ಟೆಹರಾನ್: ಯುದ್ಧವೆಂದರೆ ಗುಂಡಿನ ಸದ್ದಷ್ಟೇ ಅಲ್ಲ, ಅದೆಷ್ಟೋ ಮುಗ್ಧ ಜೀವಗಳ ಕನಸುಗಳನ್ನು, ಆತ್ಮಗೌರವವನ್ನು ಸದ್ದಿಲ್ಲದೆ ಸುಟ್ಟು ಬೂದಿ ಮಾಡುವ ಮಹಾಮಾರಿ.
ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ ಯುದ್ಧ ಆರನೇ ತಿಂಗಳಿಗೆ ಕಾಲಿಡುತ್ತಿದ್ದಂತೆ ಇಂದು ಇರಾನ್ ಬೀದಿ ಬೀದಿಗಳಲ್ಲಿ ರಕ್ತಕ್ಕಿಂತ ಹೆಚ್ಚಾಗಿ ಕಣ್ಣೀರು ಹರಿಯುತ್ತಿದೆ.
ಹಸಿವು ಮತ್ತು ಬದುಕಿನ ಉಳಿವಿಗಾಗಿ ಅಲ್ಲಿನ ಸಾಮಾನ್ಯ ಜನರು ನಡೆಸುತ್ತಿರುವ ಹೋರಾಟ ಎಂತಹವರ ಕಲ್ಲು ಹೃದಯವನ್ನೂ ಕರಗಿಸುವಂತಿದೆ.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಯುದ್ಧಪೀಡಿತ ಇರಾನ್ ಜನರ ಕಣ್ಣೀರ ಕಥೆ: ಜೀವನಕ್ಕೆ ಕೂದಲು, ಹಳೆ ಬಟ್ಟೆ ಮಾರಾಟ
ಒಂದು ಸಾಲಿನಲ್ಲಿಇರಾನ್-ಅಮೆರಿಕ ಯುದ್ಧದ ಪರಿಣಾಮವಾಗಿ ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದು, ಜನರು ಮೂಲಭೂತ ಅಗತ್ಯಗಳಿಗಾಗಿ ತಮ್ಮ ವೈಯಕ್ತಿಕ ವಸ್ತುಗಳನ್ನು ಮಾರಾಟ ಮಾಡುವ ದುಸ್ಥಿತಿ ತಲುಪಿದ್ದಾರೆ.
ಏನು? ಏಕೆ? ಹೇಗೆ?
ಇರಾನ್ ಜನರ ಪ್ರಸ್ತುತ ಆರ್ಥಿಕ ಸ್ಥಿತಿ ಹೇಗಿದೆ?
ಯುದ್ಧದ ಪರಿಣಾಮವಾಗಿ ಇರಾನ್‌ನಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದ್ದು, ಸಾಮಾನ್ಯ ಜನರು ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಪರದಾಡುತ್ತಿದ್ದಾರೆ.
ಜನರು ಜೀವನ ನಿರ್ವಹಣೆಗೆ ಯಾವ ಮಾರ್ಗಗಳನ್ನು ಹಿಡಿದಿದ್ದಾರೆ?
ಹೊಟ್ಟೆ ಪಾಡಿಗಾಗಿ ಜನರು ತಮ್ಮ ತಲೆ ಕೂದಲು, ಹಳೆಯ ಬಟ್ಟೆಗಳು, ಬಳಸಿದ ಸುಗಂಧ ದ್ರವ್ಯದ ಬಾಟಲಿಗಳು ಮತ್ತು ಶೂಗಳಂತಹ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ.
ದೇಶದಲ್ಲಿ ಹಣದುಬ್ಬರದ ಪ್ರಮಾಣ ಎಷ್ಟು ಹೆಚ್ಚಾಗಿದೆ?
ಇರಾನ್ ಸರ್ಕಾರದ ಅಂಕಿಅಂಶಗಳ ಪ್ರಕಾರ, ಜುಲೈ ಅಂತ್ಯದ ವೇಳೆಗೆ ದೇಶದಲ್ಲಿ ಹಣದುಬ್ಬರ ಪ್ರಮಾಣ ಶೇ 66 ರಷ್ಟು ತಲುಪಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.
ಆರೋಗ್ಯ ರಕ್ಷಣೆಗೆ ಜನರಿಗೆ ಸಾಧ್ಯವಾಗುತ್ತಿದೆಯೇ?
ಆರ್ಥಿಕ ಬಿಕ್ಕಟ್ಟಿನಿಂದಾಗಿ ವೈದ್ಯಕೀಯ ವೆಚ್ಚಗಳು ಮತ್ತು ಔಷಧಿಗಳ ಖರೀದಿಯನ್ನು ಕಂತುಗಳ ಮೂಲಕ ಪಾವತಿಸುವಂತಹ ಅನಿವಾರ್ಯ ಪರಿಸ್ಥಿತಿ ಜನರಿಗೆ ಎದುರಾಗಿದೆ.
ಯುದ್ಧದ ಪರಿಸ್ಥಿತಿ ಅಂತ್ಯಗೊಳ್ಳುವ ಸಾಧ್ಯತೆ ಇದೆಯೇ?
ಅಮೆರಿಕ ಮತ್ತು ಇರಾನ್ ನಡುವೆ ಯಾವುದೇ ಮಾತುಕತೆ ನಡೆಯುತ್ತಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದ್ದು, ಅಮಾಯಕ ನಾಗರಿಕರು ಅತಂತ್ರ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ.
ಪ್ರಮುಖ ಅಂಕಿಅಂಶಗಳು
ಶೇ 66ಜುಲೈ ಅಂತ್ಯದ ಹಣದುಬ್ಬರ ದರಆರನೇ ತಿಂಗಳುಯುದ್ಧದ ಅವಧಿ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಇರಾನ್‌ನ ಮಧ್ಯಮ ಮತ್ತು ಕೆಳ ವರ್ಗದ ಕುಟುಂಬಗಳು ನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ತೀವ್ರ ಹೆಣಗಾಡುತ್ತಿವೆ. ಒಂದು ಹೊತ್ತಿನ ಊಟಕ್ಕಾಗಿ, ಮಗುವಿನ ಹಾಲಿನ ಡಬ್ಬಿಗಾಗಿ, ವೃದ್ಧರ ಔಷಧಕ್ಕಾಗಿ ಮನೆಗಳಲ್ಲಿ ಇಂದು ಹರಾಜಿನ ಕೂಗು ಕೇಳಿಸುತ್ತಿದೆ. ಅಂದ ಹೆಚ್ಚಿಸುವ ತಲೆ ಕೂದಲನ್ನು ಕತ್ತರಿಸಿ ಮಾರಿಕೊಳ್ಳುವ ತಾಯಂದಿರು, ನೆನಪಿನ ಅಂಗಳದಲ್ಲಿದ್ದ ಹಳೆಯ ಸುಗಂಧ ದ್ರವ್ಯದ ಖಾಲಿ ಬಾಟಲಿಗಳು, ಹಳೆಯ ಶೂಗಳು ಮತ್ತು ತೊಟ್ಟ ಬಟ್ಟೆಗಳನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಡುತ್ತಿರುವುದು ಮತ್ತು ವೈಯಕ್ತಿಕ ವಸ್ತುಗಳನ್ನು ಬಾಡಿಗೆಗೆ ನೀಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ದೃಶ್ಯಗಳು ನಮ್ಮ ಎದೆ ಹಿಂಡುತ್ತಿವೆ ಎಂದು ಸ್ಥಳೀಯರು ಹೇಳಿರುವುದನ್ನು ಉಲ್ಲೇಖಿಸಿ ಇರಾನ್‌ನ ಪ್ರಮುಖ ಸುದ್ದಿ ಸಂಸ್ಥೆ ಐಎಲ್‌ಎನ್‌ಎ ವರದಿ ಮಾಡಿದೆ.
ದೇಶದಲ್ಲಿ ಎದುರಾಗಿರುವ ಬೃಹತ್ ಆರ್ಥಿಕ ಬಿಕ್ಕಟ್ಟಿನ ನಡುವೆ 'ಉಳಿವಿಗಾಗಿ ಆರ್ಥಿಕತೆ' ಸೃಷ್ಟಿಯಾಗಿದೆ ಎಂದು 'ಐಎಲ್‌ಎನ್‌ಎ' (ILNA) ವರದಿ ಮಾಡಿದೆ. ಆನ್‌ಲೈನ್ ಕ್ಲಾಸಿಫೈಡ್ ವೆಬ್‌ಸೈಟ್‌ಗಳಲ್ಲಿ ಹಳೆಯ ಬಟ್ಟೆ, ಕೆಲಸದ ಶೂಗಳು, ಉಪಯೋಗಿಸಿದ ಸುಗಂಧ ದ್ರವ್ಯದ ಬಾಟಲಿಗಳು ಹಾಗೂ ಕೂದಲನ್ನು ಮಾರಾಟಕ್ಕಿಡುತ್ತಿರುವ ಜಾಹೀರಾತುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿವೆ.
ಪೈಸೆ ಪೈಸೆಯೂ ಮುಖ್ಯ...
ಬೆಲೆ ಏರಿಕೆಯಿಂದ ತತ್ತರಿಸಿರುವ ಕುಟುಂಬಗಳಿಗೆ ಸಣ್ಣ ಪ್ರಮಾಣದ ಆದಾಯವೂ ಅತ್ಯಂತ ನಿರ್ಣಾಯಕವಾಗಿದೆ. ತಲೆ ಕೂದಲಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದ್ದು, ಕೂದಲಿನ ಉದ್ದ, ಬಣ್ಣ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ಸಾವಿರಾರು ಇರಾನಿ ರಿಯಾಲ್‌ಗಳಿಗೆ ಮಾರಾಟವಾಗುತ್ತಿವೆ. ಇವುಗಳನ್ನು ವಿಗ್, ಕೇಶ ನಾವೀನ್ಯತೆಗೆ ಬಳಸಲಾಗುತ್ತಿದೆ.
ಉಪಯೋಗಿಸಿದ ಬಳಿಕ ಎಸೆಯಲಾಗುವ ಖಾಲಿ ಸುಗಂಧ ದ್ರವ್ಯದ ಬಾಟಲಿಗಳು ಹಾಗೂ ಸಣ್ಣ ಪುಟ್ಟ ವಸ್ತುಗಳನ್ನು ಒಟ್ಟಾಗಿ ಸೇರಿಸಿ ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಡಲಾಗುತ್ತಿದೆ. ಇನ್ನೊಂದೆಡೆ, ಆಫೀಸ್ ಕೆಲಸ ಮತ್ತು ಆನ್‌ಲೈನ್ ತರಗತಿಗಳಿಗಾಗಿ ಲ್ಯಾಪ್‌ಟಾಪ್‌ಗಳನ್ನು ಬಾಡಿಗೆಗೆ ಪಡೆಯುವ ಪ್ರವೃತ್ತಿ ಹೆಚ್ಚಾಗಿದೆ. ಜನರು ಲ್ಯಾಪ್‌ಟಾಪ್‌ಗಳನ್ನು ಖರೀದಿಸುವ ಬದಲು, ಅಗತ್ಯವಿದ್ದಾಗ ಬಾಡಿಗೆಗೆ ಪಡೆದು ಕೆಲಸ ಮುಗಿದ ನಂತರ ಹಿಂತಿರುಗಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಹಣದುಬ್ಬರ ಹೆಚ್ಚಳ...
ಜುಲೈ ಅಂತ್ಯದ ವೇಳೆಗೆ ದೇಶದ ಹಣದುಬ್ಬರ ಪ್ರಮಾಣ ಶೇ 66 ರಷ್ಟಿದೆ ಎಂದು ಇರಾನ್ ಸರ್ಕಾರದ ಅಂಕಿ ಅಂಶಗಳನ್ನು ಉಲ್ಲೇಖಿಸಿ ಐಎಲ್‌ಎನ್‌ಎ ವರದಿ ಮಾಡಿದೆ. ಯುದ್ಧದ ಪರಿಸ್ಥಿತಿ ಹೀಗೆ ಮುಂದುವರೆದರೆ ಹಣದುಬ್ಬರ ಮತ್ತಷ್ಟು ಹೆಚ್ಚಾಗಲಿದೆ ಎಂದು ವರದಿ ಹೇಳಿದೆ. ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದ್ದು, ಜನರ ಖರೀದಿ ಸಾಮರ್ಥ್ಯ ತೀವ್ರ ಕುಸಿದಿದೆ. ಹೀಗಾಗಿ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಯನ್ನು ಮುಂದೂಡಿ, ಹಳೆಯ ವಸ್ತುಗಳನ್ನು ಕೊಳ್ಳುವುದು ಅಥವಾ ಬಾಡಿಗೆಗೆ ಪಡೆಯುವಂತಹ ನಿರ್ಧಾರಗಳಿಗೆ ಮೊರೆ ಹೋಗುತ್ತಿದ್ದಾರೆ.
ಆರೋಗ್ಯ ಕ್ಷೇತ್ರಕ್ಕೂ ಬಿಕ್ಕಟ್ಟು...
ಸಾರ್ವಜನಿಕರ ಆರ್ಥಿಕ ಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ವೈದ್ಯಕೀಯ ವೆಚ್ಚಗಳು ಮತ್ತು ಔಷಧಿಗಳ ಖರೀದಿಯನ್ನು ಕಂತುಗಳ ಮೂಲಕ ಪಾವತಿಸುವ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವರದಿ ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆಗೆ ಶಾಂತಿ ಮಾತುಕತೆ ಮೂಲಕ ಯುದ್ಧ ಮುಕ್ತಾಯಗೊಳಿಸುವುದಾಗಿ ಹೇಳುತ್ತಿದ್ದಾರೆ. ಇತ್ತ ಸೌದಿ ಅರೇಬಿಯಾ, ಯುಎಇ, ಕತಾರ್ ದೇಶಗಳು ಮಾತುಕತೆಗೆ ಮನವಿ ಮಾಡಿವೆ. ಆದಾಗ್ಯೂ ಇರಾನ್ ಮಾತ್ರ ಅಮೆರಿಕದೊಂದಿಗೆ ಯಾವುದೇ ಮಾತುಕತೆ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಿದ್ಧಾಂತ, ಅಹಂ ಮತ್ತು ರಾಜಕೀಯ ಮೇಲಾಟಗಳಿಗೆ ಬಲಿಯಾಗಿ, ನರಕಯಾತನೆ ಅನುಭವಿಸುತ್ತಿರುವವರು ಮಾತ್ರ ಅಮಾಯಕ ನಾಗರಿಕರು. ಇರಾನ್‌ನ ಪ್ರತಿ ಮನೆಯಲ್ಲೂ ನಾಳೆ ಬದುಕುಳಿಯುತ್ತೇವೆಯೇ? ಎಂಬ ಆತಂಕದ ಪ್ರಶ್ನೆ ಮನೆ ಮಾಡಿದೆ. ಯುದ್ಧದ ಬವಣೆಗಳು, ವಿನಾಶಕ್ಕೆ ಇಲ್ಲಿನ ಜನರ ಕಣ್ಣೀರು ಸಾಕ್ಷಿಯಾಗಿದೆ ಎಂದು ಯುದ್ಧ ಮತ್ತು ಆರ್ಥಿಕತೆ ಬಗ್ಗೆ ವಿಶ್ಲೇಷಣೆ ಮಾಡುವ ಜಾಗತಿಕ ತಜ್ಞರು ಹೇಳಿದ್ದಾರೆ.
ಯುದ್ಧ ಇನ್ನೂ ಮುಗಿದಿಲ್ಲ: ಇರಾನ್‌ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆಇರಾನ್ ಮತ್ತು ಅಮೆರಿಕ: ಯುದ್ಧ ಕೊನೆಗೊಳಿಸಿ; ಪಾಕ್
