Dailyhunt Logo
  • Light mode
    Follow system
    Dark mode
    • Play Story
    • App Story
ಕವಲೆತ್ತು ಜಾಕ್‍ವೆಲ್‍ನಲ್ಲಿ ವಿದ್ಯುತ್ ಕಂಬ ಮತ್ತು ಪರಿಕರಗಳ ಸ್ಥಳಾಂತರ: ನೀರು ಪೂರೖಕೆಯಲ್ಲಿ ವ್ಯತ್ಯಯ

ಕವಲೆತ್ತು ಜಾಕ್‍ವೆಲ್‍ನಲ್ಲಿ ವಿದ್ಯುತ್ ಕಂಬ ಮತ್ತು ಪರಿಕರಗಳ ಸ್ಥಳಾಂತರ: ನೀರು ಪೂರೖಕೆಯಲ್ಲಿ ವ್ಯತ್ಯಯ

Suddikshana 2 weeks ago

ದಾವಣಗೆರೆ: ಹರಿಹರ ನಗರಸಭಾ ವ್ಯಾಪ್ತಿಯಲ್ಲಿ ಕೆಯುಐಡಿಎಫ್‍ಸಿ-ಕ್ವಿಮಿಪ್-ಪಿಐಯು ಜಲಸಿರಿ ಯೋಜನೆಯಡಿ ಕೈಗೊಂಡಿರುವ 24*7 ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯ ಕವಲೆತ್ತು ಗ್ರಾಮದ ಹತ್ತಿರ ಇರುವ ತುಂಗಾಭದ್ರ ನದಿಯ ಪಾತ್ರದಲ್ಲಿರುವ ಜಾಕ್‍ವೆಲ್‍ನ ಸ್ಥಳದಲ್ಲಿರುವ ವಿದ್ಯುತ್ ಕಂಬ ಮತ್ತು ಪರಿಕರಣಗಳನ್ನು ಹರಿಹರ ನಗರಸಭೆ ವತಿಯಿಂದ ಸ್ಥಳಾಂತರಿಸುವ ಕಾಮಗಾರಿಯನ್ನು ಆಗಸ್ಟ್ 29 ರಂದು ಬೆಳಿಗ್ಗೆ 9 ಸಂಜೆ 6 ಗಂಟೆಯವರೆಗೆ ಕೈಗೊಳ್ಳಲಾಗಿದೆ.

ಆದ ಕಾರಣ ಈ ಸಮಯದಲ್ಲಿ ನಗರಕ್ಕೆ ಬೆಳ್ಳಗ್ಗೆ ನಿರಂತರ ನೀರು ಸರಬರಾಜು ಪೂರೈಕೆ ಇರುವುದಿಲ್ಲ. ಕಾರಣ ಸಾರ್ವಜನಿಕರು ಸಹಕರಿಸಲು ಹಾಗೂ ನೀರು ಸರಬರಾಜು ಮಾಡಿದ ಸಂದರ್ಭದಲ್ಲಿ ನೀರನ್ನು ವ್ಯರ್ಥ ಮಾಡದೆ ಮಿತವಾಗಿ ಬಳಸಿ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಹಾಗು ಕಡ್ಡಾಯವಾಗಿ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕೆಂದು ಹರಿಹರ ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Suddikshana