Dailyhunt Logo
  • Light mode
    Follow system
    Dark mode
    • Play Story
    • App Story
ವಿದ್ಯಾರ್ಥಿಗಳು ಚಂಬಲ್‌ನ ಡಕಾಯಿತರೇ? ಪೊಲೀಸರ ಕ್ರಮಕ್ಕೆ ದೀಪ್ಕೆ ಪೋಷಕರ ಆಕ್ರೋಶ

ವಿದ್ಯಾರ್ಥಿಗಳು ಚಂಬಲ್‌ನ ಡಕಾಯಿತರೇ? ಪೊಲೀಸರ ಕ್ರಮಕ್ಕೆ ದೀಪ್ಕೆ ಪೋಷಕರ ಆಕ್ರೋಶ

ಛತ್ರಪತಿ ಸಂಭಾಜಿನಗರ: ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಚಂಬಲ್‌ನ ಡಕಾಯಿತರೇ ಎಂದು ಕಾಕ್ರೋಚ್‌ ಜನತಾ ಪಾರ್ಟಿಯ (ಸಿಜೆಪಿ) ಸಂಚಾಲಕ ಅಭಿಜಿತ್ ದೀಪ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಭಾರಿ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಿರುವುದನ್ನು ಪ್ರಶ್ನಿಸಿರುವ ಅವರು, ಸರ್ಕಾರ ಪ್ರಜಾಪ್ರಭುತ್ವಕ್ಕೆ ಬೆಲೆ ನೀಡುತ್ತಿಲ್ಲ ಎಂದು ಶನಿವಾರ ಆರೋಪಿಸಿದ್ದಾರೆ.

VIDEO| ಸಿಜೆಪಿ ಪ್ರತಿಭಟನೆಗೆ ಅಡ್ಡಿ; ದೀಪ್ಕೆ ಸೇರಿ ಪ್ರಮುಖರು ಪೊಲೀಸರ ವಶಕ್ಕೆ

ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸರು ಅಭಿಜಿತ್ ದೀಪ್ಕೆ, ಯೂಟ್ಯೂಬರ್ ಧ್ರುವ್ ರಾಠಿ ಸೇರಿದಂತೆ ಸುಮಾರು 1000 ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಜಂತರ್ ಮಂತರ್ ತಲುಪಲು ಪ್ರತಿಭಟನಾಕಾರರು ನಡೆಸಿದ ಪ್ರಯತ್ನಕ್ಕೆ ತಡೆಯೊಡ್ಡಿದ್ದಾರೆ.

'ದೆಹಲಿಯಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ಏಕೆ ನಿಯೋಜಿಸಲಾಗಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇದು ವಿದ್ಯಾರ್ಥಿಗಳ ಪ್ರತಿಭಟನೆ. ದೆಹಲಿಯಲ್ಲಿ ಚಂಬಲ್‌ನ ಡಕಾಯಿತರು ಇದ್ದಾರೆಯೇ? ಡಕಾಯಿತರು ಸಂಸತ್ತಿನಲ್ಲಿ ಕುಳಿತಿದ್ದಾರೆ' ಎಂದು ಅಭಿಜಿತ್ ಅವರ ತಂದೆ ಭಗವಾನ್ ದೀಪ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಜಿಂಕ್ಯ ಶಿಂದೆ ಹೆಗಲಿಗೆ ಜಂತರ್ ಮಂತರ್ ಪ್ರತಿಭಟನೆಯ ನೇತೃತ್ವ: ದೀಪ್ಕೆ ಘೋಷಣೆ

ಅನುಮತಿ ಪಡೆಯದೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದಾಗ, 'ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ಭಾರತೀಯನ ಕಾನೂನುಬದ್ಧ ಹಕ್ಕು. ಹಾಗಿರುವಾಗ ಅನುಮತಿ ಏಕೆ ಬೇಕು? ಸರ್ಕಾರದ ವಿರುದ್ಧದ ಪ್ರತಿಭಟನೆಯ ಮೂಲಕ ಅದರ ಕಾರ್ಯವೈಖರಿಯನ್ನು ಬಯಲಿಗೆಳೆಯಲು ಹೊರಟಾಗ, ಅದೇ ಸರ್ಕಾರ ಪ್ರತಿಭಟನೆಗೆ ಅನುಮತಿ ನೀಡುತ್ತದೆಯೇ? ಇಲ್ಲಿ ಅನುಮತಿಯ ಪ್ರಶ್ನೆಯೇ ಇಲ್ಲ' ಎಂದು ಹೇಳಿದ್ದಾರೆ.

'ನಾನು ನನ್ನ ಮಗನ್ನು ದೃಢವಾಗಿ ಬೆಂಬಲಿಸುತ್ತೇನೆ. ನನಗೆ ಆತ ಚಂದ್ರಶೇಖರ ಆಜಾದ್ ಮತ್ತು ಭಗತ್ ಸಿಂಗ್ ಇದ್ದಂತೆ' ಎಂದು ಅವರು ಹೇಳಿದ್ದಾರೆ.

ಅಭಿಜಿತ್ ತಾಯಿ ಅನಿತಾ ದೀಪ್ಕೆ ಕೂಡ ಪ್ರತಿಭಟನಾಕಾರರ ವಿರುದ್ಧದ ಪೊಲೀಸ್ ಕ್ರಮವನ್ನು ಖಂಡಿಸಿದ್ದಾರೆ. 'ಸರ್ಕಾರದ ಈ ಕ್ರಮ ತಪ್ಪು. ಇವರು ಏನು ಮಾಡಿದ್ದಾರೆಂದು ವಿಮಾನದಲ್ಲೇ ಅವರನ್ನು ವಶಕ್ಕೆ ಪಡೆದಿದ್ದಾರೆ? ಅತ್ಯಾಚಾರಿಗಳ ಮನೆಗಳಿಗೆ ಹೋಗಿ ಅವರನ್ನು ಬಂಧಿಸುತ್ತಾರೆಯೇ?' ಎಂದು ಪ್ರಶ್ನಿಸಿದ್ದಾರೆ.

ಚುನಾವಣಾ ಆಯೋಗದ ವಿರುದ್ಧ ಹೋರಾಟ: ಸಿಜೆಪಿಯ ದೀಪ್ಕೆ, ದಾಸ್, ರಾಂಕಾ ಪೊಲೀಸರ ವಶಕ್ಕೆ
Dailyhunt
Disclaimer: This content has not been generated, created or edited by Dailyhunt. Publisher: Prajavani