Dailyhunt Logo
  • Light mode
    Follow system
    Dark mode
    • Play Story
    • App Story
'ಯಾರೂ ಮುಖ್ಯರಲ್ಲ, ಅಮುಖ್ಯರೂ ಅಲ್ಲ' ಉಪಚುನಾವಣೆ ಫಲಿತಾಂಶ ಬಿಜೆಪಿಗೆ ನೀಡಿದ ಸಂದೇಶ

'ಯಾರೂ ಮುಖ್ಯರಲ್ಲ, ಅಮುಖ್ಯರೂ ಅಲ್ಲ' ಉಪಚುನಾವಣೆ ಫಲಿತಾಂಶ ಬಿಜೆಪಿಗೆ ನೀಡಿದ ಸಂದೇಶ

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

'ಯಾರೂ ಮುಖ್ಯರಲ್ಲ, ಅಮುಖ್ಯರೂ ಅಲ್ಲ' ಉಪಚುನಾವಣೆ ಫಲಿತಾಂಶ ಬಿಜೆಪಿಗೆ ನೀಡಿದ ಸಂದೇಶ

ಒಂದು ಸಾಲಿನಲ್ಲಿಉಪಚುನಾವಣಾ ಫಲಿತಾಂಶಗಳು ಮತದಾರರ ನಾಡಿಮಿಡಿತವನ್ನು ಪ್ರತಿಬಿಂಬಿಸುತ್ತಿದ್ದು, ಆಡಳಿತ ಪಕ್ಷಗಳಿಗೆ ನಿರ್ಲಕ್ಷ್ಯ ಮತ್ತು ಆತ್ಮತೃಪ್ತಿ ಅಪಾಯಕಾರಿ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿವೆ.

ಪ್ರಮುಖ ಪ್ರಶ್ನೋತ್ತರ


ಉಪಚುನಾವಣಾ ಫಲಿತಾಂಶ ಬಿಜೆಪಿ ಪಕ್ಷಕ್ಕೆ ನೀಡಿದ ಸಂದೇಶವೇನು?

ಉಪಚುನಾವಣೆಗಳಲ್ಲಿ ಆಡಳಿತ ಪಕ್ಷದ ಸೋಲು ಸಾಮಾನ್ಯವಲ್ಲ; ಇದು ಮತದಾರರು ಆಡಳಿತರೂಢ ಪಕ್ಷದ ಕಾರ್ಯವೈಖರಿ ಮತ್ತು ನಿರ್ಧಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂದೇಶವಾಗಿದೆ.


ಬಾಂಕೀಪುರ ಕ್ಷೇತ್ರದಲ್ಲಿ ಉಂಟಾದ ರಾಜಕೀಯ ಬದಲಾವಣೆಗೆ ಕಾರಣಗಳೇನು?

ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಬಾಂಕೀಪುರದಲ್ಲಿ, ಜನರು ಹೊಸ ರಾಜಕೀಯ ಪರ್ಯಾಯವನ್ನು ಹುಡುಕುತ್ತಿದ್ದು, ಪ್ರಶಾಂತ್ ಕಿಶೋರ್ ಅವರ 'ಜನ ಸುರಾಜ್' ಪಕ್ಷದ ಪ್ರಭಾವ ಹೆಚ್ಚಾಗಿರುವುದು ಈ ಫಲಿತಾಂಶಕ್ಕೆ ಕಾರಣವಾಗಿದೆ.


ಬಿಹಾರದ ರಾಜಕೀಯದಲ್ಲಿ ಆರ್‌ಜೆಡಿ ಮತ್ತು ಬಿಜೆಪಿ ಪಡೆದ ಪಾಠವೇನು?

ರಾಜಕೀಯದಲ್ಲಿ ನಿರ್ಲಕ್ಷ್ಯ ಅಥವಾ ಅತಿಯಾದ ಆತ್ಮತೃಪ್ತಿಗೆ ಬೆಲೆ ತೆರಬೇಕಾಗುತ್ತದೆ ಮತ್ತು ಮತದಾರರು ತಮ್ಮ ಅಸಮಾಧಾನವನ್ನು ನೇರ ಮತದಾನದ ಮೂಲಕ ವ್ಯಕ್ತಪಡಿಸಬಲ್ಲರು ಎಂಬುದನ್ನು ಪಕ್ಷಗಳು ಅರ್ಥಮಾಡಿಕೊಳ್ಳಬೇಕು.


ಮಧ್ಯಪ್ರದೇಶದ ಉಪಚುನಾವಣೆ ರಾಜಕೀಯ ನಾಯಕರಿಗೆ ಕಲಿಸಿದ ಪಾಠವೇನು?

ಹಿರಿಯ ನಾಯಕರನ್ನು ಬದಿಗಿರಿಸಿ ಹೊಸ ನಾಯಕತ್ವವನ್ನು ಆಯ್ಕೆ ಮಾಡುವ ಪ್ರಯೋಗಗಳು ಮತ್ತು ಆಂತರಿಕ ಸಂಘಟನಾತ್ಮಕ ನಿರ್ಧಾರಗಳು ಚುನಾವಣಾ ಫಲಿತಾಂಶಗಳ ಮೇಲೆ ನೇರ ಪ್ರಭಾವ ಬೀರುತ್ತವೆ.


ಮತದಾರರು ಸರ್ಕಾರಕ್ಕೆ ನೀಡುವ ಸಂದೇಶದ ಮಹತ್ವವೇನು?

ಮತದಾರರು ಸರ್ಕಾರಕ್ಕೆ ಆಡಳಿತದ ಬದಲಾವಣೆ ಅಥವಾ ಸುಧಾರಣೆಯ ಅಗತ್ಯವಿದೆ ಎಂಬ ಸಂದೇಶವನ್ನು ಮತಗಳ ಮೂಲಕ ನೀಡುತ್ತಾರೆ, ಇದನ್ನು ನಾಯಕತ್ವವು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ.

ಪ್ರಮುಖ ಅಂಕಿಅಂಶಗಳು

ಶೇ 60ಬಾಂಕೀಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದ ಮತಗಳ ಪಾಲು₹96 ಕೋಟಿಪ್ರಶಾಂತ್ ಕಿಶೋರ್ ಅವರ ಘೋಷಿತ ಆಸ್ತಿ ಮೌಲ್ಯ30,000ಬಿಜೆಪಿ ಗುಜರಾತ್ ಮಂಜಲ್‌ಪುರದಲ್ಲಿ ಗೆದ್ದ ಮತಗಳ ಅಂತರ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಸಾಮಾನ್ಯವಾಗಿ ಉಪಚುನಾವಣೆಗೆಳ ಫಲಿತಾಂಶಗಳು ನಿರೀಕ್ಷಿತವಾಗಿರುತ್ತದೆ. ಆಡಳಿತ ಪಕ್ಷಕ್ಕೆ ಅಧಿಕಾರ ಲಾಭ ಸಿಗುತ್ತದೆ. ಮತದಾರರೂ ಪ್ರಯೋಗಕ್ಕಿಂತ ಸ್ಥಿರತೆ ಕಾಯ್ದುಕೊಳ್ಳುವ ಮನಸ್ಸು ಮಾಡುತ್ತಾರೆ. ಹೀಗಾಗಿ ಉಪ ಚುನಾವಣೆಗಳಲ್ಲಿ ಆಡಳಿತ ಪಕ್ಷಕ್ಕೆ ಸೋಲು ಭಾರತದ ರಾಜಕೀಯದಲ್ಲಿ ಅಪರೂಪದ ಪ್ರಕರಣ. ಒಂದು ವೇಳೆ ಸೋಲಾದರೆ ಅದು ಅಂಕಿ ಸಂಖ್ಯೆಗಿಂತ ಹೆಚ್ಚಿನ ಸಂದೇಶ ಇರುತ್ತದೆ.

ನಿನ್ನೆ (ಆಗಸ್ಟ್ 3) ರಂದು ಪ್ರಕಟಗೊಂಡ ಉಪಚುನಾವಣೆ ಫಲಿತಾಂಶದಲ್ಲಿ, ಗುಜರಾತ್‌ನ ಮಂಜಲ್‌ಪುರ ವಿಧಾನಸಭಾ ಕ್ಷೇತ್ರವನ್ನು 30 ಸಾವಿರ ಮತಗಳಿಂದ ಗೆಲ್ಲುವ ಮೂಲಕ ಬಿಜೆಪಿ ಉಳಿಸಿಕೊಂಡಿದೆ. ಇದು ನಿರೀಕ್ಷಿತ ಫಲಿತಾಂಶ. ಆದರೆ ನಿಜವಾದ ರಾಜಕೀಯ ಕಥೆ ಇರುವುದು ಇನ್ನೆರಡು ಕ್ಷೇತ್ರಗಳ ಫಲಿತಾಂಶದಲ್ಲಿ. ಅಲ್ಲಿ ಆಡಳಿತರೂಢ ಬಿಜೆಪಿಗೆ ಆಘಾತ ಎದುರಾಗಿದೆ.

ಪಟ್ನಾದ ಹೃದಯ ಭಾಗದಲ್ಲಿರುವ ಬಾಂಕೀಪುರ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿತ್ತು. ಮೇಲ್ಜಾತಿ ಹಾಗೂ ಮಧ್ಯಮ ವರ್ಗದ ಮತದಾರರೇ ಹೆಚ್ಚಿರುವ ಈ ಕ್ಷೇತ್ರವು 1995ರಿಂದ ಬಿಜೆಪಿ ತೆಕ್ಕೆಯಲ್ಲೇ ಇತ್ತು. ಈ ಕ್ಷೇತ್ರವನ್ನು ಈಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಅದಕ್ಕಿಂತ ಮುನ್ನ ಅವರ ತಂದೆ ಪ್ರತಿನಿಧಿಸುತ್ತಿದ್ದರು. 2015ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ನವೀನ್ ಐದನೇ ಬಾರಿ ಗೆದ್ದಿದ್ದರು. ಶೇ 60ಕ್ಕಿಂತ ಮತಗಳನ್ನು ಪಡೆದಿದ್ದರು.

ಕೇವಲ 8 ತಿಂಗಳಲ್ಲೇ ಮತದಾರರ ಮನೋಭಾವ ಬಿಜೆಪಿ ವಿರುದ್ಧವಾಗಿ ಬದಲಾಗಿದೆ ಎನ್ನುವುದು ದೊಡ್ಡ ರಾಜಕೀಯ ತಿರುವು. ಮತದಾನ ಪ್ರಮಾಣ ಕಡಿಮೆಯಾಗಿರುವುದೇ ಇದಕ್ಕೆ ಕಾರಣ ಎನ್ನಲು ಸಾಧ್ಯವಿಲ್ಲ. ಏಕೆಂದರೆ 2006ರಲ್ಲಿ ತಮ್ಮ ತಂದೆಯ ನಿಧನದ ಬಳಿಕ ನವೀನ್ ಸ್ಪರ್ಧಿಸಿದ್ದಾಗ (ಆಗ ಪಟ್ನಾ ಪೂರ್ವ ಕ್ಷೇತ್ರ) ಶೇ 20ರಷ್ಟೇ ಮತದಾನವಾಗಿತ್ತು. ಆಗ ಬಿಜೆಪಿಗೆ ಶೇ 80ರಷ್ಟು ಮತಗಳು ಬಿದ್ದಿದ್ದವು.

ಜಂತರ್‌ ಮಂತರ್‌ನಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿಗಳ ಹೋರಾಟವು ಕೂಡ ಬಾಂಕೀಪುರದಲ್ಲಿ ಪ್ರಶಾಂತ್ ಕಿಶೋರ್ ಅವರ ಗೆಲುವಿಗೆ ಕಾರಣವಾಗಿರಬಹುದು. 2025ರ ವಿಧಾನಸಭೆ ಚುನಾವಣೆಯಲ್ಲಿ ಜನ ಸುರಾಜ್ ಪಕ್ಷವನ್ನು ತಿರಸ್ಕರಿಸಿದ್ದ ಮತದಾರರು, ಈ ಬಾರಿ ಅವರ ಪ‍್ರಯತ್ನ ಕಂಡು ಮಣೆ ಹಾಕಿದ್ದಾರೆ. ದಶಕಗಳಿಂದ ಜಾತಿ ಲೆಕ್ಕಾಚಾರವೇ ರಾಜಕೀಯವನ್ನು ನಿರ್ಧರಿಸುತ್ತಿರುವ ಬಿಹಾರದಲ್ಲಿ, ಜನರು ಈಗ ಹೊಸ ರಾಜಕೀಯ ದಾರಿಯನ್ನು ಹುಡುಕುತ್ತಿರುವ ಸೂಚನೆಗಳು ಕಾಣಿಸುತ್ತಿವೆ.

ಈ ಚುನಾವಣೆಯ ಫಲಿತಾಂಶದ ಸಂದೇಶ ಮತದಾರರು ನೇರವಾಗಿ ಬಿಜೆಪಿಗೆ ನೀಡಿದಂತಿದೆ. ಚುನಾವಣಾ ಫಲಿತಾಂಶವನ್ನು ಆಡಳಿತರೂಢ ಪಕ್ಷ ಗೌರವಿಸಬೇಕು ಎನ್ನುವ ಸಂದೇಶ ಮತದಾರ ರವಾನಿಸಿದಂತಿದೆ.

2025ರ ಚುನಾವಣೆಯಲ್ಲಿ ಆರ್‌ಜೆಡಿಯ ತೇಜಸ್ವಿ ಯಾದವ್ ವಿರುದ್ಧವಾಗಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಮತದಾರರು ಜನಾದೇಶ ನೀಡಿದ್ದರು. ಆದರೆ ಕೆಲವೇ ತಿಂಗಳಲ್ಲಿ ನಿತೀಶ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿ, ರಾಜ್ಯಸಭೆಗೆ ಕಳುಹಿಸಲಾಯಿತು. ಆ ಮೂಲಕ ರಾಜ್ಯದಲ್ಲಿ ತನ್ನ ಮುಖ್ಯಮಂತ್ರಿಯನ್ನು ನೇಮಿಸಬೇಕು ಎನ್ನುವ ಬಹುಕಾಲದ ಆಸೆಯನ್ನು ಬಿಜೆಪಿ ಈಡೇರಿಸಿಕೊಂಡಿತು.

ನಿತೀಶ್ ಕುಮಾರ್ ಅವರ ಜಾಗಕ್ಕೆ ಬಿಜೆಪಿ‍-ಆರ್‌ಎಸ್‌ಎಸ್‌ನಲ್ಲಿ ಬೆಳೆದ ನಾಯಕನಿಗೆ ಬದಲಾಗಿ, ಆರ್‌ಜೆಡಿಯಿಂದ ರಾಜಕೀಯ ಆರಂಭಿಸಿದ್ದ ಸಾಮ್ರಾಟ್ ಚೌಧರಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು.

ಪ್ರಶಾಂತ್ ಕಿಶೋರ್ ಆಸ್ತಿ ಮೌಲ್ಯ ₹96 ಕೋಟಿ: ಚುನಾವಣಾ ಅಫಿಡವಿಟ್‌ನಲ್ಲಿ ಉಲ್ಲೇಖ

ಇದು ಒಂದೇ ರಾಜ್ಯದಲ್ಲಿ ನಡೆದ ಘಟನೆ ಅಲ್ಲ. ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರ ಸೇರಿ ಹಲವು ರಾಜ್ಯಗಳಲ್ಲಿ ಬಿಜೆಪಿ ಮುಖ್ಯಮಂತ್ರಿಗಳಾದವರು ತಮ್ಮ ರಾಜಕೀಯ ಜೀವನವನ್ನು ಬೇರೆ ಪಕ್ಷಗಳಿಂದಲೇ ಆರಂಭಿಸಿದ್ದರು. 2022ರಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆ ವಿಭಜನೆಯಾದ ಬಳಿಕ, ಬಿಜೆಪಿ ದೇವೇಂದ್ರ ಫಡಣವೀಸ್ ಬದಲಿಗೆ ಏಕನಾಥ ಶಿಂದೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಫಡಣವೀಸ್ ಮತ್ತೆ ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡರು.

ಬಾಂಕೀಪುರ ಉಪಚುನಾವಣೆಯ ಫಲಿತಾಂಶ ತೇಜಸ್ವಿ ಯಾದವ್ ಮತ್ತು ಆರ್‌ಜೆಡಿಗೂ ಪ್ರಮುಖ ಸಂದೇಶ ನೀಡಿದೆ. ರಾಜಕೀಯದಲ್ಲಿ ನಿರ್ಲಕ್ಷ್ಯ ಅಥವಾ ಆತ್ಮತೃಪ್ತಿಗೆ ಬೆಲೆ ತೆರಬೇಕಾಗುತ್ತದೆ. ರಾಜಕೀಯದಲ್ಲಿ ಖಾಲಿ ಜಾಗವನ್ನು ಹೆಚ್ಚು ದಿನ ಹಾಗೇ ಉಳಿಯುವುದಿಲ್ಲ, ಯಾರಾದರೂ ಅದನ್ನು ತುಂಬುತ್ತಾರೆ.

ಮಧ್ಯಪ್ರದೇಶದ ದತಿಯಾ ಉಪಚುನಾವಣೆ ಮತ್ತೊಂದು ಪಾಠ ಕಲಿಸಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಗೃಹ ಸಚಿವ ನರೋತ್ತಮ್ ಮಿಶ್ರ ಅವರನ್ನು ಕಣಕ್ಕಿಳಿಸಿದ್ದರೂ ಬಿಜೆಪಿ ದತಿಯಾ ಕ್ಷೇತ್ರದಲ್ಲಿ ಸೋತಿತ್ತು.

ಸಾಮ್ರಾಟ್ ಚೌಧರಿಯವರಿಗಿಂತ ಭಿನ್ನವಾಗಿ, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಬಿಜೆಪಿಯ ಸಂಘಟನೆಯಲ್ಲಿ ಬೆಳೆದು ಬಂದ ನಾಯಕ. ಆದರೆ ಮೋಹನ್ ಯಾದವ್ ಹಾಗೂ ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾರನ್ನು-ಶಿವರಾಜ್ ಸಿಂಗ್ ಚೌಹಾಣ್ ಮತ್ತು ವಸುಂಧರಾ ರಾಜೆ ಅವರಂತಹ ಹಿರಿಯರನ್ನು ಬದಿಗಿಟ್ಟು ಆಯ್ಕೆ ಮಾಡಲಾಗಿತ್ತು. ಈಗ ಅವರು ತಮ್ಮ ರಾಜಕೀಯ ಸಾಮರ್ಥ್ಯವನ್ನು ಚುನಾವಣಾ ಫಲಿತಾಂಶಗಳ ಮೂಲಕ ಸಾಬೀತುಪಡಿಸಬೇಕಾಗುತ್ತದೆ.

ಕ್ಷಮೆ ಎಂದರೆ ಸೋಲಲ್ಲ... ನಿಮ್ಮ ಮನಸ್ಸಿನ ಗೆಲುವು!

ಭಾರತದ ಉಪಚುನಾವಣೆಗಳ ಇತಿಹಾಸಕ್ಕೆ ಮರಳಿದರೆ, ಅಚ್ಚರಿಯ ಫಲಿತಾಂಶಗಳಲ್ಲಿ ಅತ್ಯಂತ ಗಮನಾರ್ಹದ್ದು 1973ರ ಮಧ್ಯಪ್ರದೇಶದ ಜಬಲ್ಪುರ ಲೋಕಸಭೆ ಉಪಚುನಾವಣೆ. ಇಂದಿರಾ ಗಾಂಧಿ ವಿರೋಧಿ ಪಕ್ಷಗಳ ಬೆಂಬಲ ಪಡೆದಿದ್ದ ಯುವ ನಾಯಕ ಶರದ್ ಯಾದವ್, ಕಾಂಗ್ರೆಸ್‌ನ ಹಿರಿಯ ನಾಯಕ ಸೇಠ್ ಗೋವಿಂದ್ ದಾಸ್ ಅವರ ಮಗನನ್ನು ಸೋಲಿಸಿ ಅಚ್ಚರಿ ಗೆಲುವು ಸಾಧಿಸಿದ್ದರು.

ಸಾಧ್ಯವಾದಾಗಲೆಲ್ಲ ಮತದಾರರು ಆಡಳಿತಗಾರರಿಗೆ ಯಾವ ವಿಷಯಗಳಲ್ಲಿ ಬದಲಾವಣೆ ಅಗತ್ಯವಿದೆ ಎಂಬ ಸಂದೇಶವನ್ನು ತಮ್ಮ ಮತದ ಮೂಲಕ ನೀಡುತ್ತಾರೆ. ಆ ಸಂದೇಶವನ್ನು ಗಂಭೀರವಾಗಿ ಪರಿಗಣಿಸಬೇಕೋ ಅಥವಾ ಕಡೆಗಣಿಸಬೇಕೋ ಎಂಬುದನ್ನು ತೀರ್ಮಾನಿಸಬೇಕಾಗಿರುವುದು ನಾಯಕತ್ವ.

Bankipur Bypoll Results: ಬಿಜೆಪಿ ಭದ್ರಕೋಟೆ ಭೇದಿಸಿದ ಪ್ರಶಾಂತ್‌ ಕಿಶೋರ್‌
Dailyhunt
Disclaimer: This content has not been generated, created or edited by Dailyhunt. Publisher: Prajavani