್ನೇಹಿತರಾದರುʼ ಎಂದು ಬರೆದುಕೊಂಡಿದ್ದಾರೆ.

ರಣಬಾಲಿ ವೀಕ್ಷಿಸಿದ ಸಂದೀಪ್ ರೆಡ್ಡಿ ವಂಗಾ: ವಿಜಯ್ ದೇವರಕೊಂಡ ಬಗ್ಗೆ ಹೇಳಿದ್ದಿಷ್ಟು

ʼವಿಜಯ್‌ ಬಾಲ್ಯದ ದಿನಗಳನ್ನು ಕಳೆದ ಸ್ಥಳವನ್ನು ಇದುವರೆಗೆ ನೋಡಿರಲಿಲ್ಲವಾದ್ದರಿಂದ, ಜೀವನದಲ್ಲಿ ಏನೋ ಮುಖ್ಯವಾದ ವಿಷಯ ಅಪೂರ್ಣವಾಗಿರುವಂತೆ ಅನಿಸುತ್ತಿತ್ತು. ಕೊನೆಗೂ ಪುಟ್ಟಪರ್ತಿಗೆ ಭೇಟಿ ನೀಡುವ ಅವಕಾಶ ಲಭಿಸಿತು. ಅವರು ಓದಿದ ಶಾಲೆ, ಅವರ ತರಗತಿಗಳು ಹಾಗೂ ಹಾಸ್ಟೆಲ್ ಕೊಠಡಿಗಳನ್ನು ನೋಡಿದೆ. ಜತೆಗೆ ಹಲವರನ್ನು ಪ್ರೀತಿಯಿಂದ ಮಾತನಾಡಿಸಿದೆ. ಇದೇ ವೇಳೆ ʼಹೆಚ್.ಎಂ. ಆಂಟಿʼ ಅವರನ್ನು ಭೇಟಿಯಾದೆʼ ಎಂದು ತಿಳಿಸಿದ್ದಾರೆ.

ʼಹೆಚ್.ಎಂ. ಆಂಟಿ ಅವರು ಸೌಮ್ಯ ಸ್ವಭಾವದ ಒಳ್ಳೆಯ ವ್ಯಕ್ತಿಯಾಗಿದ್ದಾರೆ. ಇಲ್ಲಿಗೆ ಭೇಟಿ ನೀಡಿದ್ದು ನಿಜಕ್ಕೂ ಖುಷಿ ತಂದಿದೆ. ಈ ಸ್ಥಳವು ತುಂಬಾ ಸುಂದರವಾಗಿದೆʼ ಎಂದಿದ್ದಾರೆ.

ವಿಜಯ್‌ ಅವರ ಒಳ್ಳೆಯ ಗುಣಗಳ ಬಗ್ಗೆ ಹಂಚಿಕೊಂಡಿರುವ ರಶ್ಮಿಕಾ, ʼವಿಜಯ್‌ ಅವರಿಗಿರುವ ಒಳ್ಳೆಯ ಗುಣಗಳನ್ನು ಅವರು ಎಲ್ಲಿಂದ ಕಲಿತರು ಎಂದು ನಾನು ಯೋಚಿಸುತ್ತಿದ್ದೆ. ಅವರ ಶಾಲೆಗೆ ಭೇಟಿ ನೀಡಿದಾಗ ಅದಕ್ಕೆ ಉತ್ತರ ಸಿಕ್ಕಿತು. ನಾವು ಬಾಲ್ಯದಲ್ಲಿ ಜನರೊಂದಿಗೆ ಕಳೆಯುವ ಸಮಯ, ನಮ್ಮ ಪೋಷಕರು ಹಾಗೂ ಗುರುಗಳು ಕಲಿಸುವ ಪಾಠಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಇಲ್ಲಿನ ಪುಟ್ಟ ಮಕ್ಕಳ ಭಕ್ತಿಯನ್ನು ನೋಡಿ ನನ್ನ ಮನಸ್ಸು ತುಂಬಿ ಬಂತುʼ ಎಂದು ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani